ಬಿಗಿ ಹಿಡಿದ ಕುಪ್ಪಸದ ಉಸಿರು
ನಿಶ್ವಾಸವೂ ಕಠೀಣವಿಂದು
ಕಲ್ಮಶ, ವೈರಾಣು ಕೂಡಿದ ಗಾಳಿಯಲ್ಲಿ
ಉಸಿರಾಟವೇ ಕಷ್ಟ ಈ ಸಮಯದಲ್ಲಿ !
ಲಸಿಕೆ ಮೂಡಿಸಿದ ಭರವಸೆ
ಜವಾಬ್ದಾರಿ ಹೊರುವರು ಯಾರಿಲ್ಲಿ ?
ಆರೋಗ್ಯವಾಗಿದ್ದ ಮನುಷ್ಯ ಇಂದು
ತಡೆಮದ್ದಿನಿಂದಲೇ ಜೀವ ತೊರೆದನಿಲ್ಲಿ !
ಭಯ ಹುಟ್ಟಿಸಿದ ವೈರಾಣು
ಸದ್ದಿಲ್ಲದೇ ಮಾಡಿದೆ ಹೈರಾಣು
ಸಂಖ್ಯೆ ಕಡಿಮೆಗೊಂಡರೂ
ಧೈರ್ಯವೇ ಸಾಲದು ಬೆರೆತು ಮೆರೆಯಲು !
ಸ್ನೇಹಿತರು ಬಂಧುಗಳು ಬಂದರೂ
ಅನುಮಾನ ಪಡೋದೆ ಸವಾಲು
ಯಾವ ರೂಪದಲ್ಲಿರುವಳೊ ಮಹಾಮಾರಿ
ಅವುಚಿಕೊಳ್ಳುವಳೊ ಯಾಮಾರಿ..!
ಹೇಗೆ ಹುಟ್ಟಿಕೊಂಡಿತೋ ಈ ಕುತ್ತು
ಕ್ಷಣ ಕ್ಷಣಕ್ಕೂ ತಪ್ಪದ ಆಪತ್ತು
ವಿಶ್ವಾಸದ ಆಶಾಕಿರಣ ಚಿಗುರುವುದೆಂದೋ
ಮತ್ತೆ ನಲಿವಿನ ವೇಳೆ ಬರುವುದೆಂದೋ..!
***ಭಾವಪ್ರಿಯ***
No comments:
Post a Comment