ಯಾಕೋ ಇಂದಿಂದು ಕನಸುಗಳದೇ ಕಾರುಬಾರು
ಇರುಳ ತೋಳಲಿ ನಿದ್ದ್ರೆಗೆ ಜಾರುತಲಿ
ಲಗ್ಗೆ ಇಡುವವು ಮುಖಗಳು ಸಾವಿರಾರು ..
ಮುಖ ಪರಿಚಯವೇ ಇಲ್ಲದ ಮುಖಗಳು
ನಸು ನಕ್ಕು ಶೂನ್ಯದಡೆಗೆ ಜಾರಿದರು
ತಿರುಗಿ ನೋಡಿದೊಡನೆ ಅಲ್ಯಾರೂ ಇಹರು
ಕೆಲವು ಕೋಪಗೊಂಡ, ಭೀತಿಗೊಳಿಸುವ ಮುಖಗಳು
ಯಾರದೋ ಮೇಲಿನ ಸಿಟ್ಟಿಗೆ ನನ್ನ ದುರುಗುಟ್ಟುತ್ತಿದ್ದರು
ಭಯದ ಛಾಪು ಮೂಡಿಸಿ, ಕತ್ತಲೆಯ ಬಾವಿಗೆ ದೂಡಿದರು
ಇನ್ನು ಪಾಪ ಮುಘ್ಧ ಮುಖಗಳು
ತಮ್ಮ ಅಗಲಿದ ಆತ್ಮಿಯರ ಹುಡುಕುತ್ತಿದ್ದರು
ಅವರಿವರ ಬಳಿ ತೆರಳಿ ಪರಿಚಯ ಕೇಳುತ್ತಿದ್ದರು
ಇನ್ನು ರೋಧಿಸುತ್ತಿದ್ದ , ಅಳು ಮುಖಗಳು
ವಿಧಿಯ ಆಟಕೆ ಕಂಗೆಟ್ಟ ಮೂಕರು
ಮರಳಿ ಬಾರದ ಜೀವಗಳಿಗೆ ತಪಿಸುತ್ತಿದ್ದರು
ಯಾಕೋ ಇಂದಿಂದು ಇಂತಹ ಕನಸುಗಳದೇ ಕಾರುಬಾರು
ಇರುಳು ಕಳೆದು ಬೆಳಗಿನ ಮುಂಜಾವಲಿ
ಮರೆಯಾಗುವವು.. ಅವೇ ಮುಖಗಳು ಸಾವಿರಾರು ..!!