Tuesday, May 15, 2012

ಅವಳ ಕೂಗು

ತಂದೆ ತಾಯಿರ ಮನೆಯ ತೊರೆದು
ಅಣ್ಣ ತಂಗಿಯ ಸ್ನೇಹ ಮರೆತು
ನಂಬಿ ನಿನ್ನಂಗಳಕೆ ಬಂದಿಹಳು
ತನ್ನ ಪ್ರೀತಿ ಎಲ್ಲಾ ನಿನಗೆರೆದು
ನಿನ್ನ ಕೊಂಚ ವಾತ್ಸಲ್ಯವ ಬಯಸಿಹಳು
ಏಕೆ ತಿಳಿಯದಾಗಿದೆ ನಿನಗೆ .., ಅವಳ ಕೂಗು ?

ನಗುವುದ ಮರೆತಿಹಳು
ಮೊಗವು ಇಳಿದಾಗಿ ಚಿಂತೆಯಲೇ ಮುಳುಗಿಹಳು
ಬಾಳುವ ಆಸೆ ನುಚ್ಚುನೂರಾಗಲು
ಏಕೆ ಆಲಿಸದೆ ಹೋದೆ ನೀ ಅವಳ ಒಳ ದನಿಯ
ಮರಳಿಸು ಅವಳ ಮುಗುಳು ನಗೆಯ..
ಏಕೆ ತಿಳಿಯದಾಗಿದೆ ನಿನಗೆ .., ಅವಳ ಕೂಗು ?

ನಿರ್ಲಕ್ಷಿಸುವುದು ತರವಲ್ಲ ನಿನಗೆ
ಆ ಜೀವವು ಇಲ್ಲವಾದರೆ ನಿನ್ನೊಂದಿಗೆ
ಅವಳ ಕೊರೆತೆಯು ಕಾಡುವುದು ಎಂದೆಂದಿಗೂ
ಬಾಳು ಹಸಿರಾಗುವ ಆಲೋಚನೆಯ ಬೆಳಸಿಕೊ
ಸಮಯ ಮೀರುವ ಮುನ್ನ ಎಚ್ಚೆದ್ದುಕೋ
ಇನ್ನಾದರೂ ಅರೆತು ಬಿಡು ನೀ...ಅವಳ ಕೂಗು ..!

-ಭಾವಪ್ರಿಯ

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...