Thursday, October 28, 2010

ನನ್ನ ಮೊದಲ ಹಾರಾಟ ..!



ರೆಕ್ಕೆ ಇರದೇ ಹಾರುವ ಕುತೂಹಲ ,
ಒದಗಿ ಬಂತು ಆ ಅವಸರ ಒಂದು ಸಲ !
ನನ್ನ ಕಛೇರಿಯವರು ಏರ್ಪಡಿಸಿದ್ದರು ಪ್ರವಾಸ
ದೂರದ ಊರಿಗೆ ಹಾರಲು ಕಲ್ಪಿಸಿಕೊಟ್ಟಿದ್ದರು ಅವಕಾಶ
ಮೊದಲ ವಿಮಾನ ಯಾನವದು ನನ್ನದು ..
ಹತ್ತಿ ಕೊಂಡೊಡನೆ ಎದೆ ಢವ ಡವಿಸಿತ್ತು !
ಮೆಲ್ಲನೆ ಸಾಗಿತ್ತು ಉದ್ದನೆಯ ರನ್ ವೆ ಯೊಳಗೆ
ತಿರುಗಿ ನಿಂತಿರಲು ಮತ್ತೊಂದು ಕಡೆ ಇಂದ ,
ಮುನ್ನಿಗ್ಗಿ ಬರುತಿರುವ ವಿಮಾನ ಕಂಡು ಎದೆ ಝಲ್ ಎಂದಿತ್ತು !
ನಿಟ್ಟುಸಿರು ಬಿಟ್ಟೆನು... ಆ ವಿಮಾನ ಕೆಳಗಿಳಿದು ನಮಗೆ ದಾರಿ ಬಿಟ್ಟ ನಂತರ ..
ಸುಯ್ಯನೆ ಶುರುವಾಯಿತು ಜೋರಾಗಿ ಕೂಗುತ್ತ
ವೇಗ ಹೆಚ್ಚಿದೊಡನೆ ರೋಮ ರೋಮವೆಲ್ಲ ಕಂಪನ ,
ಎರಡೇ ನಿಮಿಷದಲ್ಲಿ ಗಾಳಿಯಲ್ಲಿ ತೇಲುತ್ತಿದ್ದೆವು !
ಮರುಳಿ ತಿರುಗಿದಾಗ ಎದೆ ಕಲುಕುವ ಆಭಾಸ
ಊರು, ಕೇರಿ, ಭೂಮಿ, ಇಂದ ಬಲು ಎತ್ತರ
ನನ್ನ ಹೃದಯದಲ್ಲೆಲ್ಲಾ ತುಂಬಿತ್ತು ಸಂತಸ ಅಪಾರ !
ಮೋಡಗಳೆಲ್ಲ ನನ್ನ ಕಾಲ ಕೆಳಗೆ
ಎಂದೋ ಅಂದು ಕೊಂಡಿದ್ದೆ ಬರಬೇಕು ಇ ಗಳಿಗೆ
ಸಂಜೆಯ ಸೂರ್ಯ ಕಿಟಕಿ ಇಂದ ಇಣುಕಿದ
ಜಂಭದಿ ಹೇಳುವೆನು ಇಂದು , ನಾನು ನಿನ್ನ ಸಮಾನ
ಖುಷಿ ಖುಷಿ ಇಂದ ಕಣ್ಣ ಮುಚ್ಚಿ ಲೀನ ನಾದೆನು
ಮಧುರ ಧ್ವನಿಯೊಂದು ಅಲೆಯಾಗಿ ಬಂದಿತು
ಯುವರ್ ವೆಜಿಟೆಬಲ ಸ್ನ್ಯಾಕ್ಸ ಸರ್ ಅಂದಳು
ಪಕ್ಕದಲ್ಲಿ ಬಂದು ನಿಂತು ಗಗನ ಸಖಿ !
ಕೆಂಪು ಉಡುಗೆ ತೊಟ್ಟು ,
ಕೆಂಪನೆಯ ಲಿಪ್ಸ್ಟಿಕ್ಕು ಇಟ್ಟು,
ಕಿಲಕಿಲನೆ ನಸು ನಕ್ಕಿದ್ದಳು ..
ಹುಬ್ಬುಗಳ ಹಾರಿಸಿ ಮುಂದೆ ಸಾಗಿದ್ದಳು !
ಒಂದುಗಂಟೆ ಕಳೆಯುತಿದ್ದಂತೆ
ಮತ್ತೆ ಅದೇ ಮಧುರ ಧ್ವನಿಯೊಂದು ಮೂಡಿತು
ನಿಮ್ಮ ನಿಮ್ಮ ಪೇಟಿಗಳನ್ನು ಕಟ್ಟಿಕೊಳ್ಳಿ
ನಾವು ಇನ್ನು ಭೂ ಸ್ಪರ್ಶಿಸುತ್ತೇವೆ ಎಂದು
ಅಲ್ಲಿಗೆ ನನ್ನ ಮೊದಲ ವಿಮಾನಯಾನ ಮುಗಿದಿತ್ತು !
ಕುತೂಹಲ ನೆರವೇರಿದ ಖುಷಿ
ಕನಸ್ಸು ನನಸಾದ ಸಂತೃಪ್ತಿ ...!

Saturday, October 16, 2010

ಕನ್ನಡಿ



ಕನ್ನಡಿಯೇ ಮನುಷ್ಯನ ಆತ್ಮೀಯ ಸ್ನೇಹಿತ!
ನಾವು ನಕ್ಕರೆ ಕನ್ನಡಿಯೂ ನಕ್ಕು ನಗೆಯ ಹಂಚುವುದು ...
ನಾವು ಅತ್ತರೆ , ಅದು ಕೂಡ ನಮ್ಮ ಜೊತೆಯಲೇ ಅಳುವುದು...
ನಿನಂತೆಯೇ ನಾನು ...ನಿನ್ನೊಡನೆ ಎಂದೆಂದೂ ...
ಇದ್ದರು ಜೊತೆಯಲಿ ....ಅಳಿದರೂ ಜೊತೆಯಲಿ...
ಚೂರು ಚೂರಾದರೂ ಕನ್ನಡಿ ...ಬಿಡದು ತನ್ನ ಸ್ವಭಾವವ ..
ಪ್ರತಿಯೊಂದು ಚೂರಿನಲು ನಮ್ಮದೇ ಬಿಂಬವು...
ಬಿಡದೆ ಕಾಡುವುದು ...ಬಿಟ್ಟು ಎಂದೆಂದೂ ಹೋಗದು...
ನಮ್ಮ ಒಂಟಿತನಕೆ ಕನ್ನಡಿಯೂ ಪಾಲುದಾರ ..
ನಮ್ಮ ಬದುಕಿಗೆ ನಿರಂತರ ಜೊತೆಗಾರ..!

ಮೌನರಾಗ

ಯಾವುದೊ ಹಳೆಯ ಕವಿತೆ ಅದು
ನೋವಿನ ಖಾತೆಯ ಹೆಣೆದಿಹುದು
ಬಿಚ್ಚಿಟ್ಟು ಹೇಳದ ಸಂಗತಿಗಳು
ಅವಿತು ಕುಳಿತ ನೆನಪುಗಳು
ಒಡಲು ತುಂಬಿ ಉಕ್ಕಿಹವು
ಹಾಡಲು ಬರಲಾರದು
ಗುನುಗುತಾ ಗುನುಗಲಾರೆನು
ನಿಶಬ್ದದಿ ಹೊರಡುತಿದೆ ಮೌನರಾಗ ...!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...