Tuesday, June 10, 2014

ಸೆರೆಮನೆ

ನಿನ್ನ ಪ್ರೀತಿಸುವ ತಪ್ಪು ಮಾಡಿರುವೆ ಗೆಳೆಯಾ...
ಮಣ್ಣಿಸು ನನ್ನ, ಬಂಧಿಸಿ ಬಿಡು ನಿನ್ನ ಹೃದಯದ ಸೆರೆಮನೆಯಲ್ಲಿ...
ನಿನ್ನ ಸನೀಹ ಬಯಸಿದ ನಾನು, ಖೈಧಿಯೇ ಸರಿ....!!

Friday, June 06, 2014

ಕೋಪ

ಅವಳಿಗೋ ಅತಿಯಾದ ಕೋಪ
ಕಿತ್ತೆಸೆದಳು ಗೆಳೆಯರ ಬಳಗದಿಂದ ಹಾಕುತ್ತಾ ಶಾಪ
ಗೆಳೆಯರಂತಿದ್ದವರೆಲ್ಲಾ ಹುಸಿಗೊಳಿಸಲು ಅವಳ ನಂಬಿಕೆಯ
ಮತ್ತೆ ವಾಲಿತು ಅವಳ ಮನ ಅವನಿದ್ದಕಡೆಗೆ... ಅನ್ನಿಸುತ್ತಾ ಪಾಪ..!

ಹುಚ್ಚು ಮನ

ಕಣ್ಣ ಮುಂದೆ ಇರುವಾಗ ತಾತ್ಸಾರ ತೋರುವ ಮನ
ಬಳಿ ಇರದಾಗ ಅವಳನ್ನೇ ಹುಡುಕುತ್ತಿರುತ್ತದೆ...ಹುಚ್ಚು ಮನ.! 

Thursday, June 05, 2014

ಭಾಷ್ಪ

ದುಃಖ ಉಮ್ಮಳಿಸಿದ್ದಾಗ ಸುರಿಸುತ್ತಾರೆ ಕಣ್ಣೀರು 
ಸಂತೋಷಕ್ಕೂ ಹರಿಸುತ್ತಾಳೆ ಹನಿಗಳು ಹಲವು
ತಿಳಿಯದಿವಳ ಮನ.., ಏತಕ್ಕಾಗಿ ಈ ಒಲವು ?

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...