Wednesday, February 29, 2012

ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!



ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!

ನೀ ಮುಗಿಲಾಚೆಯ ನೀಲಿ ಬಾನು 
ಪ್ರೀತಿ ತುಂಬಿದ ಕಡಲು ನಾನು 
ಕಡಲು ನಿರೀರಬಹುದು ಲವಣ
ಸಿಹಿಗೆ ತಿರುಗಿಸಬಲ್ಲದು ನನ್ನ ಪ್ರೀತಿಯ ತಾಣ    
ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!

ನನ್ನಯ ಹೃದಯವಿದು ಚೆಲುವು ಬೃಂದಾವನ
ಮೆಲ್ಲಗೆ ಕುಳಿತು ಸವಿಬಾರೆ ಹಕ್ಕಿಗಳ ಸವಿಗಾನ
ತರ ತರ ಅರಳಿದೆ ಹೂವಿನ ವರ್ಣ
ಸುಗಂಧವು ಉಣಿಸಿದೆ ಒಲವಿನ ಚರಣ
ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!

ಕವಿ ಮನಸು ನನ್ನದು ಚಿರನೂತನ
ನಿನ್ನ ಪ್ರತಿ ಒಂದು ಭಾವವು  ನನಗೆ ಪ್ರೇರಣ
ಮಲ್ಲಿಗೆ ಮನದಲ್ಲಿ  ಇಡು  ಪಾದಾರ್ಪಣ
ನಾ ಸದಾ ಬಡಿಸುವೆ ಪ್ರೀತಿಯ ಔತಣ
ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!

***ಭಾವಪ್ರಿಯ ***

2 comments:

ರವಿ ತಿರುಮಲೈ said...

ನಿಮ್ಮ ಕವಿತೆಯ ಭಾವ ತುಂಬಾ ಸುಂದರವಾಗಿದೆ. ಪ್ರೇಮದ ಮತ್ತು ಪ್ರಣಯದ ಮಾತುಗಳು ಸವಿಯಾಗೆ ಇರುತ್ತವೆ.

ಆದರೆ ನಿಮ್ಮ ಕವನದಲ್ಲಿ ಕನ್ನಡ ಭಾಷೆಯ ಸರಿಬಳಕೆಯಾಗಬೇಕು. ನೋಡಿ " ನಿ" ಎಂದು ಆರು ಬಾರಿ ಬಂದಿದೆ. ಅದು " ನೀ " ಆಗಬೇಕಲ್ಲವೇ.

"ಲಾವಣ" ಅಲ್ಲ. ಅದು " ಲವಣ" ಆಗಬೇಕು . "ಥರ ಥರ" ಇದು ನಡುಕಕ್ಕೆ ಉಪಯೋಗಿಸುವ ಪದ. ಅಲ್ಲಿ "ತರ ತರ" ಎಂದಿರಬೇಕು.

"ಪಾದರ್ಪಣ" ಎನ್ನುವುದು " ಪಾದಾರ್ಪಣ" ಆಗಬೇಕು . ದಯಮಾಡಿ ಪೋಸ್ಟ್ ಮಾಡುವ ಮುನ್ನ ಒಂದುಬಾರಿ ನೋಡಿದರೆ ಚೆನ್ನ.

Sunil R Agadi (Bhavapriya) said...

ನಾನು ಬಾಲ್ಯದಿಂದಲೂ ಆಂಗ್ಲ ಮಾಧ್ಯಮದಲ್ಲಿ ಓದಿರುವುದರಿಂದ ಕನ್ನಡದಲ್ಲಿ ಬರಿಯುವಾಗ ತಪ್ಪುಗಳು ಆಗುತ್ತವೆ, ಕ್ಷಮೆ ಇರಲಿ, ನೀವು ಹೇಳಿದ್ದು ಚೆನ್ನಾಗಿಯೇ ಆಯಿತು ತಿದ್ದಿಕೊಳ್ಳುತ್ತೇನೆ ..! ಕನ್ನಡ ಬರಿಯುವಲ್ಲಿ ತಪ್ಪುಗಳನ್ನು ಮಾಡದ ಹಾಗೆ ಪ್ರಯತ್ನಿಸಿ ಸುಧಾರಿಸಿ ಕೊಳ್ಳುತಿದ್ದೇನೆ ...! ನಿಮ್ಮ ಸಲಹೆ, ಪ್ರೋತ್ಸಾಹ ಹೀಗೆ ಅವಿರತವಾಗಿ ಇರಲಿ ಎಂದು ಆಶಿಸುತ್ತೇನೆ , ಹೃತ್ಪೂರ್ವಕ ಧನ್ಯವಾದಗಳು..!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...