Thursday, June 11, 2009

ಹಸಿರೇ ಉಸಿರು

ಹಸಿರು ಮಾನವನ ಜೀವದ ಉಸಿರು
ಹಸಿರು ಇದ್ದಾರೆ ಭಾಗ್ಯ , ಹಸಿರು ತರುವುದು ಸೌಭಾಗ್ಯ
ಹಸಿರು ಬೆರೆತಿರಲು ಜೀವನ , ಹಸಿರು ಬದುಕಿನ ಪಯಣ
ಕಾಡು ಬೆಳೆದರೆ ನಾಡಿಗೆ ಮಳೆ ,
ಸೋನೆ ಗರೆದರೆ ಭೂಮಿಗೆ ಬೆಳೆ
ಹಸಿರು ಉಳಿದರೆ ಬಾಳು ಬೆಳಗೀತು,
ಹಸಿರು ಅಳಿದರೆ ಜೀವನ ನಶಿದೀತು
ಹಸಿರು ಪ್ರಗತಿಯ ಸಂಕೇತ ,
ಹಸಿರು ಬಾಳಿನ ಪ್ರೇರಕ
ಹಸಿರು ಉಳಿಸಿ ಹಸಿರು ಬೆಳಸಿ ,
ಜಗದ ಮೊಗದ ಉನ್ನತಿಗೆ ಹಚ್ಚು ಹಸಿರಾಗಿಸಿ !

Wednesday, June 10, 2009

ನಮ್ಮ ಧಾರವಾಡದ ಮಳಿ ....!

ನಮ್ಮ ಧಾರವಾಡದಾಗ ಬಂದ್ರ ಮಳಿ
ಊರ ಓಣಿಗಲೆಲ್ಲ ತುಂಬಿದ ಹೊಳಿ
ಸಂತಿ ಭಟ್ಯಾಗ ರೋಜ್ಜಿನ ತಳಿ
ಮೈಯ್ಯ ನಡಗಿಸುವ ತಂಪು ಚಳಿ
ಬೀಸಿ ಹೊರಟೈತಿ ತಣ್ಣನೆ ಗಾಳಿ
ನಮ್ಮ ಹೆದ್ದಾರಿಯಾಗ ಬಿದ್ದಾವ ಮರ ಚಿಗುರಿ
ಭರ್ ಎಂದು ಹೋದಾಗ ಮೊಟರ್ ಗಾಡಿ
ತೂರಿ ಸಿಡಿದೈತಿ ದೂರ ರಾಡಿ
ಜಿಟಿ ಜಿಟಿ ಮಳ್ಯಾಗ ನೆನಕೊಂಡು ಹೊರಟಾರ
ಬೆನ್ನಮ್ಯಾಗ ಪಾಟಿ ಚೀಲ ಹೊತ್ತ ಸಾಲಿ ಹುಡುಗೂರು
ಧಾರವಾಡ ಸೀಮಿ ರೈತ ,ಕುಣಿ ಕುಣಿದು ಜಿಗ್ದಾನ
ಹೊಲವ ಊಳಿ ಬೀಜ ಬಿತ್ತುವ ,ಕೆಲಸದಾಗ ಮುಳ್ಗ್ಯಾನ ..!
-ಭಾವಪ್ರಿಯ

कैसे पायेंगे हम मंजिल को ?

कैसे पायेंगे हम मंजिल को ?
डूबती नय्या में सवारें हमको ,
लगने लगा है डर इस दिलको ,
सन्नाटा छाया है महफिल ,
मैं कैसे पा सकेंगे बचने की रहा को ?
गुज़र रहे रुह को ,
मिट रहे आशावों को ,
कैसे दिलाये तस्सल्ली दिलको ?

- भावप्रिय

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...