
ಗೆಳತಿಯೊಡನೆ ಹಂಚಿಕೊಂಡ ನೆನಪು
ನಕ್ಕು ನಲಿದ ಕ್ಷಣವ ನೆನೆದು
ಮರುಕಳಿಸಿದೆ ನಲಿವಿನ ಕಂಪು
ಮತ್ತೆ.., ಮತ್ತೆ .. ನೆನೆ ನೆನೆದು ಜಿನುಗುತಿವೆ ಕಣ್ಣ ಹನಿಗಳು ..!
ನಿದ್ದ್ರೆಯಲಿ ಕಂಡ ಕೆಟ್ಟ ಕನಸಿಗೆ ಬೆಚ್ಚಿ ಬಿದ್ದು
ನಡು ರಾತ್ರಿಯಲಿ ಬಿಕ್ಕಿ ಬಿಕ್ಕಿ ಅತ್ತಿದ್ದು
ಎದೆಗೊರಗಿಸಿ ಮಗುವಂತೆ ರಮಿಸಿದ್ದು
ಮತ್ತೆ.., ಮತ್ತೆ .. ನೆನೆ ನೆನೆದು ಜಿನುಗುತಿವೆ ಕಣ್ಣ ಹನಿಗಳು ..!
ಚಳಿಗೆ ನಿ ನಡುಗುತ್ತ ನಿಂತಾಗ
ಹೊದೆಸಿದ್ದೆ ನಿನಗೆ, ನನ್ನ ಬಾಹುಗಳ ಕಂಬಳಿ
ಎದೆಗೊತ್ತಿದ ನಿನ್ನ ಕಿವಿ ಜುಮಕಿ
ಮತ್ತೆ, ಚುಚ್ಚಿ ಚುಚ್ಚಿ...ಜಿನುಗಿಸಿವೆ ಕಣ್ಣ ಹನಿಗಳು ..!
ಮರೆತೇ ಹೋಗಿರುವೆ ನೀನು...
ಹಿಂತಿರುಗಿ ಬಾರದ ಊರಿಗೆ ನಿ ಹೋದರೂ
ನಿ ಬರುವದಿಲ್ಲ ಎಂಬ ಸತ್ಯವ ತಿಳಿದರೂ
ಆವಿ ಗೊಳ್ಳದೇ.. ಮತ್ತೆ.. ಮತ್ತೆ., ಜಿನುಗುತಿವೆ ಕಣ್ಣ ಹನಿಗಳು ..!
No comments:
Post a Comment