Tuesday, July 27, 2010
ಆ ಹೆಸರಿಗೆ .......ಕಳಂಕ ನೀನು...!!!
ತನಗಾಗಿ ಬಾಳದೆ ತನ್ನವರಿಗಾಗಿ ಬೆಳಗುವುದು ದೀಪ ,
ಕತ್ತಲೆಯ ಬಡಿದೋಡಿಸಿ ಬೆಳಕನ್ನು ಚೆಲ್ಲುವುದು ದೀಪ .!
ತನ್ನನ್ನೇ ಸುಡುತ್ತಾ ತನ್ನವರಿಗಾಗಿ ಶ್ರಮಿಸುವುದು ದೀಪ
ನಂಬಿ ಪ್ರೀತಿಸಿವವರನ್ನು ಕಾಪಾಡುವುದು ದೀಪ,
ಇದ್ದ ಮನೆಗೂ, ಹೋದ ಮನೆಗೂ, ಬೆಳಗುತ್ತದೆ ದೀಪ .!
ಆ ದೀಪದ ಹೆಸರಿಗೆ ಕಳಂಕ ತಂದಂತೆ ನಿ .....,
ಪ್ರೀತಿಯ ಚಿಲುಮೆ ಹಚ್ಚಿ ನಿ ಬೆಳಗುವ ಬದಲು ..,
ಅಹಂಕಾರ, ನಂಬಿಕೆ ದ್ರೋಹ ಮೆರೆದು,
ಗಂಡ, ಮನೆ ಮಂದಿಯ ಮನಸ್ಸಿಗೆ ಬೆಂಕಿ ಹಚ್ಚಿ ಹೋದಳು.!
ನೊಂದವರ ಶಾಪ ನಿನಗೆ ಎಂದೆಂದಿಗೂ ತಪ್ಪದು...!!!
Monday, July 26, 2010
ಹಸಿರು ಅಂದ ...ಹಸಿರೇ ಚಂದ ..!!
ಮೋಡ ಮುಸುಕಿದೆ ಇಂದು ಜಗವೆಲ್ಲ
ಜಡಿ ಮಳೆ ಬಿದ್ದ ಹನಿಗಳಿಂದ ಭೂಮಿಯಲ್ಲ ಹಸಿರು
ಹಸಿರು ಕೊಸರಿಕೊಂಡಂತೆ ಗದ್ದೆ ಕಣಿವೆಗಳೆಲ್ಲ
ಹಸಿರ ಉಟ್ಟ ಪೈರು , ಹಸಿರ ಹೊತ್ತ ತೇರು
ಹಸಿರ ಬಸಿರ ಜಾತ್ರೆಯಲಿ ಮನಸ್ಸು ಕೂಡ ಹಚ್ಚ ಹಸಿರಾಗಿದೆಯೆಲ್ಲ
ಕೆರೆಯ ಮೇಲೆ ಪಚ್ಚೆ ಹಸಿರು, ಬಂಡೆಗಳ ಮೇಲೆ ಪಾಚಿ ಹಸಿರು
ಹಸಿರ ವನಶ್ರೀ ನಡುವಿನಲ್ಲಿ ಕಪ್ಪು ಹೆದ್ದಾರಿ ಹಾದಿಹೆಯಲ್ಲ
ತೆಂಗಿನ ಗರಿಯ ಹಸಿರ ನಡುವೆ ಕೋಗಿಲೆ ಅದು ಕೂಗುತಿಹುದು
ತಿಳಿಯ ಹಸಿರ ಗಿಳಿರಾಮ ಕೂತು ಹಣ್ಣ ಸವೆದಿಹನಲ್ಲ
ಪ್ರಕೃತಿಯ ಹಸಿರು ತಂತು ... ಇಂದು ಧರೆಗೆ, ಅಂದ ಚಂದ ..!
Monday, July 19, 2010
ಗುಲಾಬಿಗಳ ನಡುವೆ ಸೂರ್ಯಕಾಂತಿ
ಮುಳ್ಳಿನ ಕಂಟಿಯ ನಡುವೆ, ನಸು ನಗುವ ಸೂರ್ಯಕಾಂತಿ
ಮಂಜು ಬಿದ್ದ ಹನಿಗೆ ಮಿಂಚಿದೆ ಕಣ್ಣ ಕಾಂತಿ.!
ನಲಿವ ಗುಲಾಬಿಗಳು ನಿನ್ನ ತುಟಿ ಸವರಿದಂತೆ ..
ಮುಳ್ಳಿನ ಹಣಗೆ ನಿನ್ನ ಕೇಶ ಬಾಚಿದಂತೆ .!
ಮನದ ಭಾಷೆಯನಾಡಿ ನಿ ಹೃದಯ ಕದ್ದಂತೆ ..
ನಗುವ ಗುಲಾಬಿಗಳ ನಡುವೆ ನಿ, ಕಾಯುತ ನಿಂತೆ.!
ಕೆಂಪು ಪಕಳೆಯ ಹಾಸಿಗೆ ಹಾಕಿದಂತೆ ..
ನವ ವಧುವು ನಿನಾಗಿ .....ನನ್ನ ಸನಿಹಕೆ ಕರೆದಂತೆ...!!!
********ಭಾವಪ್ರಿಯ *********
Friday, July 09, 2010
ಪ್ರಕೃತಿಯ ಸೊಬಗು..!
ಮೇಘ ಮಾಯೆಗೆ ಒಡಲು ತುಂಬಿ, ಸಂತಸದ ಶಬ್ದ
ಜಿಣು ಜಿಣುಗೊ ಹನಿಗೆ ಇಂದು, ಜಿಣುಗೂಡೊ ಹಬ್ಬ
ಆಫೀಸಿನ ಕಾಜಿನ ಕಿಡಕೀಯ ಮೇಲೆ ಮಳೆ ಹನಿಯ ದಿಬ್ಬ .
ಸೂರ್ಯನಿಂದು, ತನ್ನ ಕೆಲಸಕೆ ಗೈರು ಹಾಜರಿ.!
ಭೂಮಿಗಿಂದು ಮಳೆಯ ಜೋತೆಯಲಿ, ಗಾನ ಲಹರಿ..
ಚಂದ್ರನಂತೂ ನಾಳೆಯ ತನಕ.. ನಿದ್ರೆಯಲ್ಲಿ ಸುವಿಹಾರಿ.
ಹಕ್ಕಿಗಳು ತಮ್ಮ ಗೂಡಲ್ಲಿ ಕ್ಷೇಮ
ಗಿಡ ಮರಗಳೇ ಅವುಗಳಿಗೆ ವಿಶ್ರಾಂತಿ ಧಾಮ..!
ಸತಿ ಪರಿವಾರದೊಡನೆ ಹಂಚಿಕೊಂಡಾವ ಪ್ರೇಮ.
ಮಳೆಯ ಸಿಂಚನದಿಂದ ಇಂದು ಭೂಮಿಯೆಲ್ಲಾ ಹಸಿರು
ಧರೆಯ ಎಲ್ಲಾ ಹೃದಯಗಳಿಗೆ ನವಿರು ಹಚ್ಚನೆಯ ಚಿಗುರು
ಮನವು ಉಲ್ಲಾಸಗೊಂಡಿದೆ ಕಂಡು ಪ್ರಕೃತಿಯ ಸೊಬಗು..!
- ಭಾವಪ್ರಿಯ
Thursday, July 08, 2010
ಸೌಂದರ್ಯ ನಶಿಸುವ ತನಕ .......!
Subscribe to:
Posts (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಕನ್ನಡಿಯೇ ಮನುಷ್ಯನ ಆತ್ಮೀಯ ಸ್ನೇಹಿತ! ನಾವು ನಕ್ಕರೆ ಕನ್ನಡಿಯೂ ನಕ್ಕು ನಗೆಯ ಹಂಚುವುದು ... ನಾವು ಅತ್ತರೆ , ಅದು ಕೂಡ ನಮ್ಮ ಜೊತೆಯಲೇ ಅಳುವುದು... ನಿನಂತೆಯೇ ನಾನು .....
-
ಹಸಿರು ಮಾನವನ ಜೀವದ ಉಸಿರು ಹಸಿರು ಇದ್ದಾರೆ ಭಾಗ್ಯ , ಹಸಿರು ತರುವುದು ಸೌಭಾಗ್ಯ ಹಸಿರು ಬೆರೆತಿರಲು ಜೀವನ , ಹಸಿರು ಬದುಕಿನ ಪಯಣ ಕಾಡು ಬೆಳೆದರೆ ನಾಡಿಗೆ ಮಳೆ , ಸೋನೆ ಗರ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...