Thursday, July 30, 2015

Tuesday, July 21, 2015

ಚುಟುಕ

ಅವಳು ಜೊತೆಯಲ್ಲಿದ್ದರೆ, 

ಹೃದಯವದು ಕನಸ್ಸುಗಳ ಸಾಗರ !

ವಿರಹದ ಕ್ಷಣಗಳು ಆವರಿಸಿದರೆ,

ನೆನಪುಗಳಿಂದ ಮನಸ್ಸು ಭಾರ !!

------------------------------

ಬೆಳಕಿಗೆ ಸಾವಿದೆ ಇರುಳಡಿಗೆ
ಕತ್ತಲಿಗೂ ಸಾವಿದೆ ನಸುಕಿನಡೆಗೆ
ಎಂದಿಗೂ ಸಾವಿಗೆ ಅಂಜದಿವರು
ಮತ್ತೆ ಹುಟ್ಟುತ್ತೇನೆ ಎಂಬ ದೃಡ ನಂಬಿಕೆ !

Friday, July 17, 2015

ಚಾಳಿ

ಕೆಲವು ಹೆಣ್ಣುಮಕ್ಕಳದು
ಅದು ಎಂಥದೋ ಚಾಳಿ,
ಮದುವೆಯಾದರೂ...
ಕುವರಿ ಎಂದು ಭಿಂಬಿಸಲು,
ಮುಚ್ಚಿಟ್ಟುಕೊಳ್ಳುತ್ತಾರೆ ತಾಳಿ !!

Monday, July 06, 2015

ಹುಟ್ಟು ಸಾವು

ಬಯಸಿ ಪಡೆದದ್ದಲ್ಲಾ ಹುಟ್ಟು 
ಬಯಸಿದರೂ ಬರುವುದಿಲ್ಲ ಸಾವು 
ಹುಟ್ಟು ಸಾವಿನ ನಡುವೆ ತಪ್ಪಿದ್ದಲ್ಲ ನೋವು !!

ಸಾವೂ ಸುಂದರ

ಸಾವು ಇರಬಹುದು 
ಬಲು ಸುಂದರ.,.!
ಭೇಟಿ ಮಾಡಿದವರು
ಮರೆತೇ ಬಿಡುವರು
ಜೀವಿಸುವ ಸಮರ...!!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...