Tuesday, November 26, 2013

ಮೂಢ

ನಾರಿಯ ಒಲಿಸಲು ಹೊರಟವನು

ಹಾಕುವನು ಬಟ್ಟೆಗೆ ಇಸ್ತರಿ !

ತಿಳಿಯದ ಮೂಢ ಇವನು....

ಅವಳು ಒಲಿದರೆ, ಇವನ ಜೇಬಿಗೆ ಕತ್ತರಿ.!!

Wednesday, November 20, 2013

ಶ್ರೀಮಂತಿಕೆ

ಇಣುಕಿ ನೋಡದಿರಿ ಹುಡುಗಿಯರೇ
ಹುಡುಗನ ಶ್ರೀಮಂತಿಕೆ ಜೇಬಿನೊಳಗೆ..!
ನಿಜ ಪ್ರೀತಿಯ ಬಯಸಿದರೆ
ತಪ್ಪದೇ ಇಣುಕಿರಿ ಹೃದಯದೊಳಗೆ...!!

ಮೌನ ಪ್ರೀತಿ

ಕಣ್ಣ ನೋಟದಲ್ಲೇ ಆಕರ್ಶಿತರಾಗಿ
ನಿತ್ಯ ಭೇಟಿಯ ಸವಿಯು ತಾಕಿ
ಮೌನದಲ್ಲೇ ಪ್ರೀತಿ ಹುಟ್ಟಿ
ಭಾವನೆಗಳ ಬುತ್ತಿ ಕಟ್ಟಿ ,
ಬಿನ್ನಹಿಸಲಿಲ್ಲ ಇಬ್ಬರೂ, ವರುಷಗಳೇ ಕಳೆದರೂ
ಇನ್ನೂ ಅಚ್ಚಳಿಯಾಗಿಯೇ ಉಳಿದಿದೆ.. ಅವರ ಹೃದಯದೊಳು !!

ಅವನಿತ್ತ ಮುತ್ತು

ನಲ್ಲ, 
ನೀನಿತ್ತ ಮುತ್ತಿನಲ್ಲಿ ಏನಿತ್ತೋ ಗಮತ್ತು
ಆ ಕ್ಷಣವ ನೆನೆದರೆ ಇವತ್ತೂ
ಮತ್ತೆ ಮತ್ತೆ ಆ ಸಿಹಿಮುತ್ತು.., ಬೇಕೆನಿಸಿತು !!

Monday, November 11, 2013

ಕಾವ್ಯವಾಹಿನಿ

ಅವಳೊಬ್ಬ ಗುಪ್ತ ಅಭಿಮಾನಿ

ಆಲಿಸಿ ನನ್ನ ಕಾವ್ಯವಾಹಿನಿ

ಚೆಲ್ಲಿರುವಳು ನಗೆಮಲ್ಲಿಗೆಯ ಹನಿ

ಅವಳೇ ನನ್ನಕಾವ್ಯ.., ನಾ ಅವಳ ಪ್ರೇಮಿ !!

ವಿಪರ್ಯಾಸ

ಹೆಂಡತಿಯ ಹುಚ್ಚು ಹುಡುಗಾಟಕ್ಕೆ

ಗಂಡ ಹಾಕಿದ ಬ್ರೇಕು

ನಿಲ್ಲಲಿಲ್ಲ ಅವಳ ಸೊಕ್ಕು

ಹಳಿ ತಪ್ಪಿದ ಅವರ ಬದುಕು

ಮುನ್ನುಗ್ಗಿ ಹಾದಿ ತಪ್ಪಿತು !!

ಚಳಿ

ಆಹಾ..!! ಬಿಸುತಿಹುದು ತಂಪು ತಂಗಾಳಿ

ಸಣ್ಣದಾಗಿ ಶುರುವಾಗಿದೆ ಮಾಗಿಯ ಚಳಿ

ಕಳಚಿಬಿಡು ವಿರಹಗಳ ಸರಪಳಿ

ಓ ಪ್ರೀಯೆ ಈಗಲಾದರೂ..., ಕಂ (Come) ....ಬಳಿ !!

Wednesday, November 06, 2013

ಕಿಡಿನುಡಿ

ಗಂಡನಿಂದ, ಮುಕ್ತಿ ಸಿಕ್ಕ ಸೂಳೆಗೆ...
ರಾತ್ರಿ ಗೆಳೆಯನ ಸೇರುವ ಖುಶಿ !!

Sunday, November 03, 2013

ರಾಜ್ಯೋತ್ಸವ

ನವೆಂಬರ್ ತಿಂಗಳಿಗಷ್ಟೇ ಆಚರಿಸುವುದಿಲ್ಲ ನಾನು, ರಾಜ್ಯೋತ್ಸವ !
ನಿತ್ಯವೂ ಕುಣಿಯುತ್ತವೆ ಕನ್ನಡ ಪದಗಳು ನನ್ನ ಕೈ ಅಡಿಯಲ್ಲಿ
ಅದರಿಂದಲೇ ವರ್ಷ ಉದ್ದಕ್ಕೂ ಕನ್ನಡದ ನಿತ್ಯೋತ್ಸವ !!

ಜೀವನ ಜ್ಯೋತಿ

ನಾನು ನೀನು ಸೇರಿ ಜೋಡಿ ಬತ್ತಿ 
ನಮ್ಮಿಬ್ಬರ ಪ್ರೀತಿಯ ಚಿಲುಮೆ ಹೊತ್ತಿ
ಪರಿಮಳ ಹರಡಿವೆ ಎರಡು ಊದಬತ್ತಿ
ಬೆಳಗುತ್ತಿರಲಿ ನಮ್ಮ ಜೀವನ ಜ್ಯೋತಿ !!

ಜ್ಯೋತಿ

ನಿನ್ನ ಒಂದು ಕಿರು ನಗೆಯ ಪ್ರೀತಿ
ಬೆಳಗಿಸಿತು ನನ್ನ ಹೃದಯದ ಜ್ಯೋತಿ !!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...