ಅಂದು
ಎಂದಿನಂತೆ ಸೂರ್ಯ ಆಗಸದಲ್ಲಿ ಬೆಳಗುತ್ತಿದ್ದ. ಕಾಲೇಜು ಮೈದಾನಲ್ಲಿ ತಮ್ಮ ತಮ್ಮ
ಬಸ್ಸುಗಳನ್ನು ಇಳಿದು ವಿಧ್ಯಾರ್ಥಿಗಳು ತಮ್ಮ ಕ್ಲಾಸ್ ರೂಮಿನಡೆಗೆ ಹೊರಟಿದ್ದರು. ಆ
ಹುಡುಗಿ (ನಾಯಕಿ) ತನ್ನ ಸ್ನೇಹಿತೆಯೊಡನೆ ಕ್ಲಾಸಿನೊಳಗೆ ಹೋಗಿ ಕೂರುತ್ತಾಳೆ.
ಹುಡುಗಿಯರು ತಮ್ಮದೆ ಲೋಕದ ಮಾತುಕತೆಗಳಲ್ಲಿ ತಲ್ಲೀನರಾಗಿರುತ್ತಾರೆ. ನಾಯಕ ತನ್ನ
ಸ್ನೇಹಿತರೊಡನೆ ಬಸ್ಸಿನಲ್ಲಿ ಬಂದು ಇಳಿಯುತ್ತಾನೆ. ಎಲ್ಲ ಸ್ನೇಹಿತರು ಇವನ ಪ್ರೇಮ ಕತೆ
ತಿಳಿದು ಇವನಿಗೆ ಕಾಲು ಎಳೆಯುತ್ತಿರುತ್ತಾರೆ. ಆ ಹುಡುಗನ ಮುಖದಲ್ಲಿ ಅಂದು
ಖುಶಿ ಕುಣಿದಾಡುತ್ತಿತ್ತು. ಹೇ ಗೆಳೆಯಾ, ಅವಳ ಪರಿಚಯ ನಿನಗಿದೆ, ಅವಳು ನಿನ್ನೊಡನೆ
ಬೆರೆತು ಮಾತನಾಡುತ್ತಾಳೆ. ಅವಳಿಗೂ ನೀನಂದರೆ ಇಷ್ಟಾ ಅನಿಸುತ್ತೆ.., ನೀನೇಕೆ ನಿನ್ನ
ಪ್ರೇಮವನ್ನು ಅವಳ ಮುಂದೆ ಪ್ರಸ್ತಾಪಿಸಬಾರದು ಅನ್ನುತ್ತಾರೆ. ಮೊದಲಿಗೆ ಈ ಪ್ರೇಮ
ಪ್ರಸಂಗಳಿಗೆ ಸರಿ ಸಮಯವಲ್ಲ, ಸುಮ್ಮನೆ ಬಿಡ್ರಪ್ಪಾ ನನ್ನನ್ನ....., ತಲೆ
ಕೆಡಿಸಬೇಡಿ..ಅಂತಾ ಹೇಳುತ್ತನೆ. ಲೋ ಶಿಶ್ಯಾ "Its now or never " ಏನೇ ಆಗಲಿ
ಹೇಳಿಬಿಡೊ..., ಮಂದಿನದು ಮುಂದೆ ನೋಡಿದರಾಯ್ತು. ಅಂದರು ಗೆಳೆಯರು. ಗಟ್ಟಿ ಹೃದಯ
ಮಾಡಿಕೊಂಡು ಅವನು ಅವಳ ಕ್ಲಾಸಿನ ಹತ್ತಿರ ನಡೆದ, ಗೆಳೆಯರು ಅವನ ಹಿಂದಿಂದೆ ಬಂದರು..ಲೋ
ನೀವೆಲ್ಲರು ಹೀಗೆ ಬಂದರೆ ಅವಳಿಗೆ ಕೋಪ ಬರಬಹುದು, ನೀವೆಲ್ಲರೂ ದೂರದಲ್ಲಿರಿ, ನಾನು ಹೋಗಿ
ಬರುತ್ತೇನೆ ಅಂದ. ಗೆಳೆಯರೆಲ್ಲಾ ನಾವು ಕಾಫಿ ಕುಡಿಯುತ್ತಾ ಕುಳಿತ್ತಿರುತ್ತೇವೆ ಅಂತಾ
ಹೇಳಿ ಅಲ್ಲಿಂದ ಜಾಗಾ ಖಾಲಿ ಮಾಡಿದರು. ನಾಯಕ ಆ ಸ್ನೇಹಿತೆಯರು ಕುಳಿತ ಕ್ಲಾಸಿನಲ್ಲಿ
ಹೊರಡುತ್ತಾನೆ.., ಇಬ್ಬರನ್ನು ಮಾತನಾಡಿಸಿ ನಂತರ ಅವಳ ಗೆಳತಿಗೆ, ನೀನು ಸ್ವಲ್ಪ
ನಮ್ಮನ್ನು ಏಕಾಂತವಾಗಿ ಬಿಡುತ್ತೀಯಾ ? ನನಗೆ ಇವಳ ಹತ್ತಿರ ಸ್ವಲ್ಪ ಮಾತನಾಡಬೇಕಿದೆ
ಅಂದಾ..! ಅಲ್ಲಿಗೆ ಆ ಹುಡುಗಿಯರಿಗೆ ಇವನು ಬಂದ ವಿಷಯ ತಿಳಿದು ಹೋಗುತ್ತದೆ, ನಾಯಕಿ -
ನಮ್ಮಿಬ್ಬರಲ್ಲಿ ಏನೂ ಮುಚ್ಚುಮರೆ ಇಲ್ಲಾ, ಇವಳೂ ಇರಲಿ ಹೇಳು ಅಂದಳು. ಕಸಿವಿಸಿಗೊಂಡ
ನಾಯಕ ವಿನಮ್ರವಾಗಿ ಆಕೆಯ ಗೆಳತಿಕೆ ದಯವಿಟ್ಟು ೫ ನಿಮಿಷ ಅಂತಾ.. ಕೇಳಿದುದ್ದಕ್ಕೆ ಅವಳು
ಒಪ್ಪಿ ಹೊರ ನಡೆಯುತ್ತಾಳೆ..! ಗೆಳತಿಯನ್ನು ಕಳಿಸಿದ್ದು ಆಯ್ತು, ಆದ್ರೆ ಹೇಗೆ ವಿಷಯ
ಶುರು ಮಾಡಬೇಕು ಅಂತಾ ತೊಚದಾಯಿತು.., ಸುಮ್ಮನೆ ಕುಶಲೋಪಚಾರಿ ಮಾತುಗಳಾನಾಡುತ್ತಾನೆ,
ಒಮ್ಮೆ ಅವಳ ಮುಖವನ್ನು, ಮತ್ತೊಮ್ಮೆ ತಾನು ಕಟ್ಟಿದ ಗಡಿಯಾರವನ್ನು
ನೋಡುತ್ತಿರುತ್ತಾನೆ..ಮಧ್ಯದಲ್ಲಿ ೨ ನಿಮಿಷ ಮೌನ....ಆಗ ಅವಳೇ ಮುಂದಾಗಿ ನೀನು ಏನೋ
ಹೇಳಬೇಕು ಅಂತಿದ್ದೆ.....ಏನದು..... ಅಂದಳು....! ಅದು.....ಅದು....ಹೇಗೆ ಹೇಳಬೇಕು
ಅಂತಾ ತಿಳಿಯುತ್ತಿಲ್ಲ.....ಮನದಲ್ಲೇ ಗಟ್ಟಿ ಜೀವ ಮಾಡಿಕೊಂಡು....ನಿನ್ನ ನಡೆ ನುಡಿ,
ನಿನ್ನ ಮಾತುಗಳು ನಿನ್ನ ನೆನಪುಗಳು ಅನುಕ್ಷಣವು ನನ್ನ ಕಣ್ಣೆದಿರು ನಿಂತು
ಕಾಡುತ್ತವೆ....ಬಹಳ ಯೋಚನೆ ಮಾಡಿದಾಗ ನನಗನಿಸಿತು...... " I think I'm in love
with you " ಅವಳ ಮುಖದಲ್ಲಿ ಕೋಪವಿರಲಿಲ್ಲ.....ಅವಳು
ಗಲಿಬಿಲಿಗೊಳ್ಳಲಿಲ್ಲ....ಶಾಂತವಾಗಿ ಮುಗುಳು ನಗೆ ಬೀರುತ್ತಾ.... ನನಗೆ ಆ ತರ ಭಾವನೆಗಳು
ನಿನ್ನ ಬಗ್ಗೆ ಇಲ್ಲ, ನಾವು ಜಸ್ಟ ಫ್ರೆಂಡ್ಸ್.....! ನೀನು ಬೇಜಾರು ಮಾಡಿಕೊಳ್ಳಬೇಡ
ಅಂದಳು.....ಮತ್ತೆ ಮೌನ....ಸರಿ ಸರಿ ಎಂದ ನಾಯಕ..., ಜೇಬಿನೊಳಗೆ ಕೈ ಹಾಕಿ ಅವಳಿಷ್ಟ
ಪಡುವ ಚಾಕಲೇಟನ್ನು ಕೊಟ್ಟು ಅವಳಿಗೆ ಹಸ್ತಲಾಂಗನ ಮಾಡಿ ಹೊರ ನಡೆಯುತ್ತಾನೆ...ಹೊರಗೆ
ಕುಳಿತ ಸ್ನೇಹಿತೆಯ ಹತ್ತಿರ ಹೋಗಿ ಅವಳಿಗೊಂದು ಚಾಕಲೇಟನ್ನು ಕೊಟ್ಟು ತನ್ನ ಗೆಳೆಯರ
ಹತ್ತಿರ ನಡೆಯುತ್ತಾನೆ.....!