ಅವ್ವ ನನಗ ಇಂತಹ ಹುಡುಗಿನ ಬೇಕ
 
ಸೀರಿ ಉಡಾಕ ಅಕೀಗ ಬರಬೇಕು
ಹಣಿಯಾಗ ಬೊಟ್ಟಿಡಬೇಕು
ತಲಿತುಂಬಾ ಹೂ ಮುಡಿದಿರಬೇಕು
ತಳಕು ಬಳುಕೋ ನಾಚುವ ಬಳ್ಳಿಯಾಗಿರಬೇಕು
ರೊಟ್ಟಿ ಮಾಡಕ ಬರಬೇಕು
ಮನೀನು ಸ್ವಚ್ಛಗ ಇಡಬೇಕು
ದೇವರ ಪೂಜೆ ಮಾಡಬೇಕು
ಗುರು ಹಿರಿಯರಲ್ಲಿ ಭಕ್ತಿ ಕೂಡ ಇರಬೇಕು
ಗಂಡನ ಮೇಲೆ ಅಭಿಮಾನವಿರಬೇಕು
ಅನುಕಾಲ ಪ್ರೀತಿ ಹರಿಸಬೇಕು
ನನ್ನ ಬಾಳ ಬೆಳಗುವ ನಂದಾದೀಪವಾಗಬೇಕು
ಅವ್ವ ನನಗ ಇಂತಹ ಹುಡುಗಿನ ಬೇಕ.
 
***ಭಾವಪ್ರಿಯ***
ಸೀರಿ ಉಡಾಕ ಅಕೀಗ ಬರಬೇಕು
ಹಣಿಯಾಗ ಬೊಟ್ಟಿಡಬೇಕು
ತಲಿತುಂಬಾ ಹೂ ಮುಡಿದಿರಬೇಕು
ತಳಕು ಬಳುಕೋ ನಾಚುವ ಬಳ್ಳಿಯಾಗಿರಬೇಕು
ರೊಟ್ಟಿ ಮಾಡಕ ಬರಬೇಕು
ಮನೀನು ಸ್ವಚ್ಛಗ ಇಡಬೇಕು
ದೇವರ ಪೂಜೆ ಮಾಡಬೇಕು
ಗುರು ಹಿರಿಯರಲ್ಲಿ ಭಕ್ತಿ ಕೂಡ ಇರಬೇಕು
ಗಂಡನ ಮೇಲೆ ಅಭಿಮಾನವಿರಬೇಕು
ಅನುಕಾಲ ಪ್ರೀತಿ ಹರಿಸಬೇಕು
ನನ್ನ ಬಾಳ ಬೆಳಗುವ ನಂದಾದೀಪವಾಗಬೇಕು
ಅವ್ವ ನನಗ ಇಂತಹ ಹುಡುಗಿನ ಬೇಕ.
***ಭಾವಪ್ರಿಯ***

1 comment:
ಭಾಳ ಕಷ್ಟ ಐತಲ್ಲಪ್ಪೋ ಮಗ, ಇಂತ ಸಕಲ ಗುಣ ಸಂಪನ್ನೆ ಸೊಸೆ ತರೋದು ನನಗೆ.
ಅಂದು ಅಲವತ್ತುಕೊಂಡಳೂ ಪಾಪ ಅಮ್ಮ!!!
Post a Comment