
ಧ್ವನಿ ಕೇಳಿಬರುತಿದೆ ..
ಆಗಸದ ತೀರದಿಂದ ...!
ಮಧುರ ಸವಿ ಧ್ವನಿ ಅದು,
ಮೋಡಗಳ ನಡುವೆ..
ಅವಿತು ಕರೆದಿಹುದು ...
ಮಿಂಚಿನ ಆಟಕೆ,
ಗುಡುಗಿನ ಅಬ್ಬರಕೆ..,
ಹೆದರಿ ನನ್ನಯ ಕೂಗುತಿಹುದು...
ಮನವು ಕರಗಿ ಆ ಧ್ವನಿಯನ್ನೇ
ಅರಸುತಿರುವುದು ....!
ಕರಿ ಮೋಡಗಳೇ ಕಾಡದಿರಿ ಅವಳನ್ನ ..
ನಿಮ್ಮಯ ಛಾಯೆಯ ತೆರುವು ಮಾಡಿರಿ...!
ಹೃದಯವು ಅವಳನ್ನು ಕಾಣಲು ಬಯಸಿಹುದು ..
ನನ್ನಯ ಪ್ರೇಯಸಿಯ ಬಿಟ್ಟು ಬಯಲಾಗಿರಿ ...!
ಮಳೆಯಂತೆ ವೇಗವಾಗಿ ಸುರಿದು ಬರಲಿ...
ನನ್ನೆದೆಯ ಭೂಮಿಯ ಅವಿಚುಕೊಳ್ಳಲಿ ...!