Thursday, February 21, 2013

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 4


ಇಂದಿನ ಮುಂದುವರೆದ ಭಾಗ ಶುರು ಮಾಡುವ ಮುನ್ನ ಒಂದು ಸಂತಸದ ಸುದ್ದಿ ಮುಂದಿಡಲು ಇಚ್ಚಿಸುತ್ತೇನೆ , ಇಂದಿಗೆ ನನ್ನ ಬ್ಲಾಗ್ ಓದುಗರ ಸಂಖೆ ೯೦೦೦ ದಾಟಿದೆ , ಈ ಸಂದರ್ಭದಲ್ಲಿ ಎಲ್ಲರಿಗೂ ಹೃತ್ ಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತೇನೆ.
ಈಗ ಮುಂದೆ ಓದಿಕೊಳ್ಖಿ...........ವಿಜಯನ ಮದುವೆ ಪುರಾಣ ....)

ನಮ್ಮ ಕಡೆಯಲ್ಲಾ ಹುಡುಗಿಯ ಮನೆಕಡೆ ಎಷ್ಠೇ ಕಷ್ಟವಿದ್ದರು ಕನ್ಯೆಯ ಮನೆವರೆ ಮದುವೆ ಮಾಡಿಕೊಡುವುದು ಸಂಪ್ರದಾಯ. ಆದರೆ ಇಲ್ಲಿ ನಡೆದದ್ದೆ ಬೇರೆ , ಸೊಗಿನ ಬಿಣ್ಣಾಣ್ಗಿತ್ತಿ ಕನ್ಯೆಯ ತಾಯಿ ನಾಟಕ ಪ್ರವೀಣೆ. ಇವಳ ಬಗ್ಗೆ ಸ್ವಲ್ಪ ಹೇಳೆಲೇ ಬೇಕಾದ ಅಂಶಗಳಿವೆ ಏಕೆಂದರೆ ಈ ಮದುವೆ ಎಂಬ ನಾಟಕಕ್ಕೆ ಇವಳೇ ಸುತ್ರದಾರಳು. ಇವಳ ಲಗ್ನವು ಒಬ್ಬ ಸರ್ಕಾರಿ ನೌಕರನ ಜೊತೆ ಆಗಿರುತ್ತೆ. ಪಾಪ ಅವ(ಹುಡುಗಿಯ ತಂದೆ) ಒಳ್ಳೆಯವನೆ. ಸೌಮ್ಯ ಸ್ವಭಾವ,ನೀತಿ,ನೀಯಮ ಸರಳತೆಯಲ್ಲೇ ಬೆಳೆದ ವ್ಯಕ್ತಿ. ಅವನ ವಿನಯತೆಯನ್ನು ಎಲ್ಲರೂ ಮೆಚ್ಚುತ್ತಿದ್ದರು. ಸುಪುತ್ರರಿರದ ಇವರ ಮನೆಯಲ್ಲಿ ಇವರಿಗೆ ಬರಿ ಕನ್ಯಾಮಣಿಗಳು. ಪಾಪ ತಂದೆ ಹೃದಯಾಘಾತದಿಂದ ತೀರಿಕೊಂಡರು. ಆಗ ಆ ಮನೆಯಲ್ಲಿ ಗಂಡು ಮಕ್ಕಳ ಆಸರೆಯೇ ಇಲ್ಲಾ. ಅಲ್ಲಿಗೆ ಹುಡುಗಿಯ ತಾಯಿದೇ ದರ್ಬಾರು.ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಹೇಗೆ ಇರಬೇಕು ಹೇಗೆ ನಡೆದು ಕೊಳ್ಳಬೇಕು ಅನ್ನುವ ಸಾಮಾನ್ಯ ಶಿಸ್ತನ್ನು ಕೂಡ ಅವಳು ಹೇಳಿಕೊಡಲಿಲ್ಲ. ಎಲ್ಲರೂ ತಮ್ಮ ಇಷ್ಟಕ್ಕೆ ಬಂದ ಹಾಗೆ ಬೆಳೆದು ಬಿಟ್ಟರು. ಗಂಡು ಇರದ ಮನೆಗಳ ಕಥೆನೇ ಇಷ್ಟೇ ಇರಬೇಕು ಬಿಡಿ..! ಸರಿ ಪಾಪ ನಮ್ಮ ವಿಜಯನ ಮದುವೆ ಪುರಣಕ್ಕೆ ಬರೊಣ. ವಿಜಯ ಹುಡುಗಿಯನ್ನು ನೋಡಿದ ಹಾಗೆಯೇ ಅವಳು ಕೂಡಾ ನೋಡಿದಳು. ವಿಜಯನ ತಂದೆ ತಾಯಿಗಳು ತಮ್ಮ ಒಪ್ಪಿಗೆ ಸೂಚಿಸಿ ಮುಂದಿನ ಕಾರ್ಯಕ್ರಮಕ್ಕೆ ಅಣಿಯಾಗುವಂತೆ ಸೂಚಿಸಿದರು. ಮದುವೆಯ ವಿಷಯ ಬರುತ್ತಿದ್ದಂತೆಯೆ ಜಿದ್ದಿಬಾಯಿ ( ಹುಡುಗಿಯ ತಾಯಿ ) ಅಯ್ಯೊ ಅಣ್ಣಾರ ನಮಗ ಮದುವಿ ಮಾಡಿಕೊಡಲಿಕ್ಕೆ ಆಗೋದಿಲ್ಲಾ, ನಾನು ಗಂಡ ಸತ್ತ ಮುಂಡೆ ಅಂತೆಲ್ಲಾ ಕಥೆ ಹೇಳಿ. ಮದುವೆ ನೀವೇ ಮಾಡಿಕೊಳ್ಳಿ ಅಂತ ಹೇಳುತ್ತಾಳೆ. ಬೆಂಗಳೂರಿನಲ್ಲಿ ಒಂದು ಸೀದಾ ಸಾದಾ ಮದುವೆ ಮಾಡಲು ಕಮ್ಮಿ ಕಮ್ಮಿ ಎಂದರೂ ೩ ಲಕ್ಷ ರೂ ಕಿಂತ ಕಮ್ಮಿಯಲ್ಲಿ ಮಾಡಲು ಸಾಧ್ಯವಿಲ್ಲ ಅನ್ನುವುದು ನೀವು ಓದುಗರಿಗೆ ತಿಳಿದೇ ಇರುವ ವಿಷಯ ಅಲ್ಲವೇ ..! ಅಂತಹುದರಲ್ಲಿ ೨೫ ಸಾವಿರ ರೂ ಗಳು ಕೊಡುತ್ತೆವೆ, ಮದುವೆ ನೀವೆ ಮಾಡಿಕೊಂಡು ಬಿಡಿ ಎಂದು ಬಿಟ್ಟಳು.ಇದರಿಂದ ಬೆಸರಗೊಂಡ ವಿಜಯನ ತಂದೆ, ನೀವೂ ಏನನ್ನೂ ಕೊಡುವುದು ಬೇಡ ಅಂತ ಹೇಳಿ ಸುಮ್ಮನಾಗುತ್ತಾರೆ. ಹಾಗೆಯೆ ವಿಜಯನ ಕುರಿತು ಹುಡುಗಿಯ ತಾಯಿ ಜಿದ್ದಮ್ಮ ಈ ತರಹ ಹೇಳಿದಳು, ನೀನು ಕೂಡಾ ಏನು ಅಪೇಕ್ಷಿಸಬೇಡಪಾ ಅಂತಾ ಹೇಳುತ್ತಾರೆ. ಅಪ್ಪ ಅಮ್ಮಂದಿರ ಮಾತು ತಪ್ಪದ ವಿಜಯ ಏನು ತಾನೆ ಹೇಳ್ಯಾನು ? ಅವ್ನು ಸುಮ್ಮನಾಗಿ ಬಿಟ್ಟ. ಜೀವನ ನಡೆಸುವ ತೊಳಿನ ಬಲ ಅವನಲ್ಲಿದೆ.., ಹುಡುಗಿಯ ಮನೆಯ ಯಾವ ಹಂಗು ನನಗೆ ಬೇಕಿಲ್ಲಾ ಅಂದು ಕೊಂಡು ಒಪ್ಪಿಕೊಳ್ಳುತ್ತಾನೆ. ಸರಿ ವಿಜಯನ ತಂದೆ ಮಗನ ಮದುವೆಯ ಬಗ್ಗೆ ತುಂಬಾ ಕನಸ್ಸುಗಳು ಇಟ್ಟುಕೊಂಡಿದ್ದರು ಹಾಗೆಯೇ ಸಾಲಾ ಸೊಲಾ ಮಾಡಿ ಅಚ್ಚುಕಟ್ಟಾದ ಒಂದು ಕಲ್ಯಾಣ ಮಂಟಪವ ನೋಡಿ ಮದುವೆಯ ತಯ್ಯಾರಿಯಲ್ಲಿ ತಲ್ಲೀನರಾಗುತ್ತಾರೆ. ಲಗ್ನ ಪತ್ರಗಳು ಮುದ್ರಣಗೊಳ್ಳುತ್ತವೆ. ಮೊದಲನೇಯ ಲಗ್ನ ಪತ್ರ ಹುಡುಗಿಯ ಮನೆಗೆ ಕೊಟ್ಟು ಬರಲು ವಿಜಯನ ತಂದೆ ಸಜ್ಜಾಗುತ್ತಾರೆ. ಮನೆ ತಲುಪಿ ಪತ್ರ ಕೊಟ್ಟು ಇನ್ನೇನು ಹೊರಡಬೇಕಾದಾಗ ಜಿದ್ದಿಬಾಯಿ ವಿಜಯನ ತಂದೆಯನ್ನು ಕುರಿತು, ತಮಗೆ ಒಂದು ವಿಷಯ ಹೇಳಬೇಕಿತ್ತು ಹೇಗೆ ಹೇಳಬೇಕೊ ತಿಳಿಯುತ್ತಿಲ್ಲ ಅನ್ನುತ್ತಾ , ನನ್ನ ಮಗಳ ವಿದ್ಯಾಭಾಸಕ್ಕೆ ೨.೫೦ ಲಕ್ಷ ಹಣ್ವನ್ನು ಸಾಲವಾಗಿ ಪಡೆದಿದ್ದೇವೆ ಅದನ್ನ ಅವಳೆ ತೀರಿಸುತ್ತಾಳೆ ಎಂದು ಹೇಳಿದಳು. ಓದುಗರೇ ಯೋಚಿಸಿ ಈ ಜಿದ್ದಿಬಾಯಿ ಹೇಗಿರಬಹುದು ಎಂದು...? ಇಂತಹ ಮಹತ್ತರದ ವಿಷಯವನ್ನು ಇವಳು ಮದುವೆಯ ಲಗ್ನ ಪತ್ರಿಕೆ ಕೊಡಲು ಹೋದ ಸಮಯದಲ್ಲಿ ತಿಳಿಸುತ್ತಾಳೆ. ಹಾ...ಇನ್ನೊಂದು ವಿಚಾರವಿದೆ ನಮ್ಮ ಕಡೆ ಬಳುವಳಿ ಸಾಮಾನು ಕೊಡುವ ಪದ್ದಥಿ ಕೂಡಾ ಇಲ್ಲಾ ಅಂತಾನೂ ಹೇಳುತ್ತಾಳೆ. ನಾ ಹಿಂದೆ ವಿವರಿಸಿದ ಹಾಗೆ ಈ ಹೆಂಗಸಿನ ಸ್ವಭಾವ ಹಾಗು ಒಂಚನೆಯ ಬುದ್ದಿ ತಿಳಿದಿರಬೇಕಲ್ಲವೆ..? ಇದನ್ನು ಕೇಳುತ್ತಲೆ ವಿಜಯನ ತಂದೆಗೆ ತುಂಬಾನೆ ಆಘಾತ ಹಾಗು ಬೇಸರವಾಗುತ್ತದೆ. ಈಗ ಏನು ಮಾಡುವುದು ? ಎಂದು ತಿಳಿಯಾಲಾರದೇ ದಿಗ್ ಬ್ರಾಂತರಾಗುತ್ತಾರೆ. ಮದುವೆಯ ಪತ್ರಿಕೆ ಮುದ್ರಣಗೊಂಡಿವೆ, ಬಹಳಷ್ಟು ಸಂಬಂಧಿಕರಿಗೂ ವಿಷಯ ತಿಳಿಸಿದ್ದೆವೆ ಇನ್ನು ಮುರುಗಡೆ ಮಾಡಿಕೊಂಡರೆ ನಮ್ಮ ಮರ್ಯಾದಿ ಏನಾಗಬೇಕು ಎಂದುಕೊಂಡು ಚಿಂತೆಗೆ ಜಾರುತ್ತಾರೆ. ಮನೆ ಮಂದಿ ಎಲ್ಲಾ ಕೂತು ಚಿಚಾರ ಮಾಡಿ. ದೇವರು ನಮ್ಮನ್ನ ಚೆನ್ನಾಗಿ ಇಟ್ಟಿದ್ದಾನೆ, ನಮ್ಮಿಂದ ಒಂದು ಒಳ್ಳೆಯ ಕಾರ್ಯವಾಗಬೇಕಿದೆ, ಅದರಲ್ಲೂ ಒಬ್ಬ ತಂದೆ ಇರದ ಮಗಳಿಗೆ ಮದುವೆಯ ಭಾಗ್ಯ,ಗಂಡನ ಆಸರೆ ನೀಡಿದ ಪುಣ್ಯಾ ಬರುವುದು ಅಂದುಕೊಳ್ಳುತ್ತಾ ಎಲ್ಲಾ ಚಿಂತೆಯನ್ನು ಬಿಟ್ಟು ಒಳ್ಳೆಯ ಮನಸಿನಿಂದ ಮದುವೆ ಅತ್ಯಂತ ವಿಜೃಂಬಣೆಯಿಂದ ಮಾಡಿ ಮುಗಿಸುತ್ತಾರೆ. ಮದುವೆಗೆ ಬಂದ ಎಲ್ಲಾ ಬಂಧು ಮಿತ್ರರು ನವ ಜೋಡಿಗೆ ಹಾರೈಸಿಸುತ್ತಾರೆ. ಮದುವೆ ಮಾಡಿದ ಪದ್ದತಿ ಹಾಗು ಮದುವೆಯಲ್ಲಿಯ ಉಪಚಾರವನ್ನು ಎಲ್ಲರೂ ಕೊಂಡಾದುತ್ತಾರೆ. ಅಲ್ಲಿಗೆ ವಿಜಯನ ಪೆ ಪೆ ಪೆ ಡುಂ ಡುಂ ಮದುವೆ ಮುಗಿದು ಹೋಗುತ್ತದೆ. ಮುಗ್ಧ ಮೂಕ ಕನಸ್ಸುಗಳ ಹೊತ್ತ ವಿಜಯ ಮಧುಚಂದ್ರಕೆ ತೆರಳುತ್ತಾನೆ. ಈಷಾರಾಮಿ ಕಾರಿನಲ್ಲಿ ಇವರ ಮಧುಚಂದ್ರದ ಪ್ರಯಾಣ ಸುಗಮವಾಗಿ ಮುಗಿಯುತ್ತದೆ. (.... ಇನ್ನು ಕಾದು ನೋಡಿ....ವಿಜಯನ ವೈವಾಹಿಕ ಮುಂದಿನ ಜೀವನ. )

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...