Thursday, August 27, 2009

ಕಳ್ಳನ ಮನಸ್ಸು ಹುಳ್ಳಹುಳ್ಳಗೆ

ಕಳ್ಳನ ಮನಸ್ಸು ಹುಳ್ಳಹುಳ್ಳಗೆ

ಸುಳ್ಳನ ಅಳುಕು ತಪ್ಪು ಮುಚ್ಚುವವರೆಗೆ

ಸತ್ಯವ ಮರಿಸಲು ಅಳುವ ನಾಟಕ

ಸುಳ್ಳಿನ ನಷ್ಟ ತಪ್ಪಿಸಲು ಗೋಳಿಡುವ ನಾಟಕ

ಹರಿ ಇಲ್ಲದೆ ನಾಲಿಗೆ ರೋಜ್ಜಿನಂತೆ ಹರಿದಿರಲು

ಕ್ಷುಲ್ಲಕ ಜನರಿವರು ಮತಿಯೇ ಇಲ್ಲದೆ ಮಾತನಾಡಿಹರು

ಇವರಿವರ ಕುಡಿಗೆ ಕುತ್ತು ತರುವ ಇವರು

ಪ್ರೀತಿಯ ಅರಿಯದೆ ತೋರಿಕೆಯ ಅಭಿಮಾನ ತೋರಿಹರು

ಕೈಯಲಾಗದ ಇವರು ಅತ್ತು ಕರೆದು ಸಮಯವ ಸಾದಿಸಿಹರು

ಇವರ ಮಟ್ಟ ಇಲ್ಲಿಯವರೆಗೆ .... ನಾ ಕಾಣಿಸುವೆನು ದಾರಿ ಇವರಿಗೆ ಕೊನೆಯವರೆಗೆ ...!

Wednesday, August 26, 2009

ಧೀರ ಧೀಮಂತ...!

ಧೀರ ಧೀಮಂತ ಈ ಘಟ
ನ್ಯಾಯ ನಯವಾದ ನನ್ನ ಹಠ
ಅಡಗಿಸಿ ನಿನ್ನಯ ಹುಟ್ಟು
ಬಡಿದು ಬಗ್ಗಿಸುವೆ ನಿನ್ನ
ಸೇರಿಸುವತನಕ ನಿನಗೆ ಮಠ
ಕ್ರೂರಿ ಕಪಟಿ ಮೋಸ ಜಾಲದ ಮಾಟಗಾತಿ
ನಿನ್ನ ಘರ್ವವ ಮೆಟ್ಟಿ ನಿಲ್ಲುವ ತನಕ
ನಾ ಸುಮ್ಮನೆ ಕೂಡೆನು ..!

ಉಪ್ಪು ತಿಂದವನು......!

ಉಪ್ಪು ತಿಂದವನು ನೀರು ಕುಡಿಯಲೇ ಬೇಕು
ತಪ್ಪು ಮಾಡಿದವನು ಅದನ್ನು ಭರಿಸಲೇಬೇಕು
ಮೆಲ್ಲ ಮೆಲ್ಲನೆ ಮಜ್ಜಿಗೆ ಕಡಿದರೆ
ಅಜ್ಜಿಗೆ ತಿಳಿಯಲಿಲ್ಲ ಎಂದು ತಿಳಿಯ ಬೇಡವೋ ಮೂಢ
ನಿ ಚಾಪೆಯ ಕೆಳಗೆ ನುಸುಳಿದರೆ ...ನಾ ರಂಗೋಲಿ ಕೆಳಗೆ ತೂರುವ ಜಾಣ ...!

Thursday, June 11, 2009

ಹಸಿರೇ ಉಸಿರು

ಹಸಿರು ಮಾನವನ ಜೀವದ ಉಸಿರು
ಹಸಿರು ಇದ್ದಾರೆ ಭಾಗ್ಯ , ಹಸಿರು ತರುವುದು ಸೌಭಾಗ್ಯ
ಹಸಿರು ಬೆರೆತಿರಲು ಜೀವನ , ಹಸಿರು ಬದುಕಿನ ಪಯಣ
ಕಾಡು ಬೆಳೆದರೆ ನಾಡಿಗೆ ಮಳೆ ,
ಸೋನೆ ಗರೆದರೆ ಭೂಮಿಗೆ ಬೆಳೆ
ಹಸಿರು ಉಳಿದರೆ ಬಾಳು ಬೆಳಗೀತು,
ಹಸಿರು ಅಳಿದರೆ ಜೀವನ ನಶಿದೀತು
ಹಸಿರು ಪ್ರಗತಿಯ ಸಂಕೇತ ,
ಹಸಿರು ಬಾಳಿನ ಪ್ರೇರಕ
ಹಸಿರು ಉಳಿಸಿ ಹಸಿರು ಬೆಳಸಿ ,
ಜಗದ ಮೊಗದ ಉನ್ನತಿಗೆ ಹಚ್ಚು ಹಸಿರಾಗಿಸಿ !

Wednesday, June 10, 2009

ನಮ್ಮ ಧಾರವಾಡದ ಮಳಿ ....!

ನಮ್ಮ ಧಾರವಾಡದಾಗ ಬಂದ್ರ ಮಳಿ
ಊರ ಓಣಿಗಲೆಲ್ಲ ತುಂಬಿದ ಹೊಳಿ
ಸಂತಿ ಭಟ್ಯಾಗ ರೋಜ್ಜಿನ ತಳಿ
ಮೈಯ್ಯ ನಡಗಿಸುವ ತಂಪು ಚಳಿ
ಬೀಸಿ ಹೊರಟೈತಿ ತಣ್ಣನೆ ಗಾಳಿ
ನಮ್ಮ ಹೆದ್ದಾರಿಯಾಗ ಬಿದ್ದಾವ ಮರ ಚಿಗುರಿ
ಭರ್ ಎಂದು ಹೋದಾಗ ಮೊಟರ್ ಗಾಡಿ
ತೂರಿ ಸಿಡಿದೈತಿ ದೂರ ರಾಡಿ
ಜಿಟಿ ಜಿಟಿ ಮಳ್ಯಾಗ ನೆನಕೊಂಡು ಹೊರಟಾರ
ಬೆನ್ನಮ್ಯಾಗ ಪಾಟಿ ಚೀಲ ಹೊತ್ತ ಸಾಲಿ ಹುಡುಗೂರು
ಧಾರವಾಡ ಸೀಮಿ ರೈತ ,ಕುಣಿ ಕುಣಿದು ಜಿಗ್ದಾನ
ಹೊಲವ ಊಳಿ ಬೀಜ ಬಿತ್ತುವ ,ಕೆಲಸದಾಗ ಮುಳ್ಗ್ಯಾನ ..!
-ಭಾವಪ್ರಿಯ

कैसे पायेंगे हम मंजिल को ?

कैसे पायेंगे हम मंजिल को ?
डूबती नय्या में सवारें हमको ,
लगने लगा है डर इस दिलको ,
सन्नाटा छाया है महफिल ,
मैं कैसे पा सकेंगे बचने की रहा को ?
गुज़र रहे रुह को ,
मिट रहे आशावों को ,
कैसे दिलाये तस्सल्ली दिलको ?

- भावप्रिय

Thursday, February 19, 2009

ಎಲ್ಲಿಗೆ ಸಾಗಿದೆಯೋ ಪಯಣ ..?

ಗುರಿ ಇಲ್ಲದೆ ಗರಿ ಮಾಸಿದೆ
ದುಗ್ಗಾಣಿ ಇಲ್ಲದೆ ಕಛೇರಿಗಳು ಬಳಲಿವೆ
ಮನುಷ್ಯನ ಜೀವನ ಭಯದಿಂದ ಸಾಗಿದೆ
ನಮ್ಮ ಕಾರ್ಯಕ್ಕೆ ಬೆಲೆ ಬರುವುದು ಹೇಗೆ ?
ಹೇಗೆ ಸಾಗುವುದೋ ಪಯಣ ..?

ಹೊಸ ತಂತ್ರವ ಬಳಸಿ
ಹೊಸ ಮಂತ್ರವ ಹೂಡಿ
ತೊಡಕು ಮೊಡಕುಗಳ ಬದಿಗೇ ಒತ್ತಿ
ನವ ಯುಗದ ಕಡೆಗೆ ಸಾಗುವುದು ಹೇಗೆ..?
ಹೇಗೆ ಸಾಗುವುದೋ ಪಯಣ ..?

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...