Tuesday, June 09, 2015

ಕುವರಿ ಬರುತ್ತಾಳೆ....!!

ಕುವರಿ ಬರುತ್ತಾಳೆ....
===========
ನವ ಜಗಕೆ ಕಾಲಿಟ್ಟ ಕುವರಿ
ನವ ಉಲ್ಲಾಸ ತಂದ ಕುವರಿ
ನವ ಕನಸ್ಸುಗಳ ಹೊತ್ತು ಬರುತ್ತಾಳೆ , ಕುವರಿ ಬರುತ್ತಾಳೆ....!!

ಮುಗ್ಧ ಮನಸಿನ ಕುವರಿ
ಕಿಲ ಕಿಲ ನಗುವ ಕುವರಿ
ಕುದುರೆಯ ಏರಿ ಬರುತ್ತಾಳೆ, ಕುವರಿ ಬರುತ್ತಾಳೆ....!!

ಪುಟ್ಟ ಪುಟ್ಟ ಹೆಜ್ಜೆಯ ಕುವರಿ
ದೊಡ್ಡ ದೊಡ್ಡ ಕಣ್ಣಿನ ಕುವರಿ
ಸಂತಸವ ಬಡಿಸುವ ಕುವರಿ, ಕುವರಿ ಬರುತ್ತಾಳೆ..!!

ಕೆಂಪು ಅಂಬಾರಿಯ ತನ್ನಿರಿ
ರತ್ನ ಕಂಬಳಿಯ ಹಾಸಿರಿ
ಹೃದಯ ಆಳುವ ಕುವರಿ ಬರುತ್ತಾಳೆ.., ನಮ್ಮ ರಾಜಕುಮಾರಿ ..!!

***********************
ಭಾವಪ್ರಿಯ
***********************

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...