Friday, December 13, 2013

ಸರ್ವಜ್ಞನ ವಚನಗಳು

ಅತ್ತಿ ಮರಕರಳಿಲ್ಲ ಕತ್ತೆಗಂ ಕೋಡಿಲ್ಲ


ಹತ್ತಿಯಾ ಹೊಲಕೆ ಗಿಳಿಯಿಲ್ಲ ಸೂಳೆಗಂ

ಸತ್ಯವಿಲ್ಲೆಂದ ಸರ್ವಜ್ಞ

(ತಾತ್ಪರ್ಯ : ಅತ್ತಿಯಮರದಲ್ಲಿ ಹೂಗಳು ಆಗುವದೇ ಇಲ್ಲ. ಕತ್ತೆಗೆ ಕೋಡುಗಳು ಇರುವದಿಲ್ಲ. ಹತ್ತಿಯ ಹೊಲದಲ್ಲಿ ಗಿಳಿಗಳು ಬರುವದಿಲ್ಲ.ಸೂಳೆಯಲ್ಲಿ ಸತ್ಯತನವೇ ಇರುವದಿಲ್ಲ)

Wednesday, December 11, 2013

ತಾಳಿ ಎಂದರೆ...

ಕೆಲವರಿಗೆ ,

ಅದು ಪವಿತ್ರ ಬಂಧನ

ಹೆಣ್ಣಿಗೆ ಭೂಷಣ

ಸೌಭಾಗ್ಯವತಿಯ ಆಭರಣ

ನಿತ್ಯವೂ ಕಣ್ಣಿಗೊತ್ತಿ ಅದನ್ನ

ದೇವರ ನೆನೆಯುವುದು ಮನ !

ಇನ್ನೂ ಕೆಲವರಿಗೆ,

ಒಂದು ಕುತ್ತಿಯಲಿ ತೂಗುವ ಸರ

ಪಡ್ಡೆ ಹೈಕಳ ದೂರವಿರಿಸುವ ದಾರ

ಸ್ವೇಚ್ಛಾಚಾರಕ್ಕೆ ಸಿಕ್ಕ ಪರಿಹಾರ

ಹಾದರವ ಮುಚ್ಚಿಡವ ಅಮೃತ ಸಾಗರ

ಆಧುನಿಕತೆ ಹೆಸರಲ್ಲಿ ನಡೆಸೊ ವ್ಯಭಿಚಾರ !!

ಮಧುರ ಕ್ಷಣಗಳು


ಕೇಶಗಳ ಮರೆಯಲ್ಲಿ ಅವಳ ನಗು

ಹಿಂತಿರುಗದೇ ನನ್ನರಸುವ ಅವಳ ಕಣ್ಣು

ಕೈಗಳಲ್ಲಿ ಸವರಿಸುತ್ತ ಅವಳ ಮಂಗುರುಳು

ನೆನ್ನೆ ಅವಳು ಕೊಟ್ಟ ಈ ಸವಿ ಕ್ಷಣಗಳು

ರಾತ್ರಿಯೆಲ್ಲಾ ನಿದಿರೆ ಬರದೇ ಕಾಡಿದವು !!

Monday, December 09, 2013

ಸುಮ್ -ಸುಮ್ನೆ

ನೋಡು ನೋಡುತ್ತಲೇ ನಿನ್ನ

ಹೃದಯಕ್ಕೆ ಹಾಕಿಬಿಟ್ಟಿಯಲ್ಲೇ ಕನ್ನ

ಲೂಟಿಯಾಗಿ ಹೋಯ್ತು ಮನ

ಎಷ್ಟೇ ಧನವಿದ್ದರೇನು ಚೆನ್ನ

ನಾನಾದೆನು ತೀರಾ ಬಡವ,

ನೀನಿಲ್ಲದೇ ಹೇಗೆ ಚಿನ್ನ ?

ಸಾಗಿಸಲಿ.. ಬಡಪಾಯಿಯ ಜೀವನ !!

Friday, December 06, 2013

ಅಂತ್ಯ

ಅವಳೊಂದು ಪೂರ್ಣಗೊಳ್ಳದ ಕಾವ್ಯ

ಸಾರ್ಥಕತೆಯ ಪಡೆಯದ ಅಧ್ಯಾಯ

ಗಂಡಿನ ಆಶ್ರಯ ತಿರ್ಸ್ಕರಿಸಿದ ವಿಧವೆ

ಅವಳ ಅಂತ್ಯ..., ಅನಾಥ ಶವವೇ !!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...