Wednesday, February 26, 2020

ಸಾಹುಕಾರ

ವಾಹನ ಹೃದಯ ಸಂಚಾಲಕ
ಯೋಗ ಪ್ರೀಯ, ಯೋಗ ಮಾನವ
ಕೋಟಿ ಕೋಟಿ ಅಂತಸ್ತಿನ ಸರದಾರ

ಬಾಗಲಕೋಟೆಯ ಸಾಹುಕಾರ
ಎಲ್ಲಾ ಸುದ್ದಿ ಗಳಿಸುವ ಚತುರ

ಗುಸು ಗುಸು ಮಾತಿನ ಮಲ್ಲ
ಅದ್ದಿ ಕುಡಿಯುವ ಚಾ,ಜೇನು-ಬೆಲ್ಲ
ಕಛೇರಿಯಲ್ಲಿ....,

ವಿನಯನ ಕಾಣದೇ ಗೌಡರಿಗೆ ನೆಮ್ಮೆದಿ ಇಲ್ಲಾ !

ನಮ್ಮ ರಾಘು

ರಾಘು ರಾಘು
ಪೂರಿಯೊಳಗಿನ ಸಾಗು
ಪಾನಿ ಪುರಿ, ಬೇಲ್ ಪುರಿಯ
ಪ್ರೀತಿಸುವ ಮಗು
ನಾಲಿಗೆ ರುಚಿಗೆ ಸುತ್ತುತ್ತಾನೆ
ಪ್ರತಿ ಹೋಟೆಲ್ ಸೂರು
ತೃಪ್ತಿ ಆಗದು ಎಷ್ಟೇ ಸುತ್ತಿದರೂ
ದೊಡ್ಡ ದೊಡ್ಡ ಮಾಲು
ಇವನ ಜೊತೆಗೂಡಿ ಕುಲ್ಫಿ
ತಿನ್ನುವರು ಕೆಲವರು
ನೆಗಡಿ ಬಂದೊಡನೆ
ಎಳೆಯುವರು ಇವನ ಕಾಲು
ಈಗ ನಮ್ಮ ರಾಘು
ಮಾಡಿಹನು ಕಛೇರಿಯ ಡಾಯಟ್ಟು
ಬಿಟ್ಟು ಬಿಟ್ಟಿದ್ದಾನೆ ಊಟದಲ್ಲಿ ಸ್ವೀಟು
ಸಂಜೆ ಸ್ನ್ಯಾಕ್ಸಿಗೂ ಹಾಕಿದ್ದಾನೆ ಗೇಟು
ಇನ್ನೂ ವಜ್ಜೆ ಇಳಿಸೋದು.., ನೋ-ಡೌಟು !!

Thursday, February 13, 2020

ಅನವರತ

ಗಳತಿ,
ಪ್ರೀತಿಯ ಹುಡುಕ ಬೇಡ
ಬರಿ ಫೆಬ್ರುವರಿ ತಿಂಗಳೊಳಗೆ !

ಅದು ಅಡಗಿಹುದು ಅನವರತ
ವರ್ಷದ ಪ್ರತಿ ದಿನಗಳೊಳಗೆ !!


Wednesday, February 12, 2020

ಮಹಾಸಮರ

ಪೊರಕೆಗೂ ಕಮಲದ
ನಡುವೆ ಭಾರಿ ಸಮರ !


ಕಮಲ ಬೀಗಿತ್ತು
ಅಲೆಯ ಸುಳಿಯಲಿ !

ಮೆರೆದಿದ್ದು ಒಣ ಜಂಭ
ಹಚ್ಚಿ ಧರ್ಮದ ಕಿಚ್ಚಿನಲಿ !

ಪೊರಕೆ ಮಾತ್ರ ಮಗ್ನ
ಕಾಯಕದ ಮಡುವಿನಲಿ !

ಜಂಭದ ಕೋಳಿಯ
ಗೋಲಿಗಳ ಮಾತು..

ಪರಿಣಾಮವೇ ಬೀಳಲಿಲ್ಲ
ಪೊರಕೆ ತಾಳಿತ್ತು ಮೌನದ ಗತ್ತು !

ಕೇಡು ತಿರುಗಿ ಬಂತು ಫಲಿತಾಂಶದ ದಿನದಂದು
ಕಮಲ ಮುದುಡಿ, ನೆಲಕಚ್ಚಿತ್ತು..!

ಸೌಮ್ಯತೆ ಮೆರೆದ ಪೊರಕೆ
ಜಯಗಳಿಸಿ,ಕಸವ ದೂಡಿ ಗೂಡಿಸಿತ್ತು !!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...