Tuesday, October 29, 2013

ಎಂದೋ ಉದುರಿದ ಕಂಬನಿಗಳಿಗೆ ಬೆಲೆ ಬಂದೀತೆ ?

ಬಿದ್ದ ಕ್ಷಣವೆ ಅದು ಒಣಗಿ ಹಳಕುಪ್ಪಾಯಿತು

ಮಳೆ ಬಂದೊಡನೆ ಮತ್ತೆ ಕರಗಿ ಹೋಯ್ತು

ಹರಿದು ಭೂಮಿಯೊಳಗೆ ಸಮಾಧಿ ಸೇರಿತು ...

ಇನೆಲ್ಲಿಯ ಬೆಲೆ ಆ ಕಂಬನಿಗಳಿಗೆ...??


ದುಃಖ ಉಮ್ಮಳಿಸಿ ಬಂದ ಕಂಬನಿಗಳಲ್ಲ ಅವು..

ಕಪಟತನದಿಂದ ಗೆಲ್ಲಲು ಹೊರಟ ಮೊಸಳೆ ಕಣ್ಣೀರು

ಗಳಗಳನೆ ಸುರಿದೊಡೆ ಮನವು ಕರಗದು

ಗೀಳಲ್ಲ ಅದು, ಬರೀ ಟೊಳ್ಳು..ಇನ್ನೆಲ್ಲಿಯ ಬೆಲೆ ಆ ಕಂಬನಿಗಳಿಗೆ..??



Friday, October 25, 2013

ಕಣ್ಣುಗಳು

ಮನಸು ಹೃದಯ ಹೇಳದ ಮಾತುಗಳ

ಸಣ್ಣ ಸನ್ನೆಯಲೇ ತೋರಿಸುವ ತುಂಟರು !!

Tuesday, October 22, 2013

THOUGHT FOR THE DAY

You cannot force anyone to love you. So just be you. Those who leave you because they are selective about what they want you to be like, never loved you. Never change for anyone because it never lasts. Be true Be real Be you. (courtesy : Internet)
ತಾಕತ್ತು

-------
ರಕ್ಕಸರನ್ನೂ,

ಮನುಷ್ಯರನ್ನಾಗಿಸುವುದು..

" ಪ್ರೀತಿ "

******
ರಕ್ಕಸಗಣ
---------
ಪ್ರೀತಿಯ ನೆಪ ಮಾಡಿ...,

ಮನುಷ್ಯರನ್ನು ವಂಚಿಸುವರು " ರಕ್ಕಸರು "

ಸ್ವಲ್ಪ ಹುಳಿ - ಸ್ವಲ್ಪ ಖಾರಾ

ಹುಡುಗರ ಹೃದಯವದು,

ಇಣುಕುವ ಕನ್ನಡಿಯಲ್ಲ !

ಇಣುಕಿ ನೋಡಿದಾಗಲೆಲ್ಲಾ..,

ನಿಮ್ಮದೇ ಬಿಂಭ ಕಾಣುವುದಿಲ್ಲ !!.

Friday, October 18, 2013

ಹೊಸ ಜನುಮ

ತಾಯ್ತನದ,


ಸುಖದ ಸುಪ್ಪತ್ತಿಗೆಯಲಿ..

ತೇಲುತಿದೆ ಅವಳ ನಗು...!

ಮನೆಯವರೆಲ್ಲರ,

ಸಂತೋಷಕ್ಕೆ ಕಾರಣ...

ನವ ಜನುಮವಿತ್ತ ಮಗು..!!

Thursday, October 17, 2013

ದ್ವಂದ್ವಾರ್ಥ

-------------------

ಕಣ್ಣು ತುಂಬಿ ಬರುತ್ತಿದೆ..

ಅವಳು ತೊರೆದು ಹೋದ ಕಾರಣಕ್ಕಲ್ಲ..,

ಅವಳು ಘಾಸಿ ಮಾಡಿ ಹೋದ ಮನಸ್ಸಿನ ಗಾಯಕ್ಕೆ !!

-------------------

ಕಣ್ಣು ತುಂಬಿ ಬರುತ್ತಿದೆ

ಯಾವುದೊ ಕಾರಣಕ್ಕೂ.. ದುಃಖವಲ್ಲ !

ವಿಶ್ರಮ ಕಾಣದ ಕಣ್ಣುಗಳಿಗೆ

ನಿದ್ದೆ, ಕಣ್ಣು ತುಂಬಿಕೊಂಡು ಬರುತ್ತಿದೆ.!!

==================

ಚುಟುಕ

ಕುಣಿತದಲ್ಲಿ


ಪ್ರಾವಿಣ್ಯತೆ ತೋರಿದ ಅವಳು,

ಭಾರಿ ಚೂಟಿ !

ಇಂದು,

ಪಾಕ ಪ್ರವೀಣೆ ಅಂತಾನೂ ತೋರಿಸಿದಳು,

ಅಡುಗೆಯ ರುಚಿ !!

Wednesday, October 16, 2013

ಶ್ರೀಮಂತ ಸಾಮ್ರಾಜ್ಯ


ವಿಜಯದಶಮಿಯಂದು

ನಮ್ಮ ನಗರ ವಿಜಯನಗರ ಸಾಮ್ರಾಜ್ಯ !

ಮಾರುಕಟ್ಟೆಯ ಬೀದಿ ಬೀದಿಗಳಲ್ಲಿ

ಬಿದ್ದಿತ್ತು ರಾಶಿ ರಾಶಿ ಬಂಗಾರದ ತ್ಯಾಜ್ಯ !!

Monday, October 14, 2013

ಪ್ರವಾಸ

ಮೂರು ವರುಷದ ನಂತರ
ಮತ್ತೆ ಕೂಡಿ ಬಂತು ಅವಸರ
ದೂರದ ಊರಿಗೆ ಪ್ರಯಾಣ
ಹಾರಬೇಕಿತ್ತು ಬಾನ ಎತ್ತರ
ಒಂದು ತರಹದ ಖುಶಿ, ಸಡಗರ
ತಲುಪಿ ಕಲಿಯುವುದ ಕಾತರ
ಒಂದೊಳ್ಳೇಯ ಅವಕಾಶ
ಬಿಡದೇ ಉಪಯೋಗಿಸಿದೆ ಸಮಯ
ಐಶಾರಾಮಿ ಜೀವನದ ಸಿಂಚನ
ದಿನಗಳೆದ ಕ್ಷಣಗಳೆಲ್ಲಾ ಮಧುರ !!

Saturday, October 12, 2013

ಗುಟ್ಟು

ಹೃದಯಕ್ಕೆ ಲಗ್ಗೆ ಇಡಲು..
ಬೇಕಿಲ್ಲಾ ಯಾವುದೇ ಹೆದ್ದಾರಿ.
ಪ್ರೀತಿ ನಿಜವಿದ್ದರೇ ಸಾಕು,
ಅದುವೇ ದೊಡ್ಡ ರಹದಾರಿ !!

Monday, October 07, 2013

ಸಮಾಧಿ

ಆ ಶರೀರಗಳಿಗೆ ಕೂಡಿ ಬಾಳುವ ಯೋಗವಿರಲಿಲ್ಲ

ಒಬ್ಬರನೊಬ್ಬರು ಒಪ್ಪುವ ತಿಳಿ ಇರಲಿಲ್ಲ

ನಂಬಿಕೆ ಉಳಿಸಿಕೊಂಡು ನಡೆದುಕೊಳ್ಳುವ ಪರಿ ಗೊತ್ತಿರಲಿಲ್ಲ

ಹೀಗಾಗಿ ಮತ್ತೊಂದು ಹೆಣ ಇಂದು ಸಮಾಧಿ ಸೇರಿತು !


ವಂಚನೆಯ ಗುರಿ ಇಟ್ಟುಕೊಂಡು, ನ್ಯಾಯವ ಮೆರೆಯಲಿಲ್ಲ

ಲೂಟಿ ಮಾಡುವ ದುಷ್ಟ ದರ್ಪ, ಶಿಷ್ಟ ರೀತಿಯೇ ಗೊತ್ತಿಲ್ಲ

ಒಳ್ಳೇಯ ತನದ ಆದರಿಸದ ದೇಹಗಳು, ಕೃತಜ್ಞತೆಯೇ ಗೊತ್ತಿರಲಿಲ್ಲ

ಹೀಗಾಗಿ ಮತ್ತೊಂದು ಹೆಣ ಇಂದು ಸಮಾಧಿ ಸೇರಿತು !

(ಇದು ಸಮಾಜದಲ್ಲಿ ಕಡಿದು ಬೀಳುವ ಸಂಬಂಧಗಳ ಹೆಣ ಸಮಾಧಿ ಸೇರಿದ ಕವನ !!)

ಹನಿ

ನಾ,

ಮಾಡದ ತಪ್ಪುಗಳಿಗೆ

ಅರಚುತ್ತಿದ್ದ ಅವಳ ತುಟಿಗಳೆಗೆ ..

ನನ್ನ ತುಟಿಗಳಿಂದ

ಜಡಿದೆ, ಬೀಗದ ಮುದ್ರೆ..!!

Thursday, October 03, 2013

" ಜೈ " ಲ ಬದುಕು

ಏಳು ತಲೆಮಾರುಗಳು ಕೂತು ತಿನ್ನುವಷ್ಟು ಸಂಪತ್ತು
ಮೋಸ ವಂಚನೆ ಮಾಡೋದು ಏಕೆ ಬೇಕಿತ್ತು
ಕೊಳ್ಳೆ ಹೊಡೆದು ಭೂ-ಗಣಿ ಸಂಪತ್ತು
ಯಾವ ಐಷಾರಾಮಿ ಜೀವನ ಕಾಣಬೇಕಿತ್ತು
ತಿಂದು ಹೊಟ್ಟೆ ತುಂಬಿಸಿಕೊಳ್ಳಲು ಅನ್ನವೇ ಬೇಕು
ವಂಚನೆಯ ಹಣ, ಹೊನ್ನು, ಸಂಪತ್ತು ತಂತಲ್ಲಾ ನಿನಗೆ ಆಪತ್ತು
ಜೈಲಿನ ಸೊಳ್ಳೆ ತಿಗಣೆಗಳ ಜೊತೆ ಸರಸಾಟ ಬೇಕಿತ್ತಾ..., ನಿನಗೆ ಈ ಬದುಕು...?

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...