ಕಾಡ ಬೇಡ ಗೆಳತಿ
***ಭಾವಪ್ರಿಯ***
ಬೇರ್ಯಾರಿಲ್ಲ ನನ್ನ ಗೆಳತಿ
ಇದ್ದರೂ..., ಆಗಲಾರಳು ನಿನ್ನ ಸವತಿ
ನನ್ನ ಮನಸಿನ್ಯಾಗ ಯಾಕ ತಣ್ಣೀರು ಸುರಿತಿ
ನೀನ... ನನ್ನ ಹೃದಯದ ಒಡತಿ
ಮೌನವಾಗಿ ಓಡುತಿ ಯಾಕ ಚಿತ್ತ ಕದಡಿ
ಬೆಂದು ಹೋಗತೇನಿ ನಾ ಒದ್ದಾಡಿ-ಒದ್ದಾಡಿ
ನನ್ನ ಕ್ಷಣಗಳು ಕಳೆದಾವ ನಡು-ನಡುಗಿ
ಆಗಬಾರದೇ ನೀ ನನ್ನ ಅಮೃತ ಗಡಗಿ .
***ಭಾವಪ್ರಿಯ***