ಅಲೆಯ ಮೇಲೆ ತೇಲಿ ಬರುತಿದೆ
ನೆನೆದ ಮನದ ಆ ಪತ್ರ.
ಯಾರ ಭಾವಗಳ ಹೊತ್ತು ತಂತೋ
ತೋಡಿಕೊಳ್ಳಲು ಅವನ ಹತ್ರ.
ಹೇಳಿ ಕೇಳಿ ಹುಚ್ಚು ಕವಿಯು ಅವನು
ಗೀಚಿ ಬಿಡುವನೋ ಒಲವ ಮಿತ್ರ.
ಹಾರಿ ಬಿಡಲು ಪ್ರೀತಿಯ ಘಮಲು
ಮೂಡಿಸಬಹುದೇ ಆಗಸದಿ ಆ ಚಂದಿರ ?
ಅವನ ತುಡಿತಕೆ, ನಿನ್ನ ಮಿಡಿತವೂ
ಹೃದಯ ಮುಟ್ಟಿತೆ, ತಿಳಿಸಿ ಹೇಳು ..!
ಅಲೆಯ ಮೇಲೆ ಒಲವ ಮಾಲೆ
ಕಳೆಸಿಕೊಡುವೆ ಎಂದನು !!
ನೀವು ಭಾರತದ ಯಾವದೇ ರಾಜ್ಯದವರಿದ್ದರೂ ಸರಿ, ನೀವೆಲ್ಲಾ ನಮ್ಮವರೇ ಅನ್ನುವ ಮನೋಭಾವ ನಮ್ಮದು.! ಹಾಗೆಯೇ ನೀವು ನಮ್ಮವರಾಗಿ ಬೆರೆಯಿರಿ ಕನ್ನಡವ ಅರೆತು, ಕಲಿತು, ಬೆಳೆಸುವ ಹೊಣೆ ನಿಮ್ಮದಾಗಿರಲಿ..!!
ಪ್ರದರ್ಶಿಸದಿರಿ ಹೆಂಗಳೆಯರೇ ಅದು ಅಪಾಯವೇ ಸರಿ ಅಂದವನ್ನು ಮುಚ್ಚಿಡುವುದರಿಂದಲೇ ಅದಕ್ಕುಂಟು ಬೆಲೆ ನಿಮ್ಮ ಮೆಚ್ಚುವವರು ಅಂತರಂಗವ ಬಯಸುವರು ತೋರಿಕೆಯ ಬಹಿರಂಗ ಕಿಡಿಗೇಳಿಗಳ ಮನ ಬಂಗ ಸೂಕ್ಷ್ಮ ಮಾತನ್ನು ತಿಳಿಯಿರಿ , ಅಪಾಯವ ಉಪಾಯದಿಂದ ಗೆಲ್ಲಿರಿ. !!