Saturday, July 04, 2020

ಧಾರವಾಡ ಮಳಿ...!


ಧಾರವಾಡದಾಗ ಬಂದ್ರ ಮಳಿ
ಊರ ಓಣಿ ತುಂಬಿದ ಹೋಳಿ..!!
ಸಂತಿ ಪ್ಯಾಟ್ಯಾಗ ರೊಜ್ಜಿನ ಥಳಿ
ಗಡಗಡ ನಡುಗಿಸುವ ಚಳಿ..!!

ಬೀಸಿ ಹೊರಟೈತಿ ತಣ್ಣನೆ ಗಾಳಿ
ಬುಡಮೇಲಾಗಿ ಬಿದ್ದಾವ ಮರ-ಕಂಬ..!!
ಭರ್ ಎಂದು ಹೋದಾಗ ಮೋಟರ್ ಗಾಡಿ
ತೂರಿ ಸಿಡಿದೈತಿ ದೂರ ರಾಡಿ..!!

ಜಿಟಿ ಜಿಟಿ ಮಳ್ಯಾಗ ನೆನಕೊಂಡು ಹೊರಟಾರ
ಬೆನ್ನಮ್ಯಾಗ ಪಾಟೀಚೀಲ ಹೊತ್ತ ಹುಡುಗೂರು..!!
ಕುಣಿ ಕುಣಿದು ಜಿಗದಾನ ರೈತ
ಉತ್ತಿ-ಬಿತ್ತುವ ಕಾಯಕವ ನೆನಸ್ಕೊಂಡು..!!

ಪುಟ್ಯಾಗ ಕಾಯಿಪಲ್ಲೆ ಮಾರಕಿ ಪಾಪ
ಪೋಲಿಸ್ ಮಾಮಾಗ ಹಾಕ್ಯಾಳ ಶಾಪ..!!
ಹಣ್ಣ ಮಾರವ ವ್ಯಾಪಾರಿಯೊಬ್ಬ
ಗಿರಾಕಿಯ ಬರಾಕ ಹಾಕ್ಯಾನ ಜೊಪ್ಪ..!!

ಭಿಕ್ಷಕನಿಗೂ ಹೊಟ್ಟೆ ಪಾಡು
ಹುಡುಕ್ಕೊಂಡು ಓಡ್ಯಾನ ಸೂರಿನ ಜಾಡು..!!
ಮಳಿ ಬಂದ್ರ ಧಾರವಾಡದಾಗ
ಮಂದಿ ಬದುಕ ಮೆರವಣಿಗ್ಯಾಗ..!!




ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...