Friday, February 22, 2013

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 5


(ವಿಜಯನ ವೈವಾಹಿಕ ಜೀವನದ ಮುಂದಿನ ಭಾಗ...)

ಹೆಂಡತಿಯ ಮೇಲಿನ ಪ್ರೀತಿಯಿಂದ, ಅವಳ ಅನುಕೂಲಕ್ಕಾಗಿ ವಿಜಯ ರಾಜಧಾನಿಯಲ್ಲಿ ಮಡದಿ ಕಚೇರಿಗೆ ಹತ್ತಿರವಾಗುವಂತೆ ಬಾಡಿಗೆ ಮನೆ ಮಾಡುತ್ತಾನೆ.ಮನೆ ಎಷ್ಟು ಹತ್ತಿರವಿತ್ತೆಂದರೆ ನಡೆದು ಹೋದರು ಸಹ ೫ ನಿಮಿಷಗಳಲ್ಲಿ ಕಚೇರಿ ತಲುಪಬಹುದಾಗಿತ್ತು. ವಿಜಯನು ಯಾವಾಗಲೂ ಹಸನ್ ಮುಖಿ ವ್ಯಕ್ತಿ.ಹೆಂಡತಿಯೊಡನೆ ಸದಾ ತಮಾಷೆ ಮಾಡುತ್ತ ಅವಳನ್ನ ನಗಿಸುತ್ತಾ ಸಂತೋಷದಿಂದ ಕಾಲ ಕಳೆಯುತ್ತಿದ್ದ.ಹೀಗೆಯೆ ಒಂದು ದಿನ ಯಾವುದೋ ಕ್ಷುಲ್ಲಕ ಕಾರಣಕ್ಕೆ ಗಂಡನು ಹೆಂಡತಿಗೆ ಜೋರು ಮಾಡುತ್ತಾನೆ, ಅದಕ್ಕೆ ಪ್ರತಿಯಾಗಿ  "ನನಗೆ ನಿನ್ನ ಕೂಡ ಬಾಳಲು ಇಷ್ಟವಿಲ್ಲ ನನ್ನನ್ನು ಮನೆಗೆ ಕಳಿಸಿಕೊಡು" ಎಂದು ಬಿಡುತ್ತಾಳೆ..!! ವಿಜಯನಿಗೆ ಈ ವಾಕ್ಯದ ಅರ್ಥವೇ ಆಗಲಿಲ್ಲ.., ಸಿಟ್ಟಿನಲ್ಲಿ ಏನೋ ಅಂದಳು ಎಂದುಕೊಂಡು ಅವಳನ್ನ ರಂಬಿಸಿ ಸುಮ್ಮನಾಗಿಸುತ್ತಾನೆ. ಮತ್ತೆ ಎಥಾವತ್ತಾಗಿ ಜೀವನ ಸಾಗುತ್ತದೆ. ಮದುವೆಯಾದ ಒಂದೇ ತಿಂಗಳಲ್ಲಿ ಇವಳ ಬೇಡಿಕೆಗಳು ಶುರುವಾಗುತ್ತವೆ, ಮೊದಲಿಗೆ ನನಗೆ ಫ್ರಿಡ್ಜು ಬೇಕು, ವಾಷಿಂಗ್ ಮಷಿನು ಬೇಕು ಅನ್ನುವ ರಾಗ ತೆಗೆಯುತ್ತಾಳೆ. ಪಾಪ ವಿಜಯನ ಸಂಬಳ ತಕ್ಕ ಮಟ್ಟಿಗಿದ್ದು ಸಂಸಾರ ಸುಗಮವಾಗಿ ಸಾಗಿಸುವಷ್ಟಾಗಿರುತ್ತದೆ, ಆದ್ದರಿಂದ ಈ ಎಲ್ಲಾ ವಸ್ತುಗಳು ಕಾಲ ಕಳೆದಂತೆ ಒಂದೊಂದಾಗಿ ಖರೀದಿಸೋಣ ಎಂದು ಹೇಳುತ್ತಾನೆ. ಅವಳದು ದೊಡ್ಡ ಉದ್ಯೋಗ ಇಲ್ಲದಿರುವುದರಿಂದ  ಇಲ್ಲಿ ಹುಡುಗಿಯು ಮಾಡಿದ ಸಾಲ ಕೂಡ ವಿಜಯ ಕಟ್ಟುತ್ತಿರುತ್ತಾನೆ, ಮನೆಯ ಜವಾಬ್ದಾರಿ ಹೊತ್ತಿದ ಗಂಡಸ್ಸಿಗೆ ಅದರ ಭಾರದ ಬಗ್ಗೆ ತಿಳಿದಿರುತ್ತದೆ. ಹೀಗೆಯೆ ಪ್ರತಿ ವಾರದ ಅಂತ್ಯಕ್ಕೆ ಇವಳ ಬೇಡಿಕೆಗಳು ಏರುತ್ತಿರುತ್ತವೆ.ಬೇಸರಗೊಂಡ ವಿಜಯ ತಂದೆ ತಾಯಿಯರ ಮೊರೆ ಹೋಗುತ್ತಾನೆ. ಹೊಸತಾಗಿ ಮದುವೆಯಾದ ಮಗನ ಪರಿಸ್ಥಿತಿ ತಿಳಿದು ಅವನ ತಂದೆ ತಾಯಂದಿರು ಸಮಾಧಾನ ಬುದ್ದಿ ಮಾತುಗಳು ಹೇಳಲು ರಾಜ್ಯಧಾನಿಗೆ ಆಗಮಿಸುತ್ತಾರೆ.ಅತ್ತೆ ಮಾವಂದಿರ ಆಗಮನದಿಂದ ವಿಜಯನ ಹೆಂಡತಿಗೆ ಕಸಿವಿಸಿ ಶುರುವಾಗುತ್ತದೆ. ಇವರು ಯಾಕೆ ಇಲ್ಲಿಗೆ ಬಂದರು ಎಂದು ಕೇಳಿಯೇ ಬಿಡುತ್ತಾಳೆ....( ಆಶ್ಚರ್ಯ ಪಡಬೇಕಾದ ವಿಷಯವಲ್ಲವೇ...???) ವಿಜಯನಿಗೆ ಇವಳ ಪ್ರಶ್ನೆಗೆ ದಿಕ್ಕೇತೋಚದಂತಾಗುತ್ತದೆ. ಸರಿ ಇರಲಿ ತಂದೆ ತಾಯಿಯರು ಮೊದಲ ಬಾರಿಗೆ ಮನೆಗೆ ಬಂದಿಹರು ಎಂದು ಪಟ್ಟಣದ ವಿಹಾರಕ್ಕೆ ಕರೆದುಕೊಂಡು ಹೋಗಿ ಬರುತ್ತಾನೆ. ರಾತ್ರಿ ಎಲ್ಲರೂ ಕೊಡಿ ಊಟ ಮಾಡಿ ಹೀಗೆ ಮಾತಿಗೆ ಕೂಡುತ್ತಾರೆ. ತಂದೆ ದಿವಾನದ ಮೇಲೆ ಕೂತರೆ ವಿಜಯ ನೆಲದ ಮೇಲೆ ಅಮ್ಮನ ಪಕ್ಕದಲ್ಲಿ ಕೂಡುತ್ತಾನೆ, ಹೆಂಡತಿ ಹೋಗಿ ಸುಮ್ಮನೆ ಮಲಗುತ್ತಾಳೆ.., ವಿಜಯನು ಎಲ್ಲರೂ ಇಲ್ಲಿ ಕೂತಿರುವಾಗ ನೀನೆಲ್ಲಿಗೆ ಹೋದೆ,..? ಬಾ ಇಲ್ಲಿ ಅಂತ ಕರೆಯುತ್ತಾನೆ. ಧಡಾಡಿಸಿ ಬಂದವಳೆ ಏನು ? ಅಂತಾ ಕೇಳುತ್ತಾಳೆ..ಕೂಡು ಬಾರವ್ವಾ ಇಲ್ಲಿ ಸ್ವಲ್ಪ ಮಾತಾಡೊದು ಇದೆ ನಿನ್ನ ಹತ್ತಿರ ಅನ್ನುತ್ತಾರೆ. ಬೇಗ ಹೇಳಿ ನಾನು ಮಲಗಬೇಕು ಅಂತ ಜಂಭದಿಂದಲೇ ಹೇಳುತ್ತಾಳೆ. ಮಾವನ ಮುಂದೆಯೆ ಕುರ್ಚಿಯನ್ನು ಎಳೆದು ಕಾಲು ಮೇಲೆ ಕಾಲು ಹಾಕಿಕೊಂಡು ಕೂಡುತ್ತಾಳೆ ( ದೊಡ್ಡವರ ಮುಂದೆ ಕಾಲು ಮೇಲೆ ಕಾಲು ಹಾಕಿಕೊಂಡು ಕೂಡುವುದು ಇದು ಯಾವ ತಾಯಿ ಹೇಳಿಕೊಟ್ಟ ಮಾತು ಎಂದೆನ್ನಲೇಬೇಕಲ್ಲವೇ...? ) ವಿಜಯನ ಸಂಬಳ ನಿನಗೆ ತಿಳಿದೇ ಇದೆ ತಾನೆ...ಹೌದು ತಿಳಿದಿದೆ, ಹಾಗೆಯೇ ನಿನ್ನ ೨.೫೦ ಲಕ್ಷದ ಸಾಲ ತಿಳಿದಿದೆ ತಾನೆ..? ಹೌದು... ಹೀಗಿದ್ದಲ್ಲಿ ಗಂಡನಾದವನಿಗೆ ಮನೆ ನಡೆಸಿಕೊಂಡು ಹೋಗಲು ಕಷ್ಟವಾಗುತ್ತದೆ, ಏನೇ ತೆಗೆದುಕೊಳ್ಳುವುದಾದರೂ ಸಾಲ ಮುಗಿಸಿ ಮುಂದೆ ಒಂದೊಂದಾಗಿ ತೆಗೆದುಕೊಳ್ಳಿ ಅದಕ್ಕೆ ಏನು ಅವಸರ ಎಂದು ಹೇಳುತ್ತಾರೆ.
ನಿನ್ನ ಸಾಲ ಒಂದು ಮುಗಿದು ಬಿಟ್ಟರೆ ನೀವು ಜಾಮ್ ಜಾಮ್ ಆಗಿ ಇರಬಹುದು ಅಂತ ಬುದ್ದಿವಾದ ಹೇಳುತ್ತಾರೆ. ಇಷ್ಟು ಹೇಳಿದ್ದಕ್ಕೆ ಅವಳು ರಾತ್ರಿ ಪೂರ್ತಿ ಬಿಕ್ಕಿಸಿ ಬಿಕ್ಕಿಸಿ ಅಳುತ್ತಾಳೆ. ವಿಜಯನ ತಾಯಿ ಅವಳಿಗೆ ಸಮಾಧಾನ ಹೇಳಿ ಸಂತಯಿಸುತ್ತಾರೆ. ಮಾರನೆ ದಿನ ಬೆಳಿಗ್ಗೆ ವಿಜಯನ ತಂದೆ ತಾಯಿ ತಮ್ಮ ಊರಿಗೆ ಮರಳುತ್ತಾರೆ. ಇದಾದ ಸ್ವಲ್ಪ ದಿನಗಳವರೆಗೂ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಮತ್ತೆ ಜೀವನ ಸುಗಮವಾಗಿ ಸಾಗುತ್ತದೆ. ಮತ್ತೆ ಕೆಲ ದಿನಗಳ ಬಳಿಕ ಮತ್ತೆ ಅದೇ ರಾಗ ...ಆದರೆೀ ಈ ಸಲಾ ಹೆಂಡತಿಯ ಬೇಡಿಕೆ ವಿಭಿನ್ನವಾಗಿರುತ್ತದೆ, ನನಗೆ ವಜ್ರದ ಓಲೆಗಳು ಬಳೆಗಳು ಕೊಡಿಸು ಅನ್ನುತ್ತಾಳೆ..ಮತ್ತೆ ಮತ್ತೆ ಸಮಜಾಯಿಸಿ ಹೇಳಿದರೂ ಕೂಡ ಅವಳು ತಿಳಿದುಕೊಳ್ಳುವುದೇ ಇಲ್ಲ. ಅದಕ್ಕೊಸ್ಕರ ಮತ್ತೆ ತಗಾದೆ ತೆಗೆಯುತ್ತಾಳೆ. ಮತ್ತೆ ಅದೇ ಉತ್ತರ "ನನಗೆ ನಿನ್ನ ಕೂಡ ಬಾಳಲು ಇಷ್ಟವಿಲ್ಲ ನನ್ನನ್ನು ಮನೆಗೆ ಕಳಿಸಿಕೊಡು" ( ಓದುಗರು ಯೋಚಿಸಬೇಕು....ಇಲ್ಲಿ ಇವಳಿಗೆ ವಸ್ತು ಪ್ರೀತಿ ಹೆಚ್ಚು ಕಾಡುತ್ತಿರುತ್ತದೆ) ಪದೆ ಪದೇ ಈ ಪದಗಳನ್ನು ಕೇಳಲಾರದೇ ಗಟ್ಟಿ ಹೃದಯ ಮಾಡಿ ಕೇಳಿಯೇ ಬಿಡುತ್ತಾನೆ....ಏಕೇ ನೀನು ಈ ವಾಕ್ಯವನ್ನು ಯಾವಾಗಲೂ ಉಚ್ಚರಿಸುತ್ತಿ ನಿನ್ನ ಮನದಲ್ಲಿ ಏನ್ ಊಂಟು ಎಂದು ಕೇಳಿದಾಗ.....ನನ್ನ ಮನೆಯವರು ಈ ಮದುವೆಯನ್ನು ಬಲವಂತವಾಗಿ ಮಾಡಿದ್ದಾರೆ, ನನಗೆ ಈ ಮದುವೆ ಇಷ್ಟವಿರಲಿಲ್ಲ ಎಂದು ಹೇಳುತ್ತಾಳೆ. ವಿಜಯ ಆಘಾತದಲ್ಲಿ ಮುಳುಗುತ್ತಾನೆ....ಹಾಗಾದರೆ ಮದುವೆಗೂ ಮುನ್ನ ಸಿಕ್ಕಾಗ ಏಕೆ ಹೇಳಲಿಲ್ಲ ಅಂತ ಅಂದಾಗ ನನ್ನ ಅಮ್ಮ ಮಾವ ಅಕ್ಕಂದಿರು ಹಾಗೆ ಎಲ್ಲೂ ಹೇಳಬಾರದು ಎಂದು ತಾಕಿತ್ತು ಮಾಡಿದ್ದರು ಅನ್ನುತ್ತಾಳೆ. ಹಾಗೆನಾದರೂ ಹೇಳಿದರೆ ನನ್ನ ತಾಯಿ ನೇಣಿಗೆ ಶರಣಾಗುತ್ತಾಳೆ ಎಂದಿದ್ದಳು ಅದಕ್ಕೆ ಹೇಳಲಿಲ್ಲ ಅಂತ ಹೇಳಿಬಿಡುತ್ತಾಳೆ. ಆಘಾತದ ಮೇಲೆ ಆಘಾತವಾಗುತ್ತದೆ ವಿಜಯನಿಗೆ...ಬಹಳ ಯೋಚಿಸಿದ ನಂತರ ಸರಿ ಎನೋ ಆಗಿದ್ದು ಆಗಿ ಹೋಯಿತು ಇನ್ನು ಚಿಂತಿಸಿ ಫಲವಿಲ್ಲ, ನಾನು ನೀನು ಗಂಡ ಹೆಂಡಿರು, ನಾನು ನಿನ್ನನ್ನ ಚೆನ್ನಾಗಿಯೇ ನೋಡಿಕೊಳ್ಳುತ್ತೆನೆ ಎಂದು ಹೇಳಿ ರಮಿಸುತ್ತಾನೆ. ಇಷ್ಟಕ್ಕೆ ಮುಗಿಯುವುದಿಲ್ಲ.....ಜೇಡರ ಬಲೆ ಇನ್ನೂ ಕ್ಲೀಷ್ಟಕರವಾಗಿರುತ್ತದೆ..........ಮುಂದುವರೆಯುವುದು...)

ಹಿತ ವಚನ


ಅಕ್ಷರ ಓದುವುದು ಜ್ಞಾನನಕ್ಕಾಗಿ, ಉಪಜೀವನಕ್ಕಾಗಿ, ಸೊಕ್ಕಿನಲ್ಲಿ ಮೆರೆಯುವುದಕ್ಕಲ್ಲ...

ಸಂಸಾರ ಸಾಗಿಸಲು ಸಾಮಾನ್ಯ ಜ್ಞಾನವೇ ಬೇಕು, ಹಸಿವಾದಾಗ ಅನ್ನ ಉಣ್ಣಲೇಬೇಕು, ಹಣವೆಂದೂ ಹಸಿವು ನೀಗಿಸುವುದಿಲ್ಲ!!

Thursday, February 21, 2013

ಸಂಶಯ ( ಸಾಂಸಾರಿಕ ಹಿತ ವಚನ )


" ಸಂಶಯ ಅನ್ನುವುದು ದಂಪತಿಗಳಲ್ಲಿ ಬರಬಾರದು " ಆದರೆ ಸಂಶಯಗಳು ಹುಟ್ಟುವಂತೆ ದಂಪತಿಗಳು ಸಹ ವರ್ತಿಸಬಾರದು. ಯಾವುದೋ ಒಂದು ಸಂದರ್ಭದಲ್ಲಿ ಸಂಶಯ ಹುಟ್ಟಿಕೊಂಡರೆ.., ಇಬ್ಬರೂ ಕೂಡಾ ಕೂತು ಚರ್ಚಿಸಿ ಸಮಾಲೋಚಿಸಿ ಸಂಶಯವನ್ನು ದೂರು ಮಾಡಿಕೊಳ್ಳಬೇಕು. ಇದುವೇ ಸತ್ಯಾ ಹಾಗೆ ಎಲ್ಲ ಒಳ್ಳೆಯ ಭಾವನೆ ಇಟ್ಟುಕೊಂಡವರು ಹೇಳುವ ಮಾತು. ಈ ವಿಷಯವಾಗಿ ಒಂದು ಸಣ್ಣ ಹಿತವಚನ.....


" ಸಭ್ಯವಂತ ಪತಿ ಹೆಂಡತಿಯನ್ನು ಎಂದೂ ಅನುಮಾನದಿಂದ ನೋಡುವುದಿಲ್ಲ ,ಅನುಮಾನ ಬಂದಲ್ಲಿ ಸತಿಯಾದವಳು ಅವನ ಕಲ್ಪನೆ ತಪ್ಪು ಎಂದು ಸಾಧಿಸಿ ತೋರಿಸಲು ಯಾವುದೇ ಪರೀಕ್ಷೆಗೂ ಹಿಂಜರಿಯಬಾರದು ಹಾಗೆ ನುಣುಚಿಕೊಳ್ಳಲು ಪ್ರಯತ್ನಿಸಿದರೆ ಅವಳ ಮೇಲಿನ ಆರೋಪಗಳು ನಿಜ ರೂಪ ಪಡೆಯುತ್ತವೆ " ( ಅನುಮಾನ ಹೆಣ್ಣಿಗೂ ಆಗಿರಬಹುದು ಹಾಗೆಯೇ ಗಂಡಿಗೂ ಆಗಿರಬಹುದು , ಇಲ್ಲಿ ಯಾವ ಪಕ್ಷಪಾತವಿಲ್ಲ ).

ಓದುಗರು ತಮ್ಮ ಅಭಿಪ್ರಾಯ ತಿಳಿಸಿರಿ......

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 4


ಇಂದಿನ ಮುಂದುವರೆದ ಭಾಗ ಶುರು ಮಾಡುವ ಮುನ್ನ ಒಂದು ಸಂತಸದ ಸುದ್ದಿ ಮುಂದಿಡಲು ಇಚ್ಚಿಸುತ್ತೇನೆ , ಇಂದಿಗೆ ನನ್ನ ಬ್ಲಾಗ್ ಓದುಗರ ಸಂಖೆ ೯೦೦೦ ದಾಟಿದೆ , ಈ ಸಂದರ್ಭದಲ್ಲಿ ಎಲ್ಲರಿಗೂ ಹೃತ್ ಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತೇನೆ.
ಈಗ ಮುಂದೆ ಓದಿಕೊಳ್ಖಿ...........ವಿಜಯನ ಮದುವೆ ಪುರಾಣ ....)

ನಮ್ಮ ಕಡೆಯಲ್ಲಾ ಹುಡುಗಿಯ ಮನೆಕಡೆ ಎಷ್ಠೇ ಕಷ್ಟವಿದ್ದರು ಕನ್ಯೆಯ ಮನೆವರೆ ಮದುವೆ ಮಾಡಿಕೊಡುವುದು ಸಂಪ್ರದಾಯ. ಆದರೆ ಇಲ್ಲಿ ನಡೆದದ್ದೆ ಬೇರೆ , ಸೊಗಿನ ಬಿಣ್ಣಾಣ್ಗಿತ್ತಿ ಕನ್ಯೆಯ ತಾಯಿ ನಾಟಕ ಪ್ರವೀಣೆ. ಇವಳ ಬಗ್ಗೆ ಸ್ವಲ್ಪ ಹೇಳೆಲೇ ಬೇಕಾದ ಅಂಶಗಳಿವೆ ಏಕೆಂದರೆ ಈ ಮದುವೆ ಎಂಬ ನಾಟಕಕ್ಕೆ ಇವಳೇ ಸುತ್ರದಾರಳು. ಇವಳ ಲಗ್ನವು ಒಬ್ಬ ಸರ್ಕಾರಿ ನೌಕರನ ಜೊತೆ ಆಗಿರುತ್ತೆ. ಪಾಪ ಅವ(ಹುಡುಗಿಯ ತಂದೆ) ಒಳ್ಳೆಯವನೆ. ಸೌಮ್ಯ ಸ್ವಭಾವ,ನೀತಿ,ನೀಯಮ ಸರಳತೆಯಲ್ಲೇ ಬೆಳೆದ ವ್ಯಕ್ತಿ. ಅವನ ವಿನಯತೆಯನ್ನು ಎಲ್ಲರೂ ಮೆಚ್ಚುತ್ತಿದ್ದರು. ಸುಪುತ್ರರಿರದ ಇವರ ಮನೆಯಲ್ಲಿ ಇವರಿಗೆ ಬರಿ ಕನ್ಯಾಮಣಿಗಳು. ಪಾಪ ತಂದೆ ಹೃದಯಾಘಾತದಿಂದ ತೀರಿಕೊಂಡರು. ಆಗ ಆ ಮನೆಯಲ್ಲಿ ಗಂಡು ಮಕ್ಕಳ ಆಸರೆಯೇ ಇಲ್ಲಾ. ಅಲ್ಲಿಗೆ ಹುಡುಗಿಯ ತಾಯಿದೇ ದರ್ಬಾರು.ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಹೇಗೆ ಇರಬೇಕು ಹೇಗೆ ನಡೆದು ಕೊಳ್ಳಬೇಕು ಅನ್ನುವ ಸಾಮಾನ್ಯ ಶಿಸ್ತನ್ನು ಕೂಡ ಅವಳು ಹೇಳಿಕೊಡಲಿಲ್ಲ. ಎಲ್ಲರೂ ತಮ್ಮ ಇಷ್ಟಕ್ಕೆ ಬಂದ ಹಾಗೆ ಬೆಳೆದು ಬಿಟ್ಟರು. ಗಂಡು ಇರದ ಮನೆಗಳ ಕಥೆನೇ ಇಷ್ಟೇ ಇರಬೇಕು ಬಿಡಿ..! ಸರಿ ಪಾಪ ನಮ್ಮ ವಿಜಯನ ಮದುವೆ ಪುರಣಕ್ಕೆ ಬರೊಣ. ವಿಜಯ ಹುಡುಗಿಯನ್ನು ನೋಡಿದ ಹಾಗೆಯೇ ಅವಳು ಕೂಡಾ ನೋಡಿದಳು. ವಿಜಯನ ತಂದೆ ತಾಯಿಗಳು ತಮ್ಮ ಒಪ್ಪಿಗೆ ಸೂಚಿಸಿ ಮುಂದಿನ ಕಾರ್ಯಕ್ರಮಕ್ಕೆ ಅಣಿಯಾಗುವಂತೆ ಸೂಚಿಸಿದರು. ಮದುವೆಯ ವಿಷಯ ಬರುತ್ತಿದ್ದಂತೆಯೆ ಜಿದ್ದಿಬಾಯಿ ( ಹುಡುಗಿಯ ತಾಯಿ ) ಅಯ್ಯೊ ಅಣ್ಣಾರ ನಮಗ ಮದುವಿ ಮಾಡಿಕೊಡಲಿಕ್ಕೆ ಆಗೋದಿಲ್ಲಾ, ನಾನು ಗಂಡ ಸತ್ತ ಮುಂಡೆ ಅಂತೆಲ್ಲಾ ಕಥೆ ಹೇಳಿ. ಮದುವೆ ನೀವೇ ಮಾಡಿಕೊಳ್ಳಿ ಅಂತ ಹೇಳುತ್ತಾಳೆ. ಬೆಂಗಳೂರಿನಲ್ಲಿ ಒಂದು ಸೀದಾ ಸಾದಾ ಮದುವೆ ಮಾಡಲು ಕಮ್ಮಿ ಕಮ್ಮಿ ಎಂದರೂ ೩ ಲಕ್ಷ ರೂ ಕಿಂತ ಕಮ್ಮಿಯಲ್ಲಿ ಮಾಡಲು ಸಾಧ್ಯವಿಲ್ಲ ಅನ್ನುವುದು ನೀವು ಓದುಗರಿಗೆ ತಿಳಿದೇ ಇರುವ ವಿಷಯ ಅಲ್ಲವೇ ..! ಅಂತಹುದರಲ್ಲಿ ೨೫ ಸಾವಿರ ರೂ ಗಳು ಕೊಡುತ್ತೆವೆ, ಮದುವೆ ನೀವೆ ಮಾಡಿಕೊಂಡು ಬಿಡಿ ಎಂದು ಬಿಟ್ಟಳು.ಇದರಿಂದ ಬೆಸರಗೊಂಡ ವಿಜಯನ ತಂದೆ, ನೀವೂ ಏನನ್ನೂ ಕೊಡುವುದು ಬೇಡ ಅಂತ ಹೇಳಿ ಸುಮ್ಮನಾಗುತ್ತಾರೆ. ಹಾಗೆಯೆ ವಿಜಯನ ಕುರಿತು ಹುಡುಗಿಯ ತಾಯಿ ಜಿದ್ದಮ್ಮ ಈ ತರಹ ಹೇಳಿದಳು, ನೀನು ಕೂಡಾ ಏನು ಅಪೇಕ್ಷಿಸಬೇಡಪಾ ಅಂತಾ ಹೇಳುತ್ತಾರೆ. ಅಪ್ಪ ಅಮ್ಮಂದಿರ ಮಾತು ತಪ್ಪದ ವಿಜಯ ಏನು ತಾನೆ ಹೇಳ್ಯಾನು ? ಅವ್ನು ಸುಮ್ಮನಾಗಿ ಬಿಟ್ಟ. ಜೀವನ ನಡೆಸುವ ತೊಳಿನ ಬಲ ಅವನಲ್ಲಿದೆ.., ಹುಡುಗಿಯ ಮನೆಯ ಯಾವ ಹಂಗು ನನಗೆ ಬೇಕಿಲ್ಲಾ ಅಂದು ಕೊಂಡು ಒಪ್ಪಿಕೊಳ್ಳುತ್ತಾನೆ. ಸರಿ ವಿಜಯನ ತಂದೆ ಮಗನ ಮದುವೆಯ ಬಗ್ಗೆ ತುಂಬಾ ಕನಸ್ಸುಗಳು ಇಟ್ಟುಕೊಂಡಿದ್ದರು ಹಾಗೆಯೇ ಸಾಲಾ ಸೊಲಾ ಮಾಡಿ ಅಚ್ಚುಕಟ್ಟಾದ ಒಂದು ಕಲ್ಯಾಣ ಮಂಟಪವ ನೋಡಿ ಮದುವೆಯ ತಯ್ಯಾರಿಯಲ್ಲಿ ತಲ್ಲೀನರಾಗುತ್ತಾರೆ. ಲಗ್ನ ಪತ್ರಗಳು ಮುದ್ರಣಗೊಳ್ಳುತ್ತವೆ. ಮೊದಲನೇಯ ಲಗ್ನ ಪತ್ರ ಹುಡುಗಿಯ ಮನೆಗೆ ಕೊಟ್ಟು ಬರಲು ವಿಜಯನ ತಂದೆ ಸಜ್ಜಾಗುತ್ತಾರೆ. ಮನೆ ತಲುಪಿ ಪತ್ರ ಕೊಟ್ಟು ಇನ್ನೇನು ಹೊರಡಬೇಕಾದಾಗ ಜಿದ್ದಿಬಾಯಿ ವಿಜಯನ ತಂದೆಯನ್ನು ಕುರಿತು, ತಮಗೆ ಒಂದು ವಿಷಯ ಹೇಳಬೇಕಿತ್ತು ಹೇಗೆ ಹೇಳಬೇಕೊ ತಿಳಿಯುತ್ತಿಲ್ಲ ಅನ್ನುತ್ತಾ , ನನ್ನ ಮಗಳ ವಿದ್ಯಾಭಾಸಕ್ಕೆ ೨.೫೦ ಲಕ್ಷ ಹಣ್ವನ್ನು ಸಾಲವಾಗಿ ಪಡೆದಿದ್ದೇವೆ ಅದನ್ನ ಅವಳೆ ತೀರಿಸುತ್ತಾಳೆ ಎಂದು ಹೇಳಿದಳು. ಓದುಗರೇ ಯೋಚಿಸಿ ಈ ಜಿದ್ದಿಬಾಯಿ ಹೇಗಿರಬಹುದು ಎಂದು...? ಇಂತಹ ಮಹತ್ತರದ ವಿಷಯವನ್ನು ಇವಳು ಮದುವೆಯ ಲಗ್ನ ಪತ್ರಿಕೆ ಕೊಡಲು ಹೋದ ಸಮಯದಲ್ಲಿ ತಿಳಿಸುತ್ತಾಳೆ. ಹಾ...ಇನ್ನೊಂದು ವಿಚಾರವಿದೆ ನಮ್ಮ ಕಡೆ ಬಳುವಳಿ ಸಾಮಾನು ಕೊಡುವ ಪದ್ದಥಿ ಕೂಡಾ ಇಲ್ಲಾ ಅಂತಾನೂ ಹೇಳುತ್ತಾಳೆ. ನಾ ಹಿಂದೆ ವಿವರಿಸಿದ ಹಾಗೆ ಈ ಹೆಂಗಸಿನ ಸ್ವಭಾವ ಹಾಗು ಒಂಚನೆಯ ಬುದ್ದಿ ತಿಳಿದಿರಬೇಕಲ್ಲವೆ..? ಇದನ್ನು ಕೇಳುತ್ತಲೆ ವಿಜಯನ ತಂದೆಗೆ ತುಂಬಾನೆ ಆಘಾತ ಹಾಗು ಬೇಸರವಾಗುತ್ತದೆ. ಈಗ ಏನು ಮಾಡುವುದು ? ಎಂದು ತಿಳಿಯಾಲಾರದೇ ದಿಗ್ ಬ್ರಾಂತರಾಗುತ್ತಾರೆ. ಮದುವೆಯ ಪತ್ರಿಕೆ ಮುದ್ರಣಗೊಂಡಿವೆ, ಬಹಳಷ್ಟು ಸಂಬಂಧಿಕರಿಗೂ ವಿಷಯ ತಿಳಿಸಿದ್ದೆವೆ ಇನ್ನು ಮುರುಗಡೆ ಮಾಡಿಕೊಂಡರೆ ನಮ್ಮ ಮರ್ಯಾದಿ ಏನಾಗಬೇಕು ಎಂದುಕೊಂಡು ಚಿಂತೆಗೆ ಜಾರುತ್ತಾರೆ. ಮನೆ ಮಂದಿ ಎಲ್ಲಾ ಕೂತು ಚಿಚಾರ ಮಾಡಿ. ದೇವರು ನಮ್ಮನ್ನ ಚೆನ್ನಾಗಿ ಇಟ್ಟಿದ್ದಾನೆ, ನಮ್ಮಿಂದ ಒಂದು ಒಳ್ಳೆಯ ಕಾರ್ಯವಾಗಬೇಕಿದೆ, ಅದರಲ್ಲೂ ಒಬ್ಬ ತಂದೆ ಇರದ ಮಗಳಿಗೆ ಮದುವೆಯ ಭಾಗ್ಯ,ಗಂಡನ ಆಸರೆ ನೀಡಿದ ಪುಣ್ಯಾ ಬರುವುದು ಅಂದುಕೊಳ್ಳುತ್ತಾ ಎಲ್ಲಾ ಚಿಂತೆಯನ್ನು ಬಿಟ್ಟು ಒಳ್ಳೆಯ ಮನಸಿನಿಂದ ಮದುವೆ ಅತ್ಯಂತ ವಿಜೃಂಬಣೆಯಿಂದ ಮಾಡಿ ಮುಗಿಸುತ್ತಾರೆ. ಮದುವೆಗೆ ಬಂದ ಎಲ್ಲಾ ಬಂಧು ಮಿತ್ರರು ನವ ಜೋಡಿಗೆ ಹಾರೈಸಿಸುತ್ತಾರೆ. ಮದುವೆ ಮಾಡಿದ ಪದ್ದತಿ ಹಾಗು ಮದುವೆಯಲ್ಲಿಯ ಉಪಚಾರವನ್ನು ಎಲ್ಲರೂ ಕೊಂಡಾದುತ್ತಾರೆ. ಅಲ್ಲಿಗೆ ವಿಜಯನ ಪೆ ಪೆ ಪೆ ಡುಂ ಡುಂ ಮದುವೆ ಮುಗಿದು ಹೋಗುತ್ತದೆ. ಮುಗ್ಧ ಮೂಕ ಕನಸ್ಸುಗಳ ಹೊತ್ತ ವಿಜಯ ಮಧುಚಂದ್ರಕೆ ತೆರಳುತ್ತಾನೆ. ಈಷಾರಾಮಿ ಕಾರಿನಲ್ಲಿ ಇವರ ಮಧುಚಂದ್ರದ ಪ್ರಯಾಣ ಸುಗಮವಾಗಿ ಮುಗಿಯುತ್ತದೆ. (.... ಇನ್ನು ಕಾದು ನೋಡಿ....ವಿಜಯನ ವೈವಾಹಿಕ ಮುಂದಿನ ಜೀವನ. )

Wednesday, February 20, 2013

ಚುಟುಕ


ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರೂ ನೋಡಲಿಲ್ಲ ಅಂದಹಂಗ
ಕದ್ದು ಮುಚ್ಚಿ ರಾಸಲೀಲೆ ಆಡುವರು ಜಗಕೆಲ್ಲಾ ತಿಳಿಯಲಿಲ್ಲ ಅಂದಹಂಗ
ಕಾಲ ಕಳೆಯಬೇಕು ಅಷ್ಟೆ..ಪರದೆ ಸರೆಯುವ ಸಮಯ ಬಂದೇ ಬರುತ್ತದೆ ..!!

ನಂಬಿಕೆ


ಗಂಡನ ನಂಬದ ನಾರಿಗೆ ಕೆಲಸದ ಮೇಲೆ ಭಾರಿ ನಂಬಿಕೆ.,

ಬಾಳ್ವೆ ಮಾಡಲಾಗದೇ ಓಡಿ ಹೋದ ಹೆಂಗಸಿನ ಮೇಲೆ.., ಅವನಿಗೆ ಉಳಿಯಬೇಕೇ ನಂಬಿಕೆ ?

ಪವಿತ್ರತೆ



ದ್ವಾಪರಯುಗದ  ದೇವತಾ ನಾರಿಮಣಿಗಳೆಗೇ ತಪ್ಪಲಿಲ್ಲ  ಪವಿತ್ರತೆಯ ಜರಡಿ-ಅಗ್ನಿ ಪರೀಕ್ಷೆ

ನೀನ್ಯಾವ ಲೆಕ್ಕವೋ ಆಧುನಿಕ ನಾರಿಯೇ.? ಹೊಸ್ತಿಲ ದಾಟಿದ ತಪ್ಪಿಗೆ ನಿನಗೂ ಉಂಟು ನಾ ನಾ ತರಹದ ಪರೀಕ್ಷೆ.

Tuesday, February 19, 2013

ಮೂಢೆ


ನಿಸ್ವಾರ್ಥ ಪ್ರೇಮವ ದಿಕ್ಕರಿಸಿ ನಡೆದ ಮೂಢೆಗೆ
 ಪ್ರತಿ ಕ್ಷಣ ಕ್ಷಣವೂ ಮುಳ್ಳು ಹಾಸಿಗೆಯಾಗಲಿ
ಹಣ ಹಣ ಎನ್ನುವ ನಿನ್ನ ಕ್ರೂರ ಬುದ್ದಿಗೆ
ಕೋಟಿ ಹಣವಿದ್ದರೂ ನಿನ್ನವರ ಬಳಗವ ಉಳಿಸಿಕೊಳ್ಳದಂತಾಗಲಿ
ಒಂಟಿತನ ನಿನಗೆ ಕಟ್ಟಿಟ್ಟ ಬುತ್ತಿ
ಮುಘ್ದ ಪ್ರೀತಿಯ ತುಚ್ಚಕಂಡ ನೀನು, ಕೊರಗಿ ಕೊರಗಿ ಅಂತ್ಯ ಕಾಣುವಂತಾಗಲಿ.

ಕಿರಾತಕಿ


ನಿನ್ನ ಬಿಟ್ಟು ಬದುಕಲಾರೆ ಎನ್ನುತ್ತಿದ್ದಳು ಅಂದು

ಅವನ ಕೂಡ ಬದುಕಬಲ್ಲೆ ಎನ್ನುತ್ತಿರುವಳು ಇಂದು, ನಿನ್ನ ಕೊಂದು..!!

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 3

......ತವರೂರಿಗೆ ಮರಳುವ ಖುಷಿಯಲ್ಲಿ ತುಂಬಾನೆ ತಯ್ಯಾರಿ ನಡೆಸಿ, ತವರೂರಿರಿನ ರಾಜಧಾನಿಗೆ ತೆರಳಿ ಸಂದರ್ಶನ ಕೊಟ್ಟು ಬಂದದ್ದಾಯಿತು. ಬಹಳ ಅಪೇಕ್ಷೆಯನ್ನು ಇಟ್ಟುಕೊಂಡು ಕರೆಗಾಗಿ ಇದಿರು ನೋಡುತ್ತಿದ್ದ..ಒಂದು ತಿಂಗಳು ಕಳೆಯಿತು,ಎರಡು ತಿಂಗಳು ಕಳೆಯಿತು ಹಾಗೆ ಮೂರು ತಿಂಗಳುಗಳು ಕಳೆದರೂ ಕರೆ ಬರಲೇ ಇಲ್ಲ.. ನಿರಸಗೊಂಡು ಇದ್ದ ಜಾಗದಲ್ಲೇ ತನ್ನ ಭವಿಷ್ಯವಿರಬಹುದು ಎಂದುಕೊಂಡು ಸುಮ್ಮನಾಗಿಬಿಟ್ಟ. ಹೀಗೆ ಒಂದು ದಿನ ಕಚೇರಿಯ ಕಾರ್ಯದಲ್ಲಿ ನಿರತನಾಗಿದ್ದಾಗ ಪೋನು ರಿ0ಗಾಯಿಸಿತು..ಅದು ತವರೂರ ಕರೆ..ಯಾರೋ ಗೆಳೆಯರು ಇರಬೇಕು ಎಂದುಕೊಳ್ಳುತ್ತಲೆ ಹೆಲೋ ಅಂದ..,ಆ ಕಡೆಯಿಂದ ಒಂದು ಹೆಣ್ಣಿನ ಧ್ವನಿ ಕೇಳಿ ಬಂತು..,ತಾವು ನಮ್ಮಲ್ಲಿಗೆ ಬಂದು ಸಂದರ್ಶನ ನೀಡಿದ್ದರ ನಿಮಿತ್ತ ನಿಮ್ಮನ್ನು ನಮ್ಮ ಕಂಪನಿಗೆ ಟೆಕ್ನಿಕಲ್ ಲೀಡ ಅಂತ ನೇಮಕ ಮಾಡುತ್ತಿದ್ದೇವೆ, ತಾವು ಆದಷ್ಟು ಬೇಗ ಬಂದು ಸೇರಿಕೊಳ್ಳಬೇಕು ಎಂದು ಹೇಳಿದರು. ವಿಜಯನ ಸಂತೋಷಕ್ಕೆ ಮಿತಿಯೇ ಇರಲಿಲ್ಲ, ಅವನು ಕುಣಿದು ಕುಪ್ಪಳಿಸ ತೊಡಗಿದ. ಬಹು ದಿನಗಳಿಂದ ತಂದೆ ತಾಯಿ ಬಂಧು ಮಿತ್ರರಿ0ದ ದೂರವಿದ್ದು ಅವನಿಗೆ ಸಾಕಾಗಿ ಹೋಗಿತ್ತು. ವಿಷಯ ತಿಳಿಯುತ್ತಲೇ ತನ್ನ ಮೇಲಧಿಕಾರಿಗೆ ತಿಳಿಸಿದ, ಅವರೂ ಕೂಡ ಸಂತೋಷಪಟ್ಟರು. ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿ ತನ್ನ ಕಾರ್ಯವನ್ನು ಬೇರೊಬ್ಬ ಗೆಳೆಯನಿಗೆ ಒಪ್ಪಿಸಿ ಹೊರಡಲು ಸಿದ್ದನಾದ. ಒಂದೆಡೆ ತವರಿಗೆ ಮರಳುವ ಖುಷಿ ಮತ್ತೊಂದೆಡೆ ಗಳೆಯರನ್ನು, ತನಗೆ ಸಹಾಯ ಮಾಡಿದ ಬಾಡಿಗೆ ಮಾಲಿಕರನ್ನ, ಮೂರು ವರುಷ ಕೆಲಸ ಮಾಡಿದ ಸ್ಥಳವನ್ನ ಬಿಟ್ಟು ಹೋಗುವಾಗ ಬೇಸರವೂ ಕೂಡಾ ಆಯಿತು.ಮಾರನೆ ದಿನ ತನ್ನ ತವರಿಗೆ ಮರಳಿದ ಒಂದೆರೆಡು ದಿನ ಅಪ್ಪ ಅಮ್ಮ ತಮ್ಮಂದಿರ ಜೋತೆಯಲಿ ಕಾಲ ಕಳೆದು ತನ್ನ ಹೊಸ ಕೆಲಸಕ್ಕೆ ಸೇರಿಕೊಳ್ಳಲು ರಾಜಧಾನಿಯತ್ತ ಪ್ರಯಾಣ ಬೆಳಸಿದ. ಮತ್ತೆ ಚಿಗುರಲಾರಂಭಿಸಿದವು ಹೊಸ ಹೊಸ ಕನಸ್ಸುಗಳು. ಈತ ಈಗ ಸೇರಿಕೊಂಡ ಕಂಪನಿ ಒಂದು ಸುಪ್ರಸಿದ್ದ ಬಹುರಾಷ್ಟೀಯ ಕಂಪನಿಯಾಗಿತ್ತು. ಅತ್ತ ತಂದೆ ತಾಯಿಗೂ ಖುಷಿ.. ಮಗನ ವೃತ್ತಿ ಜೀವನ ಸರಿಯಾಗಿ ನಡೆಯುತ್ತಿದೆ. ಹಿರಿಯನಾದ ಮಗನಿಗೆ ಒಂದು ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಬೇಕೆಂದು ನಿರ್ಧಾರಕ್ಕೆ ಬರುತ್ತಾರೆ. ವಿಜಯ ತುಂಬಾ ಜಾಣ ಸುಸಂಸ್ಕೃತ ಹುಡುಗನಾಗಿದ್ದ. ರೂಪದಲ್ಲಿ ಗುಣದಲ್ಲಿ ನಡೆ ನುಡಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ಎಷ್ಟೊ ಹುಡುಗಿಯರಿಗೆ ಇವನು ಅಚ್ಚುಮೆಚ್ಚು ಆದರೆ ವಿಜಯ ಮಾತ್ರ ಎಲ್ಲಾ ಗೆಳತಿಯರನ್ನು ತನ್ನ ಸಹಪಾಟಿಗಳು ಅಕ್ಕ ತಂಗಿಯರು, ಸಹೋದರಿಯರು ಎನ್ನುವ ಭಾವನೆ ಇಟ್ಟುಕೊಂಡಿದ್ದ. ತಂದೆ, ವಿಜಯಾ ನೀನು ಈಗ ಒಳ್ಳೆಯ ಕೆಲಸದಲ್ಲಿದ್ದಿಯ ಇನ್ನೂ ನಿನಗೊಂದು ಮದುವೆ ಮಾಡಬೇಕು ಎಂದುಕೊಂಡಿದ್ದೇನೆ ಇದಕ್ಕೆ ನಿನ್ನ ಅಭಿಪ್ರಾಯವ ತಿಳಿಸುವೆಯಾ ಅಂದರು. ಅದಕ್ಕೆ ತಂದೆಯ ತಾಯಿಯ ವಿಧೆಯನಾಗಿ ಬೆಳೆದ ವಿಜಯನಿಗೆ ಮುಜುಗರ.., ತಮ್ಮ ಇಚ್ಚೆಯಂತೆ ಆಗಲಿ ಎಂದು ತಿಳಿಸಿದ. ವಿಜಯನ ಸಮ್ಮತಿಯಿಂದ ತಂದೆ ಕನ್ಯೆಯ ಹುಡುಕಾಟ ಪ್ರಾರಂಭಿಸಿದರು.ರೂಪವಂತ ಗುಣವಂತನಾದ ವಿಜಯನಿಗೆ ಹುಡುಗಿಯ ಹುಡುಕುವುದು ಅಷ್ಟೇನು  ಕಷ್ಠಕರವೆನ್ನಿಸಲಿಲ್ಲ. ತಂದೆಯ ಗೆಳೆಯನ ಸಹಾಯದಿಂದ ಒಂದು ಕನ್ಯೆಯ ಬುಲಾವು ಬಂದಿತು. ಕನ್ಯೆಯು ವಿದ್ಯಾವಂತೆ ಸೌಂದರ್ಯವತಿ ಆಗಿ ಕಂಡು ಬಂದುದ್ದರಿಂದ ಮುಂದುವರೆಯಲು ವಿಚಾರಿಸಿದರು. ಒಳ್ಳಯ ಮನೆತನದವರಾದ ವಿಜಯನ ತಂದೆಯವರು ಹುಡುಗಿಯವರ ಕಡೆಯಿಂದ ಏನನ್ನೂ ಅಪೇಕ್ಷಿಸದೆ ಮದುವೆಗೆ ಸೈ ಎಂದು ಸೂಚಿಸಿದರು. ಮುಗ್ಧ ಹುಡುಗ ಹೆಂಗಳೆಯರ ಬಗ್ಗೆ ಗೌರವ ಭಾವನೆ ಇಟ್ಟುಕೊಂಡು ಬೆಳೆದವನು.ತನ್ನ ಕೈ ಹಿಡಿದು ಬಂದ ಹೆಣ್ಣು ತನ್ನ ತನು ಮನದಿಂದ ಒಪ್ಪಿಕೊಂಡು ಸಂಸಾರ ನಡೆಸಲು ಪ್ರಾರಂಭಿಸಿದನು. ಅವಳು ಒಂದು ಸಣ್ಣ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಸಂಸಾರ ನಡೆಸಲು ಅನುಕೂಲವಾಗುವಂತೆ ಅವಳ ಕಚೇರಿಯ ಹತ್ತಿರವೇ ಮನೆ ಮಾಡಿದನು. ಗಂಡನ ಪ್ರೀತಿಗೆ ಪಾರವೇ ಇರಲಿಲ್ಲ. ಹೇಳಿ ಮಾಡಿಸಿದ್ದ ಜೋಡಿ ಎನ್ನುವ ಹಾಗೆ ಜೀವನ ಸಾಗಿತ್ತು...! ಹೆಣ್ಣಿನ ಬಗ್ಗೆ ಹೇಳಬೇಕೆಂದರೆ ೩ ವರುಷದ ಹಿಂದೆಯೇ ಆ ಊರಿಗೆ ಬಂದು ತನ್ನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು ಕಲಿತವಳು. ಅಷ್ಟು ಬಿಟ್ಟರೆ ವಿಜಯನಿಗೆ ಮತ್ತೆನೂವಳ ಬಗ್ಗೆ ತಿಳಿದಿರಲಿಲ್ಲ. ತನ್ನ ವಿದ್ಯಾಬ್ಯಾಸದ ಜೀವನದಲ್ಲಿ ಕಂಡಂತೆ ಎಲ್ಲ ಹುಡುಗಿಯರು ಒಳ್ಳೇಯವರೆ ಎಂಬ ಅವನ ಭಾವನೆ...ಬೆಳ್ಳಗೆ ಇದ್ದುದ್ದೆಲ್ಲಾ ಹಾಲಲ್ಲಾ ಎನ್ನುವುದ ತಿಳಿಯದ ಅವನು ಎಲ್ಲೋ ಸ್ವಲ್ಪ ಎಡವಿದ್ದ. ತಂದೆ ತಾಯಂದಿರಿಗೂ ಹೀಗೊಂದು ಹೆಣ್ಣಿನ ಮನೆಯವರ ವಿಚಾರಣೆ ಹೆಣ್ಣಿನ ಬಗ್ಗೆ ತಿಳಿದುಕೊಳ್ಳದೇ ಎಲ್ಲೋ ಅವರು ಕೂಡಾ ಎಡವಿದ್ದರು.....( ವಿಜಯನ ವೈವಾಹಿಕ ಜೀವನ ಮುಂದುವರೆವುದು....)

ಹಿಡಿ - ಶಾಪ


ಬಟ್ಟೆ ಬರೆ ಭಾಹ್ಯ ಎಂದಿಗೂ ಮನುಷ್ಯನ ನಿಜ ರೂಪವಲ್ಲ

ಉತ್ತಮ ಎಂದು ಮನೆ ಹೆಸರಿನಲ್ಲಿ ಇರುವದರಿಂದ ಉತ್ತಮರಾಗುವುದಿಲ್ಲ

ನಟನೆಯಿಂದ ತಾತ್ ಕಾಲಿಕವಾಗಿ ಜನರನ್ನು ಮರಳು ಮಾಡಬಹುದು

ಸಜ್ಜನರಿಗೆ ಕೊಟ್ಟ ಕಿರುಗುಳ ದುಷ್ಟ ಜನರಿಗೆ ಶಾಪವಾಗಿ ಕಾಡುವುದು

ಮಚ್ಚೆಯ ನಾಲಿಗೆ ಹೇಳುತಿದೆ ಕೇಳು...

ಕೇಡು ಬಯಸಿದ ಜೀವ ವಿಲವಿಲ ಒದ್ದಾಡುವುದು

ಸುಳ್ಳು ಹೇಳಿದ ಬಾಯಿ ಅದು ಹುಳಬಿದ್ದು ಹೋಗುವುದು

ಅಯ್ಯೊ ಅನ್ನಿಸಿ ಪಡೆದ ಹಣ ನಿನ್ನ ಬಳಗವ ಸುಟ್ಟು ನಿರ್ನಾಮವಾಗಿಸುವುದು

ನೀ ಇಹಲೋಕ ತ್ಯಜಿಸುವ ಮುನ್ನ ,ಮರಳಿ ಮರಳಿ ಈ ಮಾತುಗಳು ಕಿವಿಗಪ್ಪಳಿಸುವುದು.

Monday, February 18, 2013

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 2

ಅಂದ ಹಾಗೆ ಆ ಹುಡುಗನ ಹೆಸರು ಹೇಳಲಿಲ್ಲವಲ್ಲ ನಾನು...ಹೆಸರು ವಿಜಯ್. ಮಾಲೀಕರ ಸಹಾಯ ಪಡೆದು ಅವರಿಗೆ ಧನ್ಯವಾದಗಳ ಅರ್ಪಿಸಿ ಹೊಸ ಊರಿನ ಕಡೆಗೆ ನಡೆದ. ವಿಜಯ್ ಧೈರ್ಯಶಾಲಿ ಬಂದ ಅವಕಾಶವನ್ನು ಸದ್ದುಪಯೋಗ ಪಡಿಸಿಕೊಳ್ಳಲು ಏನ್ ಬೇಕಾದರು ಮಾಡುವಂತಹ ಸ್ವಭಾವ ಅವನದು. ದೇವರನ್ನು ನೆನೆಯುತ್ತಾ ಕಛೇರಿಯೊಳಗೆ ಹೋದ. ಅಲ್ಲಿಯ ಮ್ಯಾನೇಜರು ಇವನನ್ನು ಬರಮಾಡಿಕೊಂಡು ಕೆಲವು ಕಛೇರಿಯ ಪತ್ರಗಳಿಗೆ ಸಹಿ ಹಾಕಿಸಿಕೊಂಡು ಅವನ ಕುಶಲೊಪರಿ ವಿಚಾರಿಸಿದರು. ಆಗಲೆ ಮಧ್ಯಾನದ ವೇಳೆ..,ಪಾಪ ವಿಜಯನ ಹೊಟ್ಟೆ ತಾಳ ಹಾಕ ತೊಡಗಿತ್ತು..ಮ್ಯನೇಜರು ಜವಾನನ್ನು ಕರೆದು  ಇವರಿಗೆ ಊಟದ ಮನೆಗೆ ಕರೆದುಕೊಂಡು ಹೋಗು ಎಂದು ಸೂಚಿಸಿದರು. ವಿಜಯ ತನ್ನ ಹಸಿವೆ ಆರಿಸಿಕೊಂಡು ಮತ್ತೆ ಮ್ಯಾನೇಜರ್ ಇದ್ದ ಕಡೆಗೆ ಬಂದ. ಅಷ್ಟರ ಹೊತ್ತಿಗೆ ಅಲ್ಲಿ ಮತ್ತೆ ಕೆಲ ಹುಡುಗರು ಬಂದು ಸೇರಿದ್ದರು. ವಿಜಯ ಮುಂದು ಹೋಗಿ ತನ್ನ ಪರಿಚಯವ ಹೇಳಿ ಎಲ್ಲರೊಂದಿಗೆ ಬೆರೆತುಬಿಟ್ಟನು. ಹೊಸ ಕೆಲಸ ಹೊಸ ಊರು ಹೊಸ ಜನ ತಿಳಿಯದ ಭಾಷೆ ಆದರೂ ಒಂದು ತರಹದ ಸಂಭ್ರಮ. ಹೊರ ರಾಜ್ಯದವನಾಗಿದ್ದರಿಂದ ಮ್ಯನೇಜರು ಅವನಿಗೆ ಕಂಪನಿಯ ಅಥಿತಿ ಗೃಹದಲ್ಲಿ ತಂಗುವ ವ್ಯವಸ್ಥೆ ಮಾಡಿದರು.ಸಂತೋಷದಿಂದ ತಂದೆಗೆ ಪೋನ್ ಮಾಡಿ ಕೆಲಸಕ್ಕೆ ಸೇರಿಕೊಂಡೆ ಎಂಬ ಸಿಹಿ ಸುದ್ದಿ ತಿಳಿಸಿದ. ಮರು ದಿನ ಬೇಗನೆ ಎದ್ದು ತಯ್ಯಾರ್ ಆಗಿ ಕೆಲಸ ಕಾರ್ಯಗಳ ಬಗ್ಗೆ ತಿಳಿದು ಕೊಳ್ಳುವ ಹುಮ್ಮಸ್ಸಿನಿಂದ ಕಛೇರಿಯ ಕಡೆಗೆ ನಡೆದ. ಎಲ್ಲಾ ಲೊಕಲ್ ಹುಡುಗರು ಆಗಲೇ ಜಮಾಯಿಸಿದ್ದರು. ಮ್ಯನೇಜರು ಪೂರ್ತಿ ಕಂಪನಿಯ ಕೆಲಸ ಕಾರ್ಯಗಳು ಹೇಗೆ ನಡೆಯುತ್ತದೆ ಎಂಬುದ ತೋರಿಸಿ, ಎಲ್ಲರಿಗೂ ಒಂದು ಸಣ್ಣ ಸಣ್ಣ ಕೆಲಸ ಕೊಟ್ಟು ಮಾಯವಾದರು. ಗೆಳೆತನ ಪ್ರೀತಿ ವಿಸ್ವಾಸ ಬೆಳೆಯಲಾರಂಬಿಸಿತು ಎಲ್ಲಾ ಸಹ ಪಾಟಿಗಳೊಡನೆ. ದಿನೆ ದಿನೆ ಹೊಸ ಹೊಸ ಅನುಭವ..,ಕಾಲ ಉರುಳಿದಂತೆ ವರುಷ ಕಳೇದದ್ದೆ ಗೊತ್ತಾಗಲಿಲ್ಲ. ನಮ್ಮ ವಿಜಯ ಎಲ್ಲರಿಗಂತ ಒಂದು ಹೆಜ್ಜೆ ಮುಂದೆ ವರೆದು ಅದೇ ಕಚೇರಿಯಲ್ಲಿ ಪರ್ಮನೆಂಟ ಆಗಿ ನೇಮಕಗೊಂಡ. ವಿನಯತೆ ಶ್ರದ್ದೆಯಿಂದ ಕೆಲಸಕ್ಕೆ ಸಿಕ್ಕ ಬಹುಮಾನ ಎಂದುಕೊಂಡು ದೇವರನ್ನು ನೆನೆದು, ಕಲಸ ಪ್ರಾರಂಭಿಸಿದ. ತಾನು ಯಾರ ಜೋತೆಯಲ್ಲಿ ಕೆಲಸ ಮಾಡುತಿದ್ದನೊ ಅವರಿಗೆ ಇವನು ಈಗ ಅಧಿಕಾರಿ. ಕಂಪನಿಯ ಒಳ ನಡೆಯುತ್ತಿದ್ದಂತೆ ಎಲ್ಲರೂ ವಿಜಯ್ ಸಾರ್ ಅಂದಾಗ ಏನೋ ಮುಜುಗರ ಮತ್ತೊಂದೆಡೆ ಖುಷಿ.ಇನ್ನೂ ಹೆಚ್ಚು ಕಲಿಯಬೇಕು ಬೆಳೆದು ದೊಡ್ಡ ಅಧಿಕಾರಿಯಾಗಬೇಕು ಎಂಬ ಕನಸ್ಸು ಅವನಿಗೆ ಯಾವಾಗಲೂ ಕಾಡುತ್ತಿತ್ತು..ತನ್ನ ರಾಜ್ಯದ ರಾಜಧಾನಿಯಲ್ಲಿ ಕೆಲಸ ಮಾಡುತ್ತಿದ್ದ ಗೆಳೆಯನ ಸಂಪರ್ಕಿಸಿದಾಗ ಅವನ ಕಂಪನಿಯಲ್ಲಿ ಕೆಲಸ ಖಾಲಿ ಇರುವುದು ಗಮನಕ್ಕೆ ಬಂತು, ಮೂರು ವರುಷದ ನಂತರ ತನ್ನ ತಾಯಿ ನಾಡಿಗೆ ಮರಳುವ ಅವಕಾಶ ಅವನದಾಯಿತು..(ಮುಂದುವರೆಯಲಿದೆ ವಿಜಯನ ಸೆಕೆಂಡ ಇನ್ನಿಂಗ್ಸ್..)

ಇವಳೆಂತಹ ಹೆಣ್ಣು..?


ಮದುವೆ ಎಂಬ ಪವಿತ್ರ ಬಂಧನ ಹೊಕ್ಕಿ
ಗಂಡನಿಗೆ ಮೋಸವ ಮಾಡುತ್ತ ಕಳೆದಳು ವರುಷ
ಮಿಂಡನ ಮರೆಯಲಾರದೇ ತೋರೆದು ಗಂಡನ
ಓಡಿ ಹೋದಳು ಅವನ ಕೂಡ..
ಒಬ್ಬ ಗಂಡು ಸಾಲದು ಇವಳಿಗೆ
ಮಾವ ತಮ್ಮ ಗೆಳೆಯ ಎಲ್ಲರೂ ಒಂದೇ..
ರಾತ್ರಿ ಜೋತೆ ಇದ್ದವರೆಲ್ಲಾ ಗಂಡರೆ ಇವಳಿಗೆ
ಹಾದರದ ಜೀವನ ಮಾಡುವವಳಿಗೆ
ವರುಷದಿ ಮಾಡಿದ ಸಂಸಾರಕ್ಕೆ ಗಂಡ ತೆತ್ತಬೇಕಂತೆ
ಇವಳ ತಾಯಿ ಕೇಳಿದಷ್ಟು ಹಣದ ಕಂತೆ ಕಂತೆ..!
ಮಗಳ ಬಾಳಿನಲ್ಲಿ ಆಡುವ ತಾಯಂದಿರು.., ಹೀಗೂ ಊಂಟೆ..?

ನಂಬಿಕೆ ದ್ರೋಹಿ

ಕೆಟ್ಟ ತಾಯಿಯ ಹಠದ ಮಾತು ತನ್ನ ಜೀವನ ಕೆಡಿಸುವುದು

ಕುತಂತ್ರಿ ಸೋದರ ಮಾವ ತನ್ನ ಬೇಳೆ ಬೇಯಿಸುವನು

ಗಂಡ ಹೆಂಡಿರ ಜೀವನದಲ್ಲಿ ಮೂಗು ತೊರಿಸುವುದು ಇವರ ಕಾಯಕವದು

ಭಂಡ ತಾಯಿ ಎಲ್ಲರನ್ನೂ ಕೈಗೊಂಬೆಯಾಗಿ ಆಡಿಸುವ ಚಾಳಿಯವಳು

ಸೋದರ ಮಾವನ ಆಸೆ ಸೊಸೆಯ ಮೇಲೆ..

ಹೆಂಡತಿ - ಮಕ್ಕಳು ಇದ್ದರೂ...

ಅವಳ ಸಂಸಾರವ ಕೆಡಿಸಲು., ಗಂಡನ ಕೊಲ್ಲುವ ಭಂಟ

ಬುದ್ದಿ ಇರದ ಹೆಂಗಸು ತನ್ನ ಜೀವನದ ಪರಿವಿಲ್ಲದೇ

ದುಷ್ಟರ ಕೈ ಗೊಂಬೆಯಾಗಿ ಹಾಳುಮಾಡಿ ಕೊಂಡಿರುವಳು ತನ್ನ ಜೀವನವ

ಅನ್ಯಾಯ ಎಸೆದುದನ್ನು ಮರೆತು.., ನಟನೆಯ ಅನುಕಂಪ ಗಿಟ್ಟಿಸುವ ಪರಿ

ಥೂ ನಿನ್ನ ಬುದ್ದಿಗಿಷ್ಟು....ನೀ ಕಲಿತಿದ್ದು ಬರೀ ಅಕ್ಷರ...ಅದೇ ನಿನ್ನ ಅವನತಿಯ ಅವಾಂತರ

ಕಾಲು ಬಿದ್ದು ಕ್ಷಮೆಯಾಚಿಸುವ ಬದಲು ಮತ್ತೆ ತೋರುತಿಹ ಅಟ್ಟಹಾಸದ ಆಟ..

ಇವಳೆಂತಹ ಹೆಂಗಸು......?? ನಂಬಿಕೆ ದ್ರೋಹಿ..!

Sunday, February 17, 2013

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು..)


ಒಬ್ಬ ಸುಂದರ ಯುವಕ, ಮನಸಲ್ಲಿ ಸಂದರ ಕನಸ್ಸುಗಳು, ಗುರಿಯ ಬೆನ್ನ ಹತ್ತಿ ಶ್ರದ್ದೆಯಿಂದ ಮುನ್ನುಗುತ್ತಿದ್ದ. ಪದವಿ ಪಡೆದು ಕೆಲಸಕ್ಕೆ ಅಲೆಯುವ ಕಾಲವದು.ಮಹಾನಗರಿ ಇನ್ನೂ ಅವನಿಗೆ ಹೊಸದು.ಜನರ ಸಂಪರ್ಕ ಕಡಿಮೆ.ದಿನ ಪತ್ರಿಕೆಗಳನ್ನೆ ನೋಡುತ್ತಾ ಚಿಕ್ಕ ಮಟ್ಟ ಕೆಲಸವಾದರೂ ಸರಿಯೆ ಎಂದು ಹೊರೆಟವ. ತಿಂಗಳು ಕಳೆದವು ಅವನ ಹಣೆಬರಹ ದಯತೋರಲಿಲ್ಲ ಅವನಿಗೆ..ಮರಳಿ ತವರಿಗೆ ಮರಳಿದ. ತಂದೆ ನಿವ್ರುತ್ತ ಅಧಿಕಾರಿ, ಬರುವ ಪೆನಶನ್ ಹಣದಿಂದನೆ ಮನೆ ಸಾಗಿಸಬೇಕು, ತಮ್ಮಂದಿರು ಇನ್ನೂ ವಿದ್ಯಾಬ್ಯಾಸ ಮಾಡುತ್ತಿದ್ದರು.ಬೆಳೆದು ನಿಂತ ಮಗ ಪದವಿ ಮುಗಿಸಿದರೂ ಕೆಲಸ ಸಿಗುವಲ್ಲಿ ಬವಣಿಸುವುದ ಕಂಡು ತಾಯಿ-ತಂದೆಗೂ ಬೇಸರ..ಮನಸಿನ ವೇದನೆ ಹೇಳಿಕೊಳ್ಳಾಲಾರದ ಪರಿಸ್ತಿಥಿ ನವ ಯುವಕನಿಗೆ. ಹೇಗೋ ಪ್ರಯತ್ನದಿಂದ ಒಂದು ಸಣ್ಣ ವಾಹನಗಳ ರಿಪೇರಿ ಮಾಡುವ ಅಂಗಡಿಯಲ್ಲಿ ಕೆಲಸಗಿಟ್ಟಿದ..ಕೆಲಸ ಯಾವುದಾದರೇನು ಎಂದು ಶ್ರದ್ದೆಯಿಂದ ದುಡಿಯತೊಡಗಿದ.ರಾತ್ರಿವೇಳೆಯಲ್ಲಿ ಓದುವುದು, ಬೇರೆ ಸಂಸ್ಠೆಗಳಿಗೆ ಸಂದರ್ಶನ ನೀಡುವುದು ಸಾಮಾನ್ಯವಾಗಿಬಿಟ್ಟಿತ್ತು. ಶ್ರಮ ಪಡುವವರಿಗೆ ದೇವರು ಎಂದಿಗೂ ಕೈ ಬಿಡುವುದಿಲ್ಲ ಅನ್ನುವ ಸಾಕ್ಷಿಯಾಗಿ ಆ ಯುವಕನಿಗೆ ದೂರದ ಹೋರ ರಾಜ್ಯದಲ್ಲೊಂದು ಕೆಲಸ ದೊರೆಯಿತು. ಹೋರ ರಾಜ್ಯಕ್ಕೆ ತೆರಳಬೇಕಾದಾಗ ೫೦೦೦/- ರೂ ಒಟ್ಟು ಹಾಕಲಾರದೇ ಕೆಲಸ ಕಳೆದು ಕೊಳ್ಳುವ ಆ ಸಮಯ ಮನಸ್ಸಿಗೆ ಬೇಸರ ಉಂಟು ಮಾಡಿತ್ತು..ತಂದೆಗೆ ಕೇಳಬೇಕೆಂದರೆ ತಮ್ಮಂದಿರ ವಿದ್ಯಾಬ್ಯಾಸ ಎಲ್ಲಾ ಖರ್ಚುವೆಚ್ಚಗಳ ನೆನೆದು ಸುಮ್ಮನಾದ...ದಾರಿ ಇಲ್ಲದೇ ಇದ್ದ ಕೆಲಸವನ್ನೆ ಮುಂದುವರೆಬೇಕು ವೆಂಬ ನಿರ್ಧಾರಕ್ಕೆ ಬರುತ್ತಾನೆ. ವಿಷಯ ತಿಳಿದ ಮಾಲಿಕ ಅವನ ಶ್ರದ್ದೆಗೆ ಮೆಚ್ಚಿ ೫೦೦೦/- ಕೊಟ್ಟು ಅವನ ಭವಿಶ್ಯ ರೂಪಿಸಿಕೊಳ್ಳಲು ಹೇಳಿ ಕಳಿಸುತ್ತಾನೆ...( ಮುಂದುವರೆವುದು...)

Wednesday, February 13, 2013

ಹಣೆಬರಹ

ಫ಼ೆಬ್ರುವರಿಯಲ್ಲಿ ನಾ ನಿನ್ನ ಮನಸಾರೆ ಪ್ರೀತಿಸುತ್ತಿನಿ ಅಂದವಳು 
ಎರಡು ತಿಂಗಳದಲ್ಲೆ....ಎಪ್ರಿಲ್ ಫ಼ೂಲು ಮಾಡಿ ಓಡಿ ಹೋದಳು
ಅವಳ ಜಾತಕದಲ್ಲೆ ಬರೆದಿತ್ತು ಅವಳೊಂದು ಬ್ಲಡಿ ಫ಼ೂಲು
ಹಣೆಬರಹ ಬದಲಿಸಿಕೊಂಡ ಹುಡುಗನೀಗ ಮಾಲಾ ಮಾಲು..!

Tuesday, February 12, 2013

ಕಣ್ಣಿನ ಪರದೆಗಳು ಕುಸಿಯುತ್ತಿತ್ತು 
ಹಾಸಿಗೆಯು ಕರೆಯುತಿತ್ತು 
ನಿದ್ದ್ರಾದೇವಿ ಆವರಿದ್ದೆ  ತಿಳಿಯಲೇ ಇಲ್ಲಾ 
ಸಿಹಿ ಸಿಹಿ ಕನಸಿನಲ್ಲಿ ಮುತ್ತುಗಳ ಸುರಿಸಿದಂತಾಗಿ 
ಒಮ್ಮೆ ಬಲ ಗಲ್ಲಕ್ಕೆ ಮತ್ತೊಮ್ಮೆ  ಎಡ ಗಲ್ಲಕ್ಕೆ  
ಒಮ್ಮೆ ಕೈಯಿಗೆ  ಮತ್ತೊಮ್ಮೆ ಕಾಲಿಗೆ  ಚುಂಬಿಸಿದಂತಾಗಿ 
ನಸುಕಿನಲ್ಲಿ ಎದ್ದು ಮಯ್ಯ ಮುರಿದೆ 
ಮೈ ಕೈ ಮುಟ್ಟಿ  ಮುಟ್ಟಿ  ನೋಡಲು
ಅಲ್ಲಲ್ಲಿ ಕಂಡವು ಗುಮ್ಮುಟೆಯ ಸಾಲುಗಳು 
ಆಗಲೇ ತಿಳಿದಿತ್ತು ಕನಸಿನಲ್ಲಿ ಕೊಟ್ಟವಳು ಸುಂದರಿಯಲ್ಲ 
ರಕ್ತವ ಹೀರಿ ಬಾಯಿ ಚಪ್ಪರಿಸಿದ  ಹೆಣ್ಣು ಸೊಳ್ಳೆ ಅವಳು  

***ಭಾವಪ್ರಿಯ***

Thursday, February 07, 2013

ಮತ್ತೆ ಮೂಡಿತು....!


ಮತ್ತೆ ಮೂಡಿತು ಮಂದಹಾಸ ಅವಳ ಮೊಗದಲ್ಲಿ

ಮತ್ತೆ ತುಟಿಗಳು ಅರಳಿದವೂ ಅವಳ ನಗು ಅಂಚಿನಲ್ಲಿ

ಸಂತೋಷ ಹೊಮ್ಮುತಿದೆ ಆ ಕಣ್ಣಗಳಲ್ಲಿ ,

ಗಲ್ಲ ಕೆಂಪಾದವು ಹರುಷದ ಮೊಗ್ಗೆ ಚೆಲ್ಲಿ.., ಮತ್ತೆ ಮೂಡಿತು..ಮತ್ತೆ ಮೂಡಿತು..!

Friday, February 01, 2013

ಅನ್ನಸ್ಲಿಕತ್ತದ ನನಗ..., ಏನೋ ಹೇಳೊದೈತಿ ನಿನಗ..!

ಆ ನಿನ್ನ ಮಾರಿ ಮ್ಯಾಗ,

ಏನೋ ಸಂಗತಿ ಕಾಡೇತಿ ಅಂತ..

ಆ ನಿನ್ನ ಸಪ್ಪನ ಕಣ್ಣಾಗ,

ದುಃಖ ಮನಿ ಮಾಡಿ ಕೂತಂಗ..

ತುಟಿ ತಡವರಿಸಿ ಬಿಗಿದಾವ,

ಮಾತು ಬಾರದ ಮೂಕಿಹಂಗ..

ಅನ್ನಸ್ಲಿಕತ್ತದ ನನಗ,

ಏನೋ ಹೇಳೊದೈತಿ ನಿನಗ..


ಮನಸಿನ ಗೊಂದಲದಾಗ,

ಅದರಿ ಅವಿತು ಕುಳಿತಿ ಯಾಕ..

ಹೃದಯಕ್ಕ ಮಂಕು ಕವಿದಾಗ,

ದುಗಡವ ನೀ ಹೊರ ಚೆಲ್ಲಬೇಕ ..

ಮೌನ ದೂಡ ದೂರಕ,

ಚಿಂತಿ ಬಿಟ್ಟು ತೊಡಿಕೊಳ್ಳಾಕ ಅಣಿಯಾಗ..

ಅನ್ನಸ್ಲಿಕತ್ತದ ನನಗ,

ಏನೋ ಹೇಳೊದೈತಿ ನಿನಗ..!



***ಭಾವಪ್ರಿಯ***

Sunday, January 27, 2013

ಸ್ತ್ರೀ ವಿರೋಧಿ


ಹುಟ್ಟುತ್ತಲೆ ಮಗನ ತ್ಯಜಿಸಿ 
ಕಸದ ತೊಟ್ಟಿಗೆ ಎಸೆದಳು ಇವಳೆಂತಾ ಹೆಣ್ಣು ?
ಬೀದಿಯಲ್ಲಿ ಬೆಳೆದ.. ಭಿಕ್ಷೆ ಬೇಡಲೆಂದು ಹೋದವನಿಗೆ,
ದೂರ ದೂಡಿದಳು ಇವಳೆಂತಾ ಹೆಣ್ಣು..?
ಕಲಿತು ದೊಡ್ಡವನಾಗಿ ಬೆಳೆಯಬೇಕೆನ್ನುವಾಗ ಸಿಕ್ಕಳೊಬ್ಬಳು ಹುಡುಗಿ
ಪ್ರೀತಿಯ ಹೆಸರು ಹೇಳಿ ಮನ ಕೆಡಸಿ ನಡೆದಳು ಇವಳೆಂತಾ ಹೆಣ್ಣು ?
ಮಾಯೆಗೆ ಮರುಳಾಗಿ ಮದುವೆ ಬಂಧನಕ್ಕೆ ಜಾರಿದ,ನಟನೆಯ ಸುಳಿ ಬೆಸೆದಳು..
ಮನೆಯ ದೋಚಿ ಓಡಿ ಹೋದಳು ಮರ್ಯಾದಿಯ ಕಳೆದು.. ಇವಳೆಂತಾ ಹೆಣ್ಣು. ? 
ಪ್ರತಿ ಹೆಜ್ಜೆಗೂ ಮೋಸ ಹೋದವ ಒಬ್ಬ ಗಂಡು,
ಅದಕ್ಕೆ ಇವನು ಇಂದು ಸ್ತ್ರೀ ವಿರೋಧಿ ಬೆಂಕಿಯ ಚೆಂಡು.

Friday, January 25, 2013

ಅರುಣರಾಗ

ಚುಮು ಚುಮು ಚಳಿ ಮೈ ಸೊಕಿದಾಗ


ಮಂಜಾನೆಯ ಮಂಜು ಕಣ್ಣಾವರಿಸಿದಾಗ

ಹಕ್ಕಿಗಳ ಚಿಲಿಪಿಲಿ ಮುಗಿಲು ಮುಟ್ಟಿದಾಗ

ಸೂರ್ಯನ ಕಿರಣಗಳು ಭುವಿ ತಟ್ಟಿದಾಗ

ಸಮಸ್ತ ಮನು ಸಂಕುಲಕೆ ಶುಭ ಅರುಣರಾಗ .!



***ಭಾವಪ್ರಿಯ***

Thursday, January 17, 2013

ಇಬ್ಬನಿ


ಮಾಗಿಯ ಚಳಿಯಲ್ಲಿ ಇಬ್ಬನಿ..,
ಮೂಡಿದೆ ಎಲೆ ಎಲೆ ಮೇಲೆ !
ರವಿಯ ತಿಳಿ ಬಿಸಿಲಿಗೆ ಕರಗಿದ ಇಬ್ಬನಿ,
ಜಾರಲು ಕಾದಿದೆ ಎಲೆಯ ತುದಿಯಲಿ
ಜೋತು ಬಿದ್ದ ಇಬ್ಬನಿಯ ಹನಿಗೆ,
ರವಿಕಿರಣದ ಪ್ರೀತಿಯ ಅಪ್ಪುಗೆ !

***ಭಾವಪ್ರಿಯ***

Wednesday, January 16, 2013

ಲಗಾಮು ಇರದ ಕುದುರೆ



ಕುದುರೆ ಓಡುತಿಹುದು ಕುದುರೆ

ಆಧುನಿಕತೆಯ ಬೆನ್ನೇರಿ ,

ಸಂಸ್ಕ್ರುತಿಯ ಮರೆತು,

ದಿಕ್ಕು ದಿಸೆ ಇಲ್ಲದೆ ಓಡುತಿದೆ, ಕುದುರೆ ಓಡುತಿದೆ.



ಅಹಂ ಗುಣವ ಮೇಲೆತ್ತಿ

ಶಿಷ್ಟರನ್ನ ನೆಲಕ್ಕೆ ಒತ್ತಿ

ಹೊಲಸು ತಿಪ್ಪೆಯಲಿ

ಸುಖ ಕಾಣುತಲಿ ಓಡುತಿದೆ , ಕುದುರೆ ಓಡುತಿದೆ.



ಹಿರಿತನದ ಗೌರವ ಇಲ್ಲ ಅದಕೆ

ಸೊಕ್ಕು ತುಂಬಿ ಮೈಯ ಓಳಗೆ

ಮಧ್ಯ ಕುಡಿಸಿದ ಮಂಗನ ಹಾಗೆ

ಎಲ್ಲವನ್ನು ಬಿಟ್ಟುಕೊಟ್ಟು ಓಡುತಿದೆ, ಕುದುರೆ ಓಡುತಿದೆ.



ಲಂಗು ಇಲ್ಲದ ಕುದುರೆ

ಲಗಾಮು ಇರದ ಕುದುರೆ

ತನ್ನ ಅವನತಿಯೆಡೆಗೆ

ಅವಸರದಿ ಓಡುತಿದೆ, ಕುದುರೆ ಓಡುತಿದೆ.



***ಭಾವಪ್ರಿಯ***

ನನ್ನದು ನೂರು-ನೂರು ಜನುಮದ ಕೋಪ


ಆ ಕ್ಷಣದಿ ಬಂದವಳ ಮೇಲೆ ಹರಿ ಹಾಯಿತು ವಿಕೋಪ

ಆದರು ಹತ್ತಿರ ಬಂದು ಮಾತನಾಡುತ್ತಾಳೆ ಪಾಪ

ಇವಳೆನಪ್ಪಾ.. ಬಿಟ್ಟರೂ ಬಿಡಲಾರದೆ ತೊರುತ್ತಾಳೆ ಅನುಕಂಪ.

Tuesday, January 15, 2013

ಅಭಿಲಾಶೆ




ನಯವಾದ ನುಣುಪು ಹುಬ್ಬು ಸೌಮ್ಯತನವ ಮೆರೆದಂತೆ

ಕಾಡಿಗೆ ಲೇಪಿಸಿದ ಕಣ್ಣು ., ಧ್ರುವ ನಕ್ಷತ್ರದಂತೆ

ಹಣೆಯ ಬೊಟ್ಟು.., ಹುಣ್ಣಿಮೆ ಚಂದ್ರನಂತೆ

ಕನ್ನಡವ ನುಡಿವ ತುಟಿಗಳು, ನಾಡಿಗೆ ಶ್ರೆಯಸ್ಸಂತೆ

ವಿಶಾಲ ಹಣೆ.., ಉದಾರತನ ಸಾಕ್ಷಿಯಂತೆ

ಸೀರೆಯನುಟ್ಟು ನೀ ನಡೆದರೆ ಹಸಿರು ಬನಸಿರಿಯೇ ನೀನಂತೆ

ಹೀಗೆಯೇ ನೀ ಕಾಣಬೇಕೆನ್ನುವ ನನ್ನ ಅಭಿಲಾಶೆ

ನಲಿಯುತಾ ಬರುವೆಯಾ ನನ್ನ ಉಷೆ..?



***ಭಾವಪ್ರಿಯ ***

Thursday, January 10, 2013

ಮನುಜರು ತುಂಬಿದ ಜಗದಲ್ಲಿ ನಾನೋಬ್ಬ ಒಂಟಿಗ


ಸದ್ದು ಗದ್ದಲದಲ್ಲೂ ಮೂಕನಾಗಿ ನಡೆದಿಹ ಪಯಣಿಗ

ಜೀವನದ ಹಾದಿಯಲ್ಲಿ ಮಂಜು ಕವಿದಿರಲು

ದಾರಿ ಕಾಣದ ಮುಸುಕೇ ಮೊಳಗಿರಲು

ಆ ವೆಂಕಟನನ್ನು ನೆನೆದರೂ ದೂರವಾಗದು ಸಂಕಟ

ಮೂರು ಮಾಸ ಕಳೆದು ಮಗದೊಂದು ಮಾಸ ಬಂದಿಹುದು

ಅಂದಿಗೂ ಅಲ್ಲೆ ಇತ್ತು...ಇಂದಿಗೂ ಅಲ್ಲೆ ಇಹುದು

ಜೀವನ ಸಹಜ ಅನ್ನುವ ಕ್ಷಣವೇ ಬಾರದೇ

ಸಾಗಲಿ ಹೇಗೆ.... ಆಶಯದೆಡೆಗೆ ?

Monday, January 07, 2013

ಶೂನ್ಯ

ಶೂನ್ಯ




ನೀ ಹತ್ತಿರವಿದ್ದರೂ ದೂರ



ಮನದಲ್ಲಿ ನೆಲೆಸಿರುವೆ.., ಹೆಚ್ಚಿದೆ ಮನಸ್ಸಿನ ಭಾರ



ಅನುಕ್ಷಣವೂ ಬಂದು ನೀ ನೆನಪಿಗೆ...,ತುಳುಕುತಿದವೆ ಭಾವನೆಗಳ ಸಾಗರ



ಹೃದಯ ಚಿಮ್ಮುವ ನೆತ್ತರು ..ದಿನೇ ದಿನೇ ಹೆಚ್ಚಿಸಿದೆ ಉಸಿರು



ಮನಸ್ಸು - ಹೃದಯಗಳು ಭಾವವ ಬೆಸೆಯುತಿಹರು



ನೀ ದೂರಾದರೆ ಇನ್ನ ....ನನ್ನ ಲೋಕವೇ ಶೂನ್ಯ .



ಭಾವಪ್ರಿಯ

Thursday, December 27, 2012

ನಲ್ಲ ನಿನ್ನ ಬಾಹುಗಳಲಿ ಒರೆಗಿಸಿಕೋ ಎನ್ನ ಅಂದಳು  ನಲ್ಲೆ  


ಪ್ರೀತಿಯಿಂದ ಎದೆಗೊತ್ತಿದೆ ಅವಳ ಮೊಗವ, ಚುಚ್ಚಿತು ಅವಳ ಕಿವಿ ಓಲೆ

ತಿಳಿಯದೇ  ಆದ ತಪ್ಪು ಎಂದು ಊಹಿಸಿ , ಕ್ಷಮಿಸಿ ಮುನ್ನಡೆದೆ

ಅಂದು ಚುಚ್ಚಿದವಳು ...ಇಂದು ಇರಿದಿರಿದು ಮಾಡಿಹಳು  ನನ್ನ ಕೊಲೆ .

ಪ್ರೀತಿ


ಇಣುಕಿ ನೋಡು ಹೃದಯದ ಕಿಟಕಿ

ಬೆಚ್ಚಗೆ ಮಲಗಿಹುದು ಪುಟ್ಟ ಪ್ರೀತಿಯ ಹಕ್ಕಿ

ಕಣ್ಣುಗಳ ತೆರೆದು ಪಿಳಿ ಪಿಳಿ

ಅವಿತಿರುವುದು ಗೂಡ ಮರೆಯಲಿ

ಜಗದ ಪರಿವಿಲ್ಲದ ಅದಕೆ

ನವ ಕನಸುಗಳದೇ ಭರಾಟೆ

ರೆಕ್ಕೆಗಳ ಬಿಚ್ಚಿ ಪಟ ಪಟನೆ

ಹಾರಿ ಸೇರಬೇಕೆನ್ನುವ ಒಲವಿನ ಅರಮನೆ . 

Thursday, November 22, 2012

ತಕ ಧಿಮಿ ತಕಿಟ

ತಕ ಧಿಮಿ ತಕಿಟ.. ತಕ ಧಿಮಿ ತಕಿಟ


ಮೊಗದ ಸಿರಿ ಹೃದಯ ಕಲುಕುವ ಆಟ

ತಳುಕು ಬಳುಕು ಇವರ ಮೈ ಮಾಟ

ಘಲ್ ಘಲ್ ಗೆಜ್ಜೆ ಏರಿಸಿದ ಹ್ರುದಯದ ಬಡಿತ

ಜೀವ ಉಲ್ಲಾಸಗೋ೦ಡು ಮನವಾಯ್ತು ಮರ್ಕಟ

ಭೊಲೋಕದಲ್ಲಿ ಇವರ ಅಟ್ಟಹಾಸದ ಆರ್ಬಟ

ಮೆಟ್ಟಿ ನಿಲ್ಲುವೆ ಯಮಲೋಕದಲ್ಲಿ ಇವರ ಹಠ


ಅಳಿಸುವೆ ನಾ ಸಜ್ಜನರ ಸಂಕಟ .


Tuesday, October 23, 2012

ಪ್ರೀತಿ ಉಕ್ಕುತಿದೆ ..

ನಿನ್ನ ಜೊತೆ ನಡೆದ ಹಾದಿ
ಕಲ್ಲು ಮುಳ್ಳುಗಳು ಇದ್ದರೂ ಹೂವು ಹಾಸಿದಂತಾಗಿ
ಜೊತೆ ಜೊತೆಯಲ್ಲಿ ಸವೆದ ಕ್ಷಣಗಳು ಒಂದಾಗಿ
ಮುದ ನೀಡುತಿವೆ ಮನಸಿಗೆ ತಂಗಾಳಿಯಾಗಿ.. , ಪ್ರೀತಿ ಉಕ್ಕುತಿದೆ..!

ನಿನ್ನ ಅಂದ ಚಂದಕೆ ಬೆರಗು ನಾನಲ್ಲ
ಯಾವ ಐಶ್ವರ್ಯದ ಹಂಗು ನನಗಿಲ್ಲ
ನಿನ್ನ ಗುಣಕೆ ತಲೆ ಬಾಗಿಹೆ ನಲ್ಲ
ನಿನ್ನ ಸುಖಾಗಮನವೇ ನನದೆಲ್ಲ , ಬಯಸಿ ಬಯಸಿ ಪ್ರೀತಿ ಉಕ್ಕುತಿದೆ..!

ನಿನ್ನ ಹಣೆಗೆ ಒಂದು ಅಕ್ಕರೆಯ ಮುತ್ತಿಡಲೇ
ನಿನ್ನ ಕಣ್ಣ ಹನಿಗಳ ಇಂಗಿಸಿ ಕುಡಿಯಲೇ
ನನ್ನ ಹೃದಯದ ಗೂಡಿನಲ್ಲಿ ನಿನ್ನ ಬಚ್ಚಿಡುಲೇ
ಅನುದಿನವು ಮುದ್ದಿಸಿ ಸ್ನೇಹ ಬೆಸೆಯುಲೇ..,ನನ್ನ ಒಡಲೊಳು ಪ್ರೀತಿ ಉಕ್ಕುತಿದೆ..!

Friday, October 12, 2012

ನಿನ್ನ ಮಾತುಗಳು ಅನಾವಶ್ಯಕ ಅಂದ ನಲ್ಲೆಗೆ....

ನಿನ್ನ ಮಾತುಗಳು ಅನಾವಶ್ಯಕ ಅಂದ ನಲ್ಲೆಗೆ.... 
ನಾನು ಕೊಟ್ಟ ಉತ್ತರ " ಧೀರ್ಘ ಅನಿರ್ದಿಷ್ಟಿತ ಮೌನ "
ಇನ್ನು ಮೇಲೆ ತೆರೆಯುವುದೇ ಇಲ್ಲಾ ನನ್ನ ಬಾಯಿನ 
ನೀನಿಟ್ಟ ಹರಿತಾದ ಬಾಣ ನಾಟಿದೆ ನನ್ನ ಹೃದಯವನ್ನ  
ಮೂಕ ಮಾಡಿಸಿದೆ ಎನ್ನ , ಇನ್ನು ಬರಿ ಸ್ಮಶಾಣ ಮೌನ 

Thursday, October 11, 2012

ನಾಮಕರಣ


ನಾ ಚಿನುಕುರುಳಿ ಕಂದ


ಹುಟ್ಟುತ್ತಲೇ ಹಂಚಿದೆ ಆನಂದ

ಅಮ್ಮನ ಮಡಿಲೆ ನನಗೆ ಬೃಂದಾವನ

ಅಪ್ಪನ ಹೆಗಲೇ ನನ್ನ ವಾಹನ

ಅಜ್ಜಿ, ತಾತ, ಬಂಧು ಮಿತ್ರರೆಲ್ಲ ಒಟ್ಟಾಗಿ ಯೋಚಿಸಿ ಇನ್ನ  

ಪುಟ್ಟ ಪುಟ್ಟ ಹೆಜ್ಜೆ ಇಡುವ ಮುನ್ನ

ಏನೆಂದು ಕೂಗಿವಿರಿ ಹೇಳಿ ನನ್ನ ?

.

Tuesday, October 09, 2012

ನನ್ನ ಮೊದಲ ಪ್ರೀತಿ





ಕಣ್ಣು ಹೊಳೆವ ಚಿಗುರೆಯ ಅಣು

ಅಗಲದ ಹಣೆಯೇ ಅವಳಿಗೆ ಭೂಷಣ

ಕುಕ್ಕುತಿವೆ ಹುಬ್ಬುಗಳ ನುಣುಪಾದ ಬಾಣ

ಮೆತ್ತಗೆ ಹಾಸಿಗೆಯಂತ ಅವಳ ಕಾಲ್ಗುಣ

ಜೊತೆ ಜೊತೆಯಲಿ ಅವಳ ನಡುಗೆ ಸುಖದ ಪ್ರಯಾಣ

ಜೀವನದ ಏರಿಳಿತದಲೂ ತೋರುವಳು ಅವಳು ಸೌಮ್ಯ ಗುಣ

ದಿನ, ಮಾಸಗಳು, ಕಳೆಯುತಲಿ ಇವಳೊಡನೆ , ಇವಳಾದಳು ನನ್ನ ಪಂಚಪ್ರಾಣ

ನನ್ನ ಮೊದಲ ಪ್ರೀತಿಯೇ ಇವಳು ...ನನ್ನೊಲುಮೆಯ ಕಾರು .



***ಭಾವಪ್ರಿಯ***

Wednesday, October 03, 2012

ಮದುವೆ ಎಂದರೆ ಕೆಲವರಿಗೆ ...





ವಯಸ್ಸಿಗೆ ಬಂದ ಹುಡುಗ-ಹುಡುಗಿಯರಿಗೆ ಅದು ಮೋಜು

ಹುಡುಗಿಯರ ದೃಷ್ಟಿಯಲಿ ಗಂಡ ಒಂದು ಏಟಿಎಂ ಕಾರ್ಡು

ಚಿನ್ನ ವಜ್ರ ವೈಡುರ್ಯಗಳ ಕೊಡಿಸಲು ಒಂದು ಕ್ರೆಡಿಟ್ ಕಾರ್ಡು

ತನ್ನ ಜೀವ ಕಾಪಾಡಲು ಬೇಕಾಗುವ ಒಂದು ಬಾಡಿ ಗಾರ್ಡು.



ತಂದೆಯ ಮನೆಯಲ್ಲಿ ಸಿಗದ ಸುಪ್ಪತ್ತಿಗೆ ಬಯಸುವ ತಾಣ

ಗಂಡನನ್ನು ಮುಷ್ಟಿಯಲ್ಲಿ ಇಡಲು ಹೂಡುವಳು ತನ್ನ ಮೋಹದ ಬಾಣ

ಬಾರದೆ ಹೋದಲ್ಲಿ., ತೋರುವವಳು ತನ್ನ ನಿಜವಾದ ಬಣ್ಣ

ಎಲ್ಲದರಲ್ಲೂ ಸೋತರೆ, ಶುರುವಾಗುವುದು ಹೊಸ ರಾಮಾಯಣ..!



ಸಣ್ಣ ಪುಟ್ಟ ಜಗಳಗಳಿಗೆ ತ್ವರೆದು ಗಂಡನನ್ನ

ಮರೆತೇ ಬಿಡುವರು ಮದುವೆಯ ಸಮಯದಲ್ಲಿ ಮಾಡಿದ ಪ್ರತಿಜ್ಞ

ಆಫೀಸಿನ ಕೆಲಸ ಮಾಡುವವರಿಗೆ..,ಮಾತನಾಡಿಸುವುದು ಹಣ

ಸಂಸಾರ ತೊರೆದು ನಡೆಸುವರು ಶ್ವೆಛ್ಚಾಚಾರದ (ಹಾದರದ) ಜೀವನ ..!

-------------------------------------------------------------------------



ಹುಡುಗನ ದೃಷ್ಟಿಯಲಿ ಹೆಂಡತಿ ಒಂದು ಮನೆಯ ಆಳು

ಗಂಡನ ಬೇಡಿಕೆಗಳ ಈಡೇರಿಸಲು ಸತತವಾಗಿ ದುಡಿಯುವ ಹುಳು

ಮನೆಯ ಶುಚಿಗೊಳಿಸುತ್ತ, ಗಂಡ-ಮಕ್ಕಳಿಗೆ ಅಡುಗೆ ಮಾಡಿ ಬಡಿಸುವವಳು

ಕಾಣದು ಅವನಿಗೆ ಹೆಂಡತಿಯ ನೋವಿನ ಗೀಳು..!



ಇನ್ನು ಕೆಲವರಿಗೆ.., ಹೆಂಡತಿ ತರಬೇಕು ಆಸ್ತಿ ಪಾಸ್ತಿ ಜೋರು

ನಿವೇಶನ , ಕಾರುಗಳ ಬೇಡಿಕೆಗಳು ಸಾಲು ಸಾಲು

ಸಿಗದೇ ಹೋದಲ್ಲಿ ., ಹೆಂಡತಿಗೆ ಶುರು ಕಿರಿ-ಕಿರಿ ನೂರು

ಪಾಪ., ಅವಳಿಗೆ ಜೀವನವೇ ಜಿಗುಪ್ಸೆಯ ತೇರು !



ಹೆತ್ತವರ ಅಗಲಿ ಬಂದ ಹುಡುಗಿಗೆ ತೋಚದು ಇನ್ನೇನು

ನಂಬಿ ಬಂದ ಗಂಡನೇ ತೋರುವುದಿಲ್ಲ ಪ್ರೀತಿ ಚೂರು

ತನ್ನ ಬಯಕೆ ಬವಣೆಗಳ ಕೇಳುವವರಿಲ್ಲದೇ ಹರಿಸುತಿರುವಳು ಕಣ್ಣೀರು

ಮಾಗಿ ಹೋದ ಜೀವನ ನಡಿಸಲಾರದೆ ತಾನೆಯೇ ಕೊನೆಯಾದಾಳು..!


*** ಭಾವಪ್ರಿಯ***





Sunday, September 30, 2012

ಗೆಳತಿ

ಕಾಡ ಬೇಡ ಗೆಳತಿ 
ಬೇರ್ಯಾರಿಲ್ಲ  ನನ್ನ ಗೆಳತಿ
ಇದ್ದರೂ..., ಆಗಲಾರಳು  ನಿನ್ನ  ಸವತಿ  
ನನ್ನ ಮನಸಿನ್ಯಾಗ  ಯಾಕ  ತಣ್ಣೀರು  ಸುರಿತಿ   
ನೀನ... ನನ್ನ ಹೃದಯದ ಒಡತಿ 

ಮೌನವಾಗಿ ಓಡುತಿ ಯಾಕ ಚಿತ್ತ ಕದಡಿ 
ಬೆಂದು ಹೋಗತೇನಿ ನಾ ಒದ್ದಾಡಿ-ಒದ್ದಾಡಿ   
ನನ್ನ ಕ್ಷಣಗಳು ಕಳೆದಾವ ನಡು-ನಡುಗಿ 
ಆಗಬಾರದೇ ನೀ ನನ್ನ ಅಮೃತ ಗಡಗಿ .


***ಭಾವಪ್ರಿಯ***    

  

Friday, September 28, 2012

ಮೇಘ ಮಾಯೆ



ಮತ್ತೆ ಕವಿದಿದೆ ಕಪ್ಪು ಛಾಯೆ 
ಮತ್ತೆ ಹರಿಸ್ಯಾಳ ಹನಿ, ಮೇಘ ತಾಯೆ 
ಗೆಳತಿ ಇಳೆಯ ಸಿಟ್ಟು ಅಳಿಸಲಿಕ್ಕೆ 
"ಧೋ..." ಎಂದು ಸುರಿದಾಳೆ ಮೇಘ ಮಾಯೆ 

ಹರಿ-ಹರಿದು ಬರಲಿ ಅವಳ ಧಾರೆ 
ತುಂಬಲಿ ಹಳ್ಳ , ನದಿ , ಕಣಿವೆ, ಕೆರೆ 
ಹಸಿರು ಬಡಿಸಲಿ ಬಾಳೆಯಲೆಯಲೇ
ಹಸಿರನುಟ್ಟು ಬಸಿರಾಗು ನೀ ಧರೆ

ಮುಗಿಲು ನೋಡುತಿದ್ದ ರೈತರೇ 
ಹಾರಿ ಕುಣಿದಾಡಿ ಇಗಲೇ  
ಬೆಳೆಯ ಬೆಳೆಯಲು ಕರುಣಿಸಿಹಳು  ತಾಯೆ 
ಇನ್ನು ಸಂಕಷ್ಟಗಳು ಮಂಗ ಮಾಯೆ  

***ಭಾವಪ್ರಿಯ***


Monday, September 24, 2012

खामोश होगई है प्यार


बांध करके ह्रदय का द्वार 
इसको ना है किसीका इंतज़ार 
ना है इसको किसीसे ऐतबार 
खामोश होगई है प्यार  !

जो प्यार की भाषा ना समाज पाया वोह शायर  
कैसे हो उसको  किसीकी प्यार की खबर 
खोगाया है अँधेरे में होके बेखबर 
खामोश होगई है प्यार !

धड़कते अरमानो को छुपाकर
खुशिया सब भुलाकर 
जीवन की हर उम्मीद छोड़कर 
खामोश होगई है प्यार  !
 

Monday, September 17, 2012

ಮತ್ತೆ ಶುರುವಾಗಿದೆ ಓಟ

ಮತ್ತೆ ಶುರು ಮಾಡಿದೆ ಓಟ 
ಚಿಕ್ಕವರಿದ್ದಾಗ ಓಡಾಟವೇ ಆಟ 
ಬೆಳೆದು ಬೆಳೆಯುತ್ತಲೇ ವಿದ್ಯೆ ದೇವಿಯಡೆಗೆ ಓಟ 
ಮತ್ತೆ ಶುರುವಾಗಿದೆ ಓಟ 

ಪದವಿಧರನಾದ ಮೇಲೆ ಮುಗಿಯಲಿಲ್ಲ ಓಟ 
ಕೆಲಸ ಹುಡುಕುತ್ತಲೇ ಶುರುವಾಯಿತು.., ಮತ್ತೊಂದು  ಜಂಜಾಟ 
ಮಹಾನಗರಿಯಲ್ಲಿ  ಅಲೆದು, ಅಲೆದು, ಕಡೆಗೂ ಸಿಕ್ಕಿತೊಂದು ಆಸರೆಯ ಕೂಟ 
ಮತ್ತೆ ಶುರುವಾಗಿದೆ ಹೊಸದೊಂದು ಓಟ

ಬೆನ್ನಮೇಲೊಂದು ರೊಟ್ಟಿಯ ಬುತ್ತಿ 
ಹೊರೆಟೆವು ನಾನು  ಹಣದ ಬೆನ್ನಹತ್ತಿ.
ನೆಮ್ಮದಿ ಇರದ ಖುಷಿಯ ಮೆಟ್ಟಿ   
ತಪ್ಪದೆನಗೆ ಕಚೇರಿಯ ಕಾಟ 
ಮತ್ತೆ ಶುರುವಾಯಿತು ಓಟ    

ಹುಟ್ಟಿದಾಗಿನಿಂದಲೂ ಹೀಗೆಯೇ ಇದೆ ಓಟ 
ಒಮ್ಮೆ ನನಗಾಗಿ,  ಇನ್ನೊಮ್ಮೆ ನನ್ನ ಹಡೆದವರಿಗಾಗಿ  ಓಟ
ನನ್ನ ಆರೋಗ್ಯವ ಕಾಪಾಡಿಕೊಳ್ಳಲು,
ವರುಷಗಳ ನಂತರ ಮತ್ತೆ ಶುರುವಾಗಿದೆ ಓಟ.

***ಭಾವಪ್ರಿಯ***


 

Tuesday, September 11, 2012

ಬಾನ ಚಂದಿರ

ಚಂದ್ರ ತುಂಬಿದ ಬಾನ ತುಂಬಾ,
ಹಾಲಂತೆ ಚೆಲ್ಲಿದ ಬೆಳದಿಂಗಳ ಬೆಳಕ,
ತಂಗಾಳಿ ತೇಲಿತು ಭೂಮಿ ತುಂಬಾ,
ಸಾರಿತು ರಾಗ ತೋಟದ ಬಳಗ,
ಹೂಗಳ ಚೆಲ್ಲಾಟ ಇರುಳು ತುಂಬಾ,
ಮರೆಯಾದ ಚಂದ್ರ ಮೋಡದ ಒಳಗ.

Saturday, September 08, 2012


ಹೆದ್ದಾರಿ ಸುಂದರಿ

ಅಂಕು ಡೊಂಕಿನ ಮೈಮಾಟದ ಸುಂದರಿ,
ಉಬ್ಬು ತಗ್ಗುಗಳ ಒಯ್ಯಾರಿ,
ನಿನ್ನ ಮೇಲೆ ಹರಿದೊಡೆ ಎಬ್ಬಿತೋ ಧೂಳಿ !
ಉದ್ದಕ್ಕೂ, ಅಗಲಕ್ಕೂ, ಏಕೆ ಮರಿಮಾಚಿದೆ ನಿನ್ನ ಸಾರಿ ?
ಓಡಾಡುವ ಜನರು ನಿನ್ನ ಮೇಲೆ ಕೆಂಡಕಾರಿ,
ನಿನ್ನ  ಸುಧಾರಿಸುವವರು  ಹೌಹಾರಿ,
ಭರದಿಂದ ನಡೆದಿದೆ ನಿನ್ನ ಸಿಂಗರಿಸುವ ಕಾಮಗಾರಿ.

***ಭಾವಪ್ರಿಯ***

Monday, September 03, 2012

ಮಿಡಿಯುತಿದೆ ಹೃದಯ



ಚೆಲುವೆ ಕುಳಿತು ಬಿಡು ಹೀಗೆ ಮೌನವಾಗಿ 
ಹೃದಯದ ಮೌನವನ್ನೇ ಆಲಿಸುತ್ತಿರುವೆ ನಿನಗಾಗಿ 
ಮಾತುಗಳ ಬಿನ್ನಹಿಸಲಾರದ ಭಾವನೆಗಳಿಗಾಗಿ
ಮಿಡಿಯುತಿದೆ ಎನ್ನ ಹೃದಯ ನಿನ್ನ ಸಂತೈಸುವುದಕ್ಕಾಗಿ .

ಮನಸದು ನಿನ್ನ ಕಾಡುತಿಹುದು ನಾ ಅರಿಯೆ 
ಮೂಕ ರಾಗದಲಿ  ಹಾಡುತಿದೆ ನಾ ತಿಳಿದೆ
ಬೇಸರವ ದೂರ ಮಾಡಲು ವಿಧಾನವ ಹುಡುಕುತಿರುವೆ
ನಿನ್ನ ಮನದ ಡುಗುಡಕೆ ಎನ್ನ ಹೃದಯ ಮಿಡಿಯುತಿದೆ 

ಅಕ್ಕರೆಯ ತೋರಿಸಿದರೆ ನಿನಗೆ, ನೀ ತಪ್ಪಾಗಿ ತಿಳಿಯದಿರೆ 
ಸಹಾನುಭೂತಿ ಅಲ್ಲ ಅದು ನನ್ನ ಪ್ರೀತಿಯ ಸೆರೆ 
ಸ್ವಾಭಿಮಾನಿ ನೀ , ಧೈಯಶಾಲಿಯೂ ನೀ   
ನಿನ್ನ ಒಂಟಿತನವ ಹೋಗಲಾಡಿಸಲು ಮಿಡಿಯುತಿದೆ ಈ ಹೃದಯ 

ಬಯಸುತ್ತಿರುವ ಪ್ರೀತಿ, ನಿನಗೆ ದೊರಕದೆ 
ನೀ ಬಳಲುತ್ತಿರುವುದ ನಾ ಕಾಣಲಾರೆ
ಸುಮ್ಮನೆ ಕೂಡುವ ಗೆಳೆಯ ನಾನಲ್ಲೇ 
ನಿನ್ನ ಕಂಗಳಲಿ ಆನಂದ ಭಾಷ್ಪ ಕಾಣಲು ಈ ಹೃದಯ ಮಿಡಿಯುತಿದೆ.  

***ಭಾವಪ್ರಿಯ***

ಕನ್ನಡದ ಹುಡುಗಿ





ಕನ್ನಡದ ಹುಡುಗಿ ಈಗ ಬಲು ಜೋರು



ಮದುವೆಕೂ ಮುಂಚೆ ಇರಬೇಕು ಹುಡುಗನ ಬೈಕು ಕಾರು



ನಂತರ ಕೊಡಬೇಕು ಅವಳಿಗೆ ಮನೆಯ ಕಾರು ಬಾರು



ಪ್ರತಿ ವೀಕೆಂಡಿಗೂ ಕೊಡಿಸಬೇಕು ಒಡವೆಗಳು ನೂರಾರು



ಗಂಡನ ಜೇಬು ಚಿಂದಿ ಚೂರು ಚೂರು



ಆಮೇಲೆ ಅವನಿಗೆ ಗತಿಯೇ ನವ್ಯ ಬಾರು.



-ಭಾವಪ್ರಿಯ

Thursday, August 23, 2012

ಬಯಸಿದೆ  ಮನ ನಿನ್ನ....  ಸನಿಹಕೆ  ಬಾರೆ..!    

ಬಟ್ಟ ಬಯಲ ಆಗಸದಿ 
ಬೆಳ್ಳಿ ಮೋಡದಂತೆ ನಿನ್ನ ನಗು  
ಹನಿ ಹನಿ ಪೋಣಿಸಿ 
ಮಳೆಗರೆವ ನಿನ್ನ ಪ್ರೀತಿಯ ಸೊಬಗು 
ಚೆಲುವು ಸಿಹಿ ಹಂಚುತ್ತಿರುವ  ಮೆರಗು ಕಂಡು..,  ಬಯಸಿದೆ  ಮನ ನಿನ್ನ... ಸನಿಹಕೆ ಬಾರೆ 

ನಿನ್ನ ಒಲವು ಗೆಲ್ಲುವ ಪರಿ 
ನಾ ಅರಿಯದೆ ಹೋದೆ , ಸರಿ ..!
ಆದರೂ ನಿನ್ನ ಸೂಕ್ಷ್ಮ ಸನ್ನೆ ಸಾಕೆನಗೆ 
ನಿನ್ನ ಪಡಿಯದೇ ನಾ ಬದುಕಲಾರೆ 
ಹೃದಯದ ಪೇಚಾಟಕೆ  ಸುರಿ ನೀ ಅಮೃತ ಧಾರೆ .. ಬಯಸಿದೆ ಮನ ನಿನ್ನ... ಸನಿಹಕೆ ಬಾರೆ 

ಕೋಟಿ ಕೋಟಿ ಇಲ್ಲ ನನ್ನೆಡೆಗೆ 
ಆದರೂ ಕೋಟಿ ಶತಕೋಟಿ ಹರಿಸುವೆ ಒಲುಮೆ 
ಕಲ್ಲು ಮುಳ್ಳುಗಳು ಇರಲಿ ನನ್ನ ಪಾಡಿಗೆ 
ಸದಾ ಹೂ ಮಳೆಯ ಭೋರ್ಗರೆಸುವೆ ನಿನ್ನ ಹಾದಿಗೆ
ನನ್ನ ಬಾಹುಬಂಧನದೊಳು ಇರಿಸಿ  ಪ್ರೀತಿಸುವೆ .......ನಿನ್ನನ್ನೇ ಬಯಸಿದೆ ಮನ.... ಸನಿಹಕೆ ಬಾರೆ    


Thursday, July 19, 2012


ಕಣ್ಣು ಮುಚ್ಚಾಲೆ 

ಕಣ್ಣು ಕಣ್ಣಲ್ಲೇ, ಕಣ್ಣು ಮುಚ್ಚಾಲೆ 
ಕಣ್ಣ ಸನ್ನೆಯಲ್ಲೇ ಪ್ರೀತಿಯ ಓಲೆ 
ನವಿರು ಕಣ್ಣಗಳ  ಮೇಲೆ 
ಹಣೆಯ ಚುಂಬಿಸುವ ಮುಂಗುರುಳ ಮಾಲೆ
ಕೆಂಪು ತುಟಿಗಳ ಅಧರದ ಸೆಲೆ 
ಆ ಸುಳಿಗಳಲ್ಲಿ ಸಿಲುಕಿ ಜಾರಿಬಿಡಲೇ   
ತಂಪನೆಯ ಗಾಳಿಯ ಅಲೆ 
ಸೋಕಿದೆ ನಿನ್ನ ಮೃದು ಗಲ್ಲದ ಮೇಲೆ 
ಮೆಲ್ಲುಸಿರು ಗಾನಕೆ ಹಾರಿದೆ ನಿನ್ನ ಕೇಶದ ಬಲೆ 
ನಿನ್ನ ಅಂದಕೆ ಸೋಲದೆ, ನಾ ಹೇಗಿರಲಿ ಬಾಲೆ ?

Friday, July 13, 2012

ನಿನ್ನ ಗೆಜ್ಜೆ ಸದ್ದು ಕೇಳಿದಾಗಲೆಲ್ಲಾ ನಾ ಕವಿಯಾಗಬೇಕು ಅನ್ನಿಸುತ್ತದೆ 


ಆ ನಾದ ಕೇಳದೆ ಹೋದಲ್ಲಿ, ನನ್ನ ಮನಸು ಕಪಿಯಾಗುತ್ತದೆ...!
 
 ಭಾವಪ್ರಿಯ

Wednesday, July 11, 2012

ನಮ್ಮ ಕನ್ನಡದ ಬ್ಲಾಗು

ನಮ್ಮ ಕನ್ನಡದ ಬ್ಲಾಗು
ಒಂದು ಚಿಂತಕರ ಚಾವಡಿ
ಚಿಗುರು ಕನಸುಗಳಿಗೆ ಒಂದು ಮುನ್ನುಡಿ
ಅರಳುವ ಭಾವಗಳಿಗೆ ಒಂದು ಕೈಪಿಡಿ
ಮನಸಿನ ಭಾವನೆಯ ಹಂಚಿಕೊಳ್ಳಲು ದಿನಚರಿ

ನಮ್ಮ ಕನ್ನಡದ ಬ್ಲಾಗು
ನೊಂದ ಮನಸಿಗೆ ಸಾಂತ್ವನ ಹೇಳುವ ವೇದಿಕೆ
ಸೋತ ಮನಗಳಿಗೆ ಧೈರ್ಯ ತುಂಬುವ ತಾಣ
ಜಯ ಸಾಧಿಸಿದ ಹೃದಯಗಳಿಗೆ ಅಭಿನಂದಿಸುವ ವನ
ಗುರಿಯ ಮುಟ್ಟಲು ಹುರಿದುಂಬಿಸುವ ಬಣ

ನಮ್ಮ ಕನ್ನಡದ ಬ್ಲಾಗು
ನಗೆ ಹಂಚುವ ಹನಿಗವನ
ಉಲ್ಲಾಸ ನೀಡುವ ಪ್ರೀತಿಯ ಗಾನ
ಕವಿ ಕವಿಯಿತ್ರಿಯರ ಸುಮಧುರ ಪದಗಳ ನರ್ತನ
ಪ್ರೀತಿಯ ಹರಿಸುವ ಆನಂದನವನ

ಕನ್ನಡ ಬ್ಲಾಗಿನ ಹುಟ್ಟು ಹಬ್ಬದ ಪ್ರಯಯುಕ್ತ ......
ಪ್ರೀತಿಯಿಂದ ,
" ಭಾವಪ್ರಿಯ "

Monday, July 09, 2012


ಜೋಡಿ ಹಕ್ಕಿ

ಅಕ್ಕ ಪಕ್ಕದ ಮನೆಯ ಜೋಡಿ ಹಕ್ಕಿ
ಯಾರ ಹುಡುಕುವೆ ಹೆಕ್ಕಿಹೆಕ್ಕಿ
ಅತ್ತ, ಇತ್ತ , ಮೇಲೆ ಕೆಳಗೆ
 ಗೂಡಲಿ,  ಮರದಲಿ,
ಏನನ್ನು ನೋಡುತಿರುವೆ ಇಣುಕಿ ಇಣುಕಿ  ?

ಅತ್ತೆಗೊಂದು ಕಾಲ ..
ನೀನು ಅಂದು ನಗುತಿದ್ದೆ ನಿನ್ನ ವಂಚನೆ  ಸಾಧಿಸಿದಿ ಎಂದು...
ಇಂದು ನಾ ನಗುತಿರುವೆನಿನ್ನ  ವಂಚನೆಗೆ ಫಲವ ತಂದು...!

Saturday, July 07, 2012


ಅವ್ವ ನನಗ ಇಂತಹ ಹುಡುಗಿನ ಬೇಕ

ಸೀರಿ ಉಡಾಕ ಅಕೀಗ ಬರಬೇಕು
ಹಣಿಯಾಗ ಬೊಟ್ಟಿಡಬೇಕು
ತಲಿತುಂಬಾ ಹೂ ಮುಡಿದಿರಬೇಕು
ತಳಕು ಬಳುಕೋ ನಾಚುವ ಬಳ್ಳಿಯಾಗಿರಬೇಕು
ರೊಟ್ಟಿ ಮಾಡಕ ಬರಬೇಕು
ಮನೀನು ಸ್ವಚ್ಛಗ ಇಡಬೇಕು
ದೇವರ ಪೂಜೆ ಮಾಡಬೇಕು
ಗುರು ಹಿರಿಯರಲ್ಲಿ ಭಕ್ತಿ ಕೂಡ ಇರಬೇಕು
ಗಂಡನ ಮೇಲೆ ಅಭಿಮಾನವಿರಬೇಕು
ಅನುಕಾಲ ಪ್ರೀತಿ ಹರಿಸಬೇಕು
ನನ್ನ ಬಾಳ ಬೆಳಗುವ ನಂದಾದೀಪವಾಗಬೇಕು
ಅವ್ವ ನನಗ ಇಂತಹ ಹುಡುಗಿನ ಬೇಕ.

***ಭಾವಪ್ರಿಯ***

Thursday, June 07, 2012

ಮನೆ ಕಟ್ಟೋಣ ಬಾರೆ ಗೆಳತಿ 

ನಿನ್ನಯ ಆಸೆಯ ಮನೆ 
ನನ್ನಯ ಭಾವನೆಯ ಮನೆ
ನಮ್ಮಿಬ್ಬರ ಮನಸ್ಸಿನ ಮನೆ, 
ಕಟ್ಟೋಣ ಬಾರೆ ಗೆಳತಿ ..!

ನಿನ್ನ ಮಡಿಲಲ್ಲಿ ನಗುವ ಹೂಗಳ ಮನೆ 
ನನ್ನ ಒಡಲಲ್ಲಿ ಆಡುವ ಚಿನ್ನರ ಮನೆ
ನಮ್ಮ ಚಿಗುರು ಕನ್ನಸ್ಸು ಹೊತ್ತವರ ಮನೆ, 
ಕಟ್ಟೋಣ ಬಾರೆ ಗೆಳತಿ ..!

ನಿನ್ನ ಪ್ರೀತಿ ತುಂಬಿದ ಮನೆ 
ನನ್ನ ವಿಶ್ವಾಸ ಹೊತ್ತ ಮನೆ 
ನಾವಿಬ್ಬರೂ ಸಾಗಿಸುವ ಮನೆ, 
ಕಟ್ಟೋಣ ಬಾರೆ ಗೆಳತಿ ..!

***ಭಾವಪ್ರಿಯ***

Friday, June 01, 2012

ನೀ ಹಿಂಗ ದೂರಬ್ಯಾಡ  ನಂಗ 


ನೀ ಹಿಂಗ  ದೂರಬ್ಯಾಡ  ನಂಗ
ಇರ್ಲಿ ಹೆಂಗ  ನೀ ಜೊತಿ  ಇಲ್ಲದಂಗ 
ನಿನ್ನ ಬ್ಯಾಸರಕ  ನಾ ಕಾರಣ ಹೆಂಗ 
ತಿಳಿವಲ್ತು ನಿನ್ನ ರಮಿಸೋದು ಹೆಂಗ 

ನೀ ಹಿಂಗ  ದೂರಬ್ಯಾಡ ನಂಗ 
ನಿಮಿಷ ನಿಮಿಷ ಕಾಡ್ತಾವ ನಂಗ 
ನೀ ಹಿಂಗ ಮುನಿಸಿ ಕೊಂಡ್ರ
ನನ್ನ ಜೀವನ ಮುಂದ ಹೆಂಗ 

ನೀ ಹಿಂಗ  ದೂರಬ್ಯಾಡ ನಂಗ 
ನಿನ್ನ ಕಷ್ಟಕ್ಕ ನಾ ಸ್ಪಂದಿಸಲಿ ಹೆಂಗ 
ನಿನ್ನ ಪೇಚಿನ ಮುಖಕ ಚೈತನ್ಯ ತುಂಬಲಿ ಹೆಂಗ 
ನೀ ಹಿಂಗ ಮಂಕಾದರ ಇನ್ನಮುಂದ ಹೆಂಗ 

ನೀ ಹಿಂಗ  ದೂರಬ್ಯಾಡ ನಂಗ 
ನಿನ್ನ ಒಡನಾಟದಾಗ ನಾ ಎಲ್ಲಾ ಕಂಡೆ 
ನನ್ನ ದುಃಖನಾ ನಿನಗ ಹೇಳ್ಕೊಂಡೇ 
ಒಮ್ಮಿಂದೊಮ್ಮೆಲೆ ಹಿಂಗ್ಯಾಕ ಶೆಟ್ತ್ಗೊಂಡಿ 

ನೀ ಹಿಂಗ  ದೂರಬ್ಯಾಡ ನಂಗ 
ನಿನ್ನ ದುಃಖದಾಗ ಖುಷಿ ಕಾಣೋ ಭಂಡ ನಾನಲ್ಲ 
ನಿನ್ನ ಮನಸ ನೋಯಿಸಾಕ ನಾ ಎಂದೂ ಬಯಸಂಗಿಲ್ಲ 
ತಿಳಿದನ ನಾ ತಪ್ಪು ಮಾಡಿನಿ , ನೀ ಕೊಟ್ಟ ಒಂದ ಕಪಾಳಕ ಸಿಟ್ಟು ತೀರಿಸಿಕೊಳ್ಳ

ನೀ ಹಿಂಗ  ದೂರಬ್ಯಾಡ ನಂಗ 
ನೀ  ಕಳಕೊಂಡ್ರ  ನನ್ನ ಮ್ಯಾಗ  ನಂಬಿಕಿ 
ಮುಖಾ ತೋರಿಸದ ಹಂಗ 
ದೂರ ಮರೆಯಾಗ್ತಿನಿ ಕಣ್ಣ್ಮುಚ್ಚಿ 

***ಭಾವಪ್ರಿಯ*** 



Tuesday, May 22, 2012

ಮುಕ್ತಿ

ಹೆಣೆಯ ಮೇಲೆ ಮೂರು ರೇಖೆ
ಬರಹವನ್ನೇ ಬದಲಾಯಿಸಲಿಲ್ಲ ಏಕೆ ?
ಶಿವ ವಿಭೂತಿ ಬರೆದಹಾಗೆ
ನನ್ನ ಪೂಜೆ ಫಲಿಸದೇಕೆ ?
ಹೊಸ ಜೀವನ ಕಾಣುವ ಬಯಕೆ
ಕನಸುಗಳು ಪೂರ್ಣಗೊಳ್ಳದೇಕೆ  ?
ಕಲ್ಲು ಮುಳ್ಳುಗಳ ಕೂಡಿರುವ  ದಾರಿಗೆ
ಕೊನೆಯೇ ಕಾಣುತ್ತಿಲ್ಲ ಇನ್ನೂ ಏಕೆ ?
ಹೊರಟೆ.., ಗಂಟು  ಮೂಟೆಯ ಕಟ್ಟಿ
ಕೈ ಬಿಸಿ ಕರೆವ ಯಮ ಪಾಶಕೆ ..
ಮುಕ್ತಿಸಿಗಲಿ ಎನಗೆ ದೇವಾ.. ನಿನ್ನ ಸನಿಧಿಯೊಳಗೆ..!
 

ನೆನಪು



ಗೆದ್ದ ಸಂತೋಷವ ಹಂಚಿಕೊಂಡ ಸಿಹಿ ನೆನಪು

ಕಳೆದುಕೊಂಡ ವಸ್ತು ನೆನಪಿಗೆ ಬಾರದ ನೆನಪು

ಅವಿಸ್ಮರಣೀಯ ಕ್ಷಣ ಮರುಕಳಿಸಿದ ನೆನಪು

ವಿಷಾದಕರ ಸಂಗತಿ ಕೊಟ್ಟ ಕಹಿ ನೆನಪು

ನವ ಜೀವವು ಬಾಳಲ್ಲಿ ಕಾಲಿಟ್ಟ ದಿನದ ನೆನಪು

ಅಗಲಿದವರ ನೆನೆದು ಅತ್ತಂತ ನೆನಪು

ಜೀವನವೇ ಹೀಗೆ ನೆನಪುಗಳ ಸಾಗರ

ಸಿಹಿ ಕಹಿ ಏರು ಇಳಿತಗಳ ಸಪ್ತಸಾಗರ



ಭಾವಪ್ರಿಯ

Friday, May 18, 2012

आपको देखते ही अर्मान जागता है


आपका ख्याल आतेही दिल झूमता है

हर वक़्त, बे वक़्त आप ऐसे मंडराते है

हर घडी आपके सात रहने का दिल करता है

हो ना हो हम आपको चाहने लगे है

... क्यूंकि.. हर पल हर जगह हम आपको ही देखते है



                                                                                    -भावप्रिय

Thursday, May 17, 2012

ನಲ್ಲೆ :


ಕುಸುಮದೊಳಗಿನ ಮಂಜಿನ ಹನಿಯಂತೆ
ಹುಣ್ಣಿಮೆ ಸೊಬಗ ಸವಿಯುವ ಕವಿಯಂತೆ
ಪ್ರೇಮಿಗಳ ಕಣ್ಣ ಸನ್ನೆಯಂತೆ
ಸದಾ ನಗುತಿರು ನಿನ್ನ ನಗುವಿನುಸಿರಲಿ ನನ್ನ ಹೆಸರು ಬರೆದು...


ನಲ್ಲ :

ನಾ ಕುಸುಮವಾದರೆ ನೀನೆ ನನ್ನ ಮಂಜಿನ ಹನಿ
ಹುಣ್ಣಿಮೆಗೆ ಸೊಬಗು ನೀಡುವ ಚಂದಿರನು ನೀ
ನಿನ್ನ ನಗುವಲ್ಲೇ ನನ್ನ ನಗು ಕಾಣುವೆ
ಉಸಿರು ಉಸಿರಲ್ಲಿ ಬೆರೆತು ಬಿಡು ನೀ ....!

Tuesday, May 15, 2012

ನಮ್ಮ ಕಾರುಗಳು ....!!!

ಬೀಟ್ ಚೊಲೋ ಐತಿ ನೋಡಾಕ,
ಜಾಗ ಬಹಳ ಇಲ್ಲ ಕೂಡಾಕ.!
ಸ್ಪಾರ್ಕ್ ಬೀದಿಗೆ ಬಂದರೆ,
ಅನ್ಯರಿಗೆ ಬಹಳ ತೊಂದರೆ.!
ತವೇರನಮ್ಮ ಚಿಲುಮೆ,
ಬೃಹತ್ ಸಂಸ್ಥೆಗಳಿಗೆ ಇದರ ಮೇಲೆ ಒಲುಮೆ.!
ಆಪ್ಟ್ರಾ ನಮ್ಮ ವಿಶಾಲ ವಾಹನ ,
ಬಾಳಲ್ಲಿ ತರುವುದು ವಿಲಾಸಿ ಜೀವನ .!
ಕ್ಯಾಪ್ಟಿವ ಬಲು ಜೋರು,
ಇದು ಬರಿ ದೊಡ್ಡವರ ಕಾರು !
ಕ್ರುಜು ಕಂಡರೆ ಜನರು ಎನುತಿಹರು,
ಅಲ್ಲಿ ನೋಡು... ರಾಜ ಬರುತಿಹರು.!

कडुवा सच्च...!!!


सच्च केहेने वालों को लोग मानते नहीं
सच्चाई की रास्ते में कबी फूल खिलते नहीं
दर्द भरी सच्चाई में कोई जीना चाहता नहीं
झूठे लोगों की ही दरबार है हर जगह
बेईमानी की हर जगह कदर
जूट की साम्राज्य में सत्य का निर्नाम
कहाँ गया वो गांधीजी का आदर्ष
सज्जन लोग कर रहें संघर्ष
कब होगा इन जैसे लोगों का नाश
कब मिलेगा इंसानियत को आस ..!

ಅವಳ ಕೂಗು

ತಂದೆ ತಾಯಿರ ಮನೆಯ ತೊರೆದು
ಅಣ್ಣ ತಂಗಿಯ ಸ್ನೇಹ ಮರೆತು
ನಂಬಿ ನಿನ್ನಂಗಳಕೆ ಬಂದಿಹಳು
ತನ್ನ ಪ್ರೀತಿ ಎಲ್ಲಾ ನಿನಗೆರೆದು
ನಿನ್ನ ಕೊಂಚ ವಾತ್ಸಲ್ಯವ ಬಯಸಿಹಳು
ಏಕೆ ತಿಳಿಯದಾಗಿದೆ ನಿನಗೆ .., ಅವಳ ಕೂಗು ?

ನಗುವುದ ಮರೆತಿಹಳು
ಮೊಗವು ಇಳಿದಾಗಿ ಚಿಂತೆಯಲೇ ಮುಳುಗಿಹಳು
ಬಾಳುವ ಆಸೆ ನುಚ್ಚುನೂರಾಗಲು
ಏಕೆ ಆಲಿಸದೆ ಹೋದೆ ನೀ ಅವಳ ಒಳ ದನಿಯ
ಮರಳಿಸು ಅವಳ ಮುಗುಳು ನಗೆಯ..
ಏಕೆ ತಿಳಿಯದಾಗಿದೆ ನಿನಗೆ .., ಅವಳ ಕೂಗು ?

ನಿರ್ಲಕ್ಷಿಸುವುದು ತರವಲ್ಲ ನಿನಗೆ
ಆ ಜೀವವು ಇಲ್ಲವಾದರೆ ನಿನ್ನೊಂದಿಗೆ
ಅವಳ ಕೊರೆತೆಯು ಕಾಡುವುದು ಎಂದೆಂದಿಗೂ
ಬಾಳು ಹಸಿರಾಗುವ ಆಲೋಚನೆಯ ಬೆಳಸಿಕೊ
ಸಮಯ ಮೀರುವ ಮುನ್ನ ಎಚ್ಚೆದ್ದುಕೋ
ಇನ್ನಾದರೂ ಅರೆತು ಬಿಡು ನೀ...ಅವಳ ಕೂಗು ..!

-ಭಾವಪ್ರಿಯ

Friday, March 02, 2012

ಕೈ ರೇಖೆಗಳು ಹೇಳುವುದು ನಿಜವೇ ?



ಐಶ್ವರ್ಯಕ್ಕೆ ಒಂದು ರೇಖೆ,
ಆಯಸ್ಸಿಗೊಂದು ರೇಖೆ,
ಮದುವೆಯ ಜೀವನಕ್ಕೆ ಒಂದು ರೇಖೆ,
ಮಕ್ಕಳ ಸೂಚಿಸುವುದೊಂದು ರೇಖೆ,
ರೇಖೆಗಳು ಕೂಡಿರದಿದ್ದರೆ ಗಂಡಾಂತರವೇಕೆ ?
ರೇಖೆಗಳೇ ಇರದವರಿಗೆ ಭವಿಷ್ಯವೇ ಇಲ್ಲವೇ ?
ಕಷ್ಟಗಳು ಬಂದಾಗ ಅನ್ನುವುದು, ಅಯ್ಯೋ ನನ್ನ ಹಣೆಬಾರವೇ..
ದೇವರು ಬರೆದಿರುವುದು ಹಣೆಯ ಬರಹ..
ಕೈಯ್ಯ ರೇಖೆಗಳೂ ...ಇಲ್ಲ ಹಣೆ ಬರಹವೂ
ಹೇಗೆ ನಂಬುವುದು... ಇವೆಲ್ಲಾ ನಿಜವೇ..?

***ಭಾವಪ್ರಿಯ***

Wednesday, February 29, 2012

ಕಟುಕಿ



ನಿನ್ನ ಬಿಟ್ಟು ಬದುಕಲಾರೆ ಎನ್ನುತ್ತಿದ್ದಳು ಅಂದು ,......

ಅವನ ಜೊತೆ ಬದುಕಬಲ್ಲೆ ಎನ್ನುತ್ತಿವಳು ಇಂದು , ನಿನ್ನ ಕೊಂದು ..!

---ಭಾವಪ್ರಿಯ---

ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!



ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!

ನೀ ಮುಗಿಲಾಚೆಯ ನೀಲಿ ಬಾನು 
ಪ್ರೀತಿ ತುಂಬಿದ ಕಡಲು ನಾನು 
ಕಡಲು ನಿರೀರಬಹುದು ಲವಣ
ಸಿಹಿಗೆ ತಿರುಗಿಸಬಲ್ಲದು ನನ್ನ ಪ್ರೀತಿಯ ತಾಣ    
ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!

ನನ್ನಯ ಹೃದಯವಿದು ಚೆಲುವು ಬೃಂದಾವನ
ಮೆಲ್ಲಗೆ ಕುಳಿತು ಸವಿಬಾರೆ ಹಕ್ಕಿಗಳ ಸವಿಗಾನ
ತರ ತರ ಅರಳಿದೆ ಹೂವಿನ ವರ್ಣ
ಸುಗಂಧವು ಉಣಿಸಿದೆ ಒಲವಿನ ಚರಣ
ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!

ಕವಿ ಮನಸು ನನ್ನದು ಚಿರನೂತನ
ನಿನ್ನ ಪ್ರತಿ ಒಂದು ಭಾವವು  ನನಗೆ ಪ್ರೇರಣ
ಮಲ್ಲಿಗೆ ಮನದಲ್ಲಿ  ಇಡು  ಪಾದಾರ್ಪಣ
ನಾ ಸದಾ ಬಡಿಸುವೆ ಪ್ರೀತಿಯ ಔತಣ
ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!

***ಭಾವಪ್ರಿಯ ***

Tuesday, February 28, 2012

ಜಿನುಗುತಿವೆ ಕಣ್ಣ ಹನಿಗಳು .!



ಗೆಳತಿಯೊಡನೆ ಹಂಚಿಕೊಂಡ ನೆನಪು
ನಕ್ಕು ನಲಿದ ಕ್ಷಣವ ನೆನೆದು
ಮರುಕಳಿಸಿದೆ ನಲಿವಿನ ಕಂಪು
ಮತ್ತೆ.., ಮತ್ತೆ .. ನೆನೆ ನೆನೆದು ಜಿನುಗುತಿವೆ ಕಣ್ಣ ಹನಿಗಳು ..!

ನಿದ್ದ್ರೆಯಲಿ ಕಂಡ ಕೆಟ್ಟ ಕನಸಿಗೆ ಬೆಚ್ಚಿ ಬಿದ್ದು
ನಡು ರಾತ್ರಿಯಲಿ ಬಿಕ್ಕಿ ಬಿಕ್ಕಿ ಅತ್ತಿದ್ದು
ಎದೆಗೊರಗಿಸಿ ಮಗುವಂತೆ ರಮಿಸಿದ್ದು
ಮತ್ತೆ.., ಮತ್ತೆ .. ನೆನೆ ನೆನೆದು ಜಿನುಗುತಿವೆ ಕಣ್ಣ ಹನಿಗಳು ..!

ಚಳಿಗೆ ನಿ ನಡುಗುತ್ತ ನಿಂತಾಗ
ಹೊದೆಸಿದ್ದೆ ನಿನಗೆ, ನನ್ನ ಬಾಹುಗಳ ಕಂಬಳಿ
ಎದೆಗೊತ್ತಿದ ನಿನ್ನ ಕಿವಿ ಜುಮಕಿ
ಮತ್ತೆ, ಚುಚ್ಚಿ ಚುಚ್ಚಿ...ಜಿನುಗಿಸಿವೆ ಕಣ್ಣ ಹನಿಗಳು ..!

ಮರೆತೇ ಹೋಗಿರುವೆ ನೀನು...
ಹಿಂತಿರುಗಿ ಬಾರದ ಊರಿಗೆ ನಿ ಹೋದರೂ
ನಿ ಬರುವದಿಲ್ಲ ಎಂಬ ಸತ್ಯವ ತಿಳಿದರೂ
ಆವಿ ಗೊಳ್ಳದೇ.. ಮತ್ತೆ.. ಮತ್ತೆ., ಜಿನುಗುತಿವೆ ಕಣ್ಣ ಹನಿಗಳು ..!

Friday, February 24, 2012

ಕನಸುಗಳ ಕಾರುಬಾರು

ಯಾಕೋ ಇಂದಿಂದು ಕನಸುಗಳದೇ ಕಾರುಬಾರು
ಇರುಳ ತೋಳಲಿ ನಿದ್ದ್ರೆಗೆ ಜಾರುತಲಿ
ಲಗ್ಗೆ ಇಡುವವು ಮುಖಗಳು ಸಾವಿರಾರು ..

ಮುಖ ಪರಿಚಯವೇ ಇಲ್ಲದ ಮುಖಗಳು
ನಸು ನಕ್ಕು ಶೂನ್ಯದಡೆಗೆ ಜಾರಿದರು
ತಿರುಗಿ ನೋಡಿದೊಡನೆ ಅಲ್ಯಾರೂ ಇಹರು

ಕೆಲವು ಕೋಪಗೊಂಡ, ಭೀತಿಗೊಳಿಸುವ ಮುಖಗಳು
ಯಾರದೋ ಮೇಲಿನ ಸಿಟ್ಟಿಗೆ ನನ್ನ ದುರುಗುಟ್ಟುತ್ತಿದ್ದರು
ಭಯದ ಛಾಪು ಮೂಡಿಸಿ, ಕತ್ತಲೆಯ ಬಾವಿಗೆ ದೂಡಿದರು

ಇನ್ನು ಪಾಪ ಮುಘ್ಧ ಮುಖಗಳು
ತಮ್ಮ ಅಗಲಿದ ಆತ್ಮಿಯರ ಹುಡುಕುತ್ತಿದ್ದರು
ಅವರಿವರ ಬಳಿ ತೆರಳಿ ಪರಿಚಯ ಕೇಳುತ್ತಿದ್ದರು

ಇನ್ನು ರೋಧಿಸುತ್ತಿದ್ದ , ಅಳು ಮುಖಗಳು
ವಿಧಿಯ ಆಟಕೆ ಕಂಗೆಟ್ಟ ಮೂಕರು
ಮರಳಿ ಬಾರದ ಜೀವಗಳಿಗೆ ತಪಿಸುತ್ತಿದ್ದರು

ಯಾಕೋ ಇಂದಿಂದು ಇಂತಹ ಕನಸುಗಳದೇ ಕಾರುಬಾರು
ಇರುಳು ಕಳೆದು ಬೆಳಗಿನ ಮುಂಜಾವಲಿ
ಮರೆಯಾಗುವವು.. ಅವೇ ಮುಖಗಳು ಸಾವಿರಾರು ..!!

चाहने का अंदाज़

प्यार करने का अपना अलग्सा अंदाज़ है..
अपने मन को.., उनके मनको  डोर से बांदते है ..
अपने छाया में हम उन्हें पाते है..
हो ना हो ओ भी हमें इतनाही चाहती होगी...
लेकिन हम उसका जवाब का इंतज़ार ना करते हुवे...
उनको चाहनेकी पल पल में अपनी ख़ुशी पाते है..! 

ಮಾರಕ ನೆನಪುಗಳು

ನೆನಪುಗಳು ನೆನಪಿಗೆ ಬರಲು 
ನೆನೆದು ನೆನೆದು ಖುಷಿ ಪಡುವುದೋ.., ಇಲ್ಲ ದುಃಖಿಸುವುದೋ ?
ಸವಿ ಕ್ಷಣಗಳು  ಸಿಹಿ ಹಂಚಿದರೆ.. ಕಹಿ ನೆನಪುಗಳು ಕುಕ್ಕಿ ತಿಂದಿವೆ
ಅರಗಿಣಿ ಎಂದು ಪ್ರೀತಿಸಿದ ಕಾರಣಕೆ ರಣ ಹದ್ದಾಗಿ ಕಿರು-ಕಿರುಚಿ ಹರಿದಿದೆ  
ಸಂತಸದ  ಸಾಗರದಿ ತೇಲಿದೆ ಎಂತ್ತಿದ್ದೆ..,ಆದರೆ ಸುಳಿ ಅದು ನನ್ನ ಸೆಳೆದು ಮುಳುಗಿಸಿ ಕೊಂದಿಹುದು  
ನೆನಪುಗಳ ದಿಕ್ಕರಿಸಿ ನಡೆಯಲೇ... ಜೀವವ ತ್ಯಜಿಸಿ ಮಣ್ಣಾಗಲೇ 
ಮಾರಕ ನೆನಪುಗಳು ಮನ ಕೊಂದಾಗ ..ಜಿವಿಸಲಿ  ಹೇಗೆ ? 

ಮನವ ತೊಳೆಯಿರಿ

ಮನವ ತೊಳೆಯಿರಿ ಓ ಮಾನವರೇ ,
ಕೆಟ್ಟ ಚಟಗಳ ಪ್ರೇರೇಪಿಸುವ ಮನವ,
ದುಷ್ಟ ಕೆಲಸಕ್ಕೆ ಕೈ ಹಾಕುವ ಮನವ,
... ಮಾನವನ ವ್ಯಕ್ತಿತ್ವ ಹಾಳು ಮಾಡುವ... ಮನ ತೊಳೆಯಿರಿ..!

ಮನವ ತೊಳೆಯಿರಿ ಓ ಮಾನವರೇ ,
ಅನ್ನ್ಯರನ್ನು ದೂಷಿಸುವ ಮನವ,
ಪರ ಜನರ ಅಳಿವು ಬಯಸುವ ಮನವ,
ಅನ್ಯರ ಕಷ್ಟಗಳಲ್ಲಿ ತೃಪ್ತಿ ಕಾಣುವ .... ಮನ ತೊಳೆಯಿರಿ..!

ಮನವ ತೊಳೆಯಿರಿ ಓ ಮಾನವರೇ ,
ಶ್ರೀಹರಿಯ ಜಪಿಸದ ಮನವ
ದೇವನೋಲುಮೆಯ ಕೊಂಡಾಡದ ಮನವ
ಜಗತ್ತ ಸೃಷ್ಟಿಯ ಮಾಯವ ಅರಿಯದ ....ಮನ ತೊಳೆಯಿರಿ..!

ಮನವ ತೊಳೆಯಿರಿ ಓ ಮಾನವರೇ ,
ಕಲಿಯುಗದ ಕಾಲ ಮುಗಿಯುವ ಮುನ್ನ,
ಮಾನವನ ಹುಟ್ಟು ಅಡಗುವ ಮುನ್ನ,
ಪ್ರಕೃತಿ ವಿಕೊಪಕೆ ತೆರಳುವ ಮುನ್ನ ....ಮನ ತೊಳೆಯಿರಿ..!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...