Monday, December 26, 2016

ನಗು - ಅಳು

ನಗು : ಅವಳ ನಗು, ಹೂ ಮಲ್ಲಿಗೆ
ಕಂಪನು ಸೂಸುವ ಕೆಂಡಸಂಪಿಗೆ !!
ಅಳು : ಅವಳ ಅಳು, ಮನ ಚುಚ್ಚುವ ಮುಳ್ಳು
ಹೃದಯ ಹಿಂಡುವ ನೋವು !!

Friday, October 28, 2016

ದೀಪಾವಳಿ


ನಲ್ಲೆ ನಿನ್ನ ಕಣ್ಣ-ದೀಪಗಳು ಹೊಳೆಯುವ ರೀತಿ
ನನ್ನ ಹೃದಯದಲ್ಲಿ ಚಿಮ್ಮುತಿದೆ ಪ್ರೀತಿ
ನೀ ಬೆಳಗುತಿರು ನನ್ನ ಜೀವನ ಇದೇ ರೀತಿ
ಹರುಷ ತುಂಬಿದ ನನ್ನ ಬಾಳು.., ನಿನ್ನಿಂದ ದಿನವೂ ದೀಪಾವಳಿ.

Wednesday, September 21, 2016

ಬೇಡುವೆನು ..


ಬೇಡುವೆನು ಮೋಡನೇ...,
ಹರಿಸಿಬಿಡು ಮಳೆಯನ್ನ
ತುಂಬಿಸಿ ಬಿಡು ಕಾವೇರಿಯ ಮಡಿಲನ್ನ
ನಮ್ಮ ರೈತರ ಅಳುವು ನಿನ್ನ ನೀರಲ್ಲಿ ಮರೆಯಾಗಿ ಹೋಗಲಿ..!
ಬೇಡುವೆನು ಮೋಡನೇ...,
ಹರಿಸಿಬಿಡು ಮಳೆಯನ್ನ
ಒಳಹರಿವು ತುಂಬಿ ಉಕ್ಕಲಿ ನಮ್ಮ ರಾಜಸಾಗರ
ಕಿತ್ತು ತಿನ್ನುವ ರಣ ಹದ್ದುಗಳಿಗೂ ತಲುಪಲಿ ಜಲದ ಅಬ್ಬರ !
ಬೇಡುವೆನು ಮೋಡನೇ...,
ಹರಿಸಿಬಿಡು ಮಳೆಯನ್ನ
ಮಿಡಿದು ಬಿಡು ಕರುನಾಡ ಕಂದರಿಗೆ
ಒರೆಸಿ ಬಿಡು ಕಂಗಳ ಹರಿದು ಹೋಗಲಿ ನೀರು ಅವರಿಗೆ..!
ಬೇಡುವೆನು ಮೋಡನೇ...,
ಹರಿಸಿಬಿಡು ಮಳೆಯನ್ನ
ಅವರ ಒಡಲೂ ತುಂಬಲಿ
ಇಷ್ಟೊಂದು ಮಳೆ ಹರಿಸು..., ಆ ಪ್ರಳಯ ಮತ್ತೆ ಮರುಕಳಿಸಲಿ..!!


ಬಿ......ಕ......ಟ್ಟು

ನೀರು ಬಿಟ್ಟು ಬಿಟ್ಟು, ಕೃಷ್ಣರಾಜಸಾಗರ ಖಾಲಿಯಾಯಿತು...!
ನೀರು ಕುಡಿದ ಹಂದಿ, ಕುಡಿದು ಕುಡಿದು ಆನೆಯಾಯಿತು...!!

Saturday, September 17, 2016

ಕಾವೇರಿ


ಕಾವೇರಿ ನಮ್ಮವಳಲ್ಲ 
ಕಾವೇರಿ ನಿಮ್ಮವಳೂ ಅಲ್ಲ
ಕಾವೇರಿ ಕರುನಾಡ ಭೂಮಿಯಲ್ಲಿ ಜನಿಸಿದವಳು
ಅವಳು ಸ್ವತಂತ್ರಳು
ಮೈತುಂಬಿದರೇ ಹರಿದಾಳು
ಇಲ್ಲದಿರೆ, ಮೌನಕ್ಕೆ ಜಾರಿಹಳು
ಅವಳು ಜನನಿ, ಅವಳು ಜೀವನದಿ
ಅವಳು ಅವಳಾಗಿಯೇ ಇರಲು ಬಿಡಿ !!


========ಭಾವಪ್ರಿಯ========

ಚಿಂತಾಜನಕ ಸ್ಥಿತಿ


ಕಾವು ಏರಿ ಬಿಸಿಯಾಗಿದೆ, 
ಕುಡಿಯೋಕೆ ನೀರಿಲ್ಲದೆ, 
ಪತ್ರಗಳು ಬರೆದು ಲೇಖನಿ ಕರಗಿದೆ...
ಶಾಂತಿಯುತ ಹೋರಾಟಕ್ಕೆ ಬೆಲೆ ಎಲ್ಲಿದೆ ?


------------ಭಾವಪ್ರಿಯ------------

Friday, August 12, 2016

ಆಧಾರ

ಮರದಲಿ ಕೂತು ತೂಕಡಿಸುತ್ತಿರುವ ಶುಕಗಳಿಗೆ
ಬೆಳಕು ಹರಿಯುವ ಕಾಯುವಿಕೆ
ಬೆಳಕೇ ಕಾಣದ ಕಣ್ಣುಗಳಿಗೆ
ಹೊಸ ಜ್ಯೋತಿ ಪಡೆವ ಬಯಕೆ
ಗ್ರಹಣ ಹಿಡಿದ ಸೂರ್ಯನಿಗೆ
ಮುಕ್ತಿ ಸಿಗುವುದೆಂಬ ನಂಬಿಕೆ
ದಿನವೂ ಹುಟ್ಟುವ ಕನಸ್ಸುಗಳಿಗೆ
ಬಣ್ಣ ಹರಡಬಹುದು ಜೀವಕೆ !

Monday, February 22, 2016

ಎಚ್ಚರಿಕೆ

ಕತ್ತಿ ಕೋಶದಲ್ಲಿದ್ದಷ್ಟು ಶಾಂತಿ
ಹೊರ ಬಿದ್ದರೆ ರಕ್ತ ಕ್ರಾಂತಿ
ದೇಶದ ವೈರಿಗಳೇ ಎಚ್ಚರ
ಮತಿಗೆಟ್ಟರೇ ಇಂದೇ ನಿಮ್ಮ ಸಂಹಾರ.

Monday, February 15, 2016

ಪುಟಾಣಿ


ಅವಳ ಪುಟ್ಟ ಪುಟ್ಟ ಹೆಜ್ಜೆ
ಝಲ್ ಝಲ್ ಎನ್ನುವ ಗೆಜ್ಜೆ
ನಮ್ಮ ಪುಟಾಣಿಯ ಸದ್ದು
ಮನೆಯವರಿಗೆಲ್ಲಾ ಮುದ್ದು !
😄

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...