Thursday, June 07, 2012

ಮನೆ ಕಟ್ಟೋಣ ಬಾರೆ ಗೆಳತಿ 

ನಿನ್ನಯ ಆಸೆಯ ಮನೆ 
ನನ್ನಯ ಭಾವನೆಯ ಮನೆ
ನಮ್ಮಿಬ್ಬರ ಮನಸ್ಸಿನ ಮನೆ, 
ಕಟ್ಟೋಣ ಬಾರೆ ಗೆಳತಿ ..!

ನಿನ್ನ ಮಡಿಲಲ್ಲಿ ನಗುವ ಹೂಗಳ ಮನೆ 
ನನ್ನ ಒಡಲಲ್ಲಿ ಆಡುವ ಚಿನ್ನರ ಮನೆ
ನಮ್ಮ ಚಿಗುರು ಕನ್ನಸ್ಸು ಹೊತ್ತವರ ಮನೆ, 
ಕಟ್ಟೋಣ ಬಾರೆ ಗೆಳತಿ ..!

ನಿನ್ನ ಪ್ರೀತಿ ತುಂಬಿದ ಮನೆ 
ನನ್ನ ವಿಶ್ವಾಸ ಹೊತ್ತ ಮನೆ 
ನಾವಿಬ್ಬರೂ ಸಾಗಿಸುವ ಮನೆ, 
ಕಟ್ಟೋಣ ಬಾರೆ ಗೆಳತಿ ..!

***ಭಾವಪ್ರಿಯ***

Friday, June 01, 2012

ನೀ ಹಿಂಗ ದೂರಬ್ಯಾಡ  ನಂಗ 


ನೀ ಹಿಂಗ  ದೂರಬ್ಯಾಡ  ನಂಗ
ಇರ್ಲಿ ಹೆಂಗ  ನೀ ಜೊತಿ  ಇಲ್ಲದಂಗ 
ನಿನ್ನ ಬ್ಯಾಸರಕ  ನಾ ಕಾರಣ ಹೆಂಗ 
ತಿಳಿವಲ್ತು ನಿನ್ನ ರಮಿಸೋದು ಹೆಂಗ 

ನೀ ಹಿಂಗ  ದೂರಬ್ಯಾಡ ನಂಗ 
ನಿಮಿಷ ನಿಮಿಷ ಕಾಡ್ತಾವ ನಂಗ 
ನೀ ಹಿಂಗ ಮುನಿಸಿ ಕೊಂಡ್ರ
ನನ್ನ ಜೀವನ ಮುಂದ ಹೆಂಗ 

ನೀ ಹಿಂಗ  ದೂರಬ್ಯಾಡ ನಂಗ 
ನಿನ್ನ ಕಷ್ಟಕ್ಕ ನಾ ಸ್ಪಂದಿಸಲಿ ಹೆಂಗ 
ನಿನ್ನ ಪೇಚಿನ ಮುಖಕ ಚೈತನ್ಯ ತುಂಬಲಿ ಹೆಂಗ 
ನೀ ಹಿಂಗ ಮಂಕಾದರ ಇನ್ನಮುಂದ ಹೆಂಗ 

ನೀ ಹಿಂಗ  ದೂರಬ್ಯಾಡ ನಂಗ 
ನಿನ್ನ ಒಡನಾಟದಾಗ ನಾ ಎಲ್ಲಾ ಕಂಡೆ 
ನನ್ನ ದುಃಖನಾ ನಿನಗ ಹೇಳ್ಕೊಂಡೇ 
ಒಮ್ಮಿಂದೊಮ್ಮೆಲೆ ಹಿಂಗ್ಯಾಕ ಶೆಟ್ತ್ಗೊಂಡಿ 

ನೀ ಹಿಂಗ  ದೂರಬ್ಯಾಡ ನಂಗ 
ನಿನ್ನ ದುಃಖದಾಗ ಖುಷಿ ಕಾಣೋ ಭಂಡ ನಾನಲ್ಲ 
ನಿನ್ನ ಮನಸ ನೋಯಿಸಾಕ ನಾ ಎಂದೂ ಬಯಸಂಗಿಲ್ಲ 
ತಿಳಿದನ ನಾ ತಪ್ಪು ಮಾಡಿನಿ , ನೀ ಕೊಟ್ಟ ಒಂದ ಕಪಾಳಕ ಸಿಟ್ಟು ತೀರಿಸಿಕೊಳ್ಳ

ನೀ ಹಿಂಗ  ದೂರಬ್ಯಾಡ ನಂಗ 
ನೀ  ಕಳಕೊಂಡ್ರ  ನನ್ನ ಮ್ಯಾಗ  ನಂಬಿಕಿ 
ಮುಖಾ ತೋರಿಸದ ಹಂಗ 
ದೂರ ಮರೆಯಾಗ್ತಿನಿ ಕಣ್ಣ್ಮುಚ್ಚಿ 

***ಭಾವಪ್ರಿಯ*** 



Tuesday, May 22, 2012

ಮುಕ್ತಿ

ಹೆಣೆಯ ಮೇಲೆ ಮೂರು ರೇಖೆ
ಬರಹವನ್ನೇ ಬದಲಾಯಿಸಲಿಲ್ಲ ಏಕೆ ?
ಶಿವ ವಿಭೂತಿ ಬರೆದಹಾಗೆ
ನನ್ನ ಪೂಜೆ ಫಲಿಸದೇಕೆ ?
ಹೊಸ ಜೀವನ ಕಾಣುವ ಬಯಕೆ
ಕನಸುಗಳು ಪೂರ್ಣಗೊಳ್ಳದೇಕೆ  ?
ಕಲ್ಲು ಮುಳ್ಳುಗಳ ಕೂಡಿರುವ  ದಾರಿಗೆ
ಕೊನೆಯೇ ಕಾಣುತ್ತಿಲ್ಲ ಇನ್ನೂ ಏಕೆ ?
ಹೊರಟೆ.., ಗಂಟು  ಮೂಟೆಯ ಕಟ್ಟಿ
ಕೈ ಬಿಸಿ ಕರೆವ ಯಮ ಪಾಶಕೆ ..
ಮುಕ್ತಿಸಿಗಲಿ ಎನಗೆ ದೇವಾ.. ನಿನ್ನ ಸನಿಧಿಯೊಳಗೆ..!
 

ನೆನಪು



ಗೆದ್ದ ಸಂತೋಷವ ಹಂಚಿಕೊಂಡ ಸಿಹಿ ನೆನಪು

ಕಳೆದುಕೊಂಡ ವಸ್ತು ನೆನಪಿಗೆ ಬಾರದ ನೆನಪು

ಅವಿಸ್ಮರಣೀಯ ಕ್ಷಣ ಮರುಕಳಿಸಿದ ನೆನಪು

ವಿಷಾದಕರ ಸಂಗತಿ ಕೊಟ್ಟ ಕಹಿ ನೆನಪು

ನವ ಜೀವವು ಬಾಳಲ್ಲಿ ಕಾಲಿಟ್ಟ ದಿನದ ನೆನಪು

ಅಗಲಿದವರ ನೆನೆದು ಅತ್ತಂತ ನೆನಪು

ಜೀವನವೇ ಹೀಗೆ ನೆನಪುಗಳ ಸಾಗರ

ಸಿಹಿ ಕಹಿ ಏರು ಇಳಿತಗಳ ಸಪ್ತಸಾಗರ



ಭಾವಪ್ರಿಯ

Friday, May 18, 2012

आपको देखते ही अर्मान जागता है


आपका ख्याल आतेही दिल झूमता है

हर वक़्त, बे वक़्त आप ऐसे मंडराते है

हर घडी आपके सात रहने का दिल करता है

हो ना हो हम आपको चाहने लगे है

... क्यूंकि.. हर पल हर जगह हम आपको ही देखते है



                                                                                    -भावप्रिय

Thursday, May 17, 2012

ನಲ್ಲೆ :


ಕುಸುಮದೊಳಗಿನ ಮಂಜಿನ ಹನಿಯಂತೆ
ಹುಣ್ಣಿಮೆ ಸೊಬಗ ಸವಿಯುವ ಕವಿಯಂತೆ
ಪ್ರೇಮಿಗಳ ಕಣ್ಣ ಸನ್ನೆಯಂತೆ
ಸದಾ ನಗುತಿರು ನಿನ್ನ ನಗುವಿನುಸಿರಲಿ ನನ್ನ ಹೆಸರು ಬರೆದು...


ನಲ್ಲ :

ನಾ ಕುಸುಮವಾದರೆ ನೀನೆ ನನ್ನ ಮಂಜಿನ ಹನಿ
ಹುಣ್ಣಿಮೆಗೆ ಸೊಬಗು ನೀಡುವ ಚಂದಿರನು ನೀ
ನಿನ್ನ ನಗುವಲ್ಲೇ ನನ್ನ ನಗು ಕಾಣುವೆ
ಉಸಿರು ಉಸಿರಲ್ಲಿ ಬೆರೆತು ಬಿಡು ನೀ ....!

Tuesday, May 15, 2012

ನಮ್ಮ ಕಾರುಗಳು ....!!!

ಬೀಟ್ ಚೊಲೋ ಐತಿ ನೋಡಾಕ,
ಜಾಗ ಬಹಳ ಇಲ್ಲ ಕೂಡಾಕ.!
ಸ್ಪಾರ್ಕ್ ಬೀದಿಗೆ ಬಂದರೆ,
ಅನ್ಯರಿಗೆ ಬಹಳ ತೊಂದರೆ.!
ತವೇರನಮ್ಮ ಚಿಲುಮೆ,
ಬೃಹತ್ ಸಂಸ್ಥೆಗಳಿಗೆ ಇದರ ಮೇಲೆ ಒಲುಮೆ.!
ಆಪ್ಟ್ರಾ ನಮ್ಮ ವಿಶಾಲ ವಾಹನ ,
ಬಾಳಲ್ಲಿ ತರುವುದು ವಿಲಾಸಿ ಜೀವನ .!
ಕ್ಯಾಪ್ಟಿವ ಬಲು ಜೋರು,
ಇದು ಬರಿ ದೊಡ್ಡವರ ಕಾರು !
ಕ್ರುಜು ಕಂಡರೆ ಜನರು ಎನುತಿಹರು,
ಅಲ್ಲಿ ನೋಡು... ರಾಜ ಬರುತಿಹರು.!

कडुवा सच्च...!!!


सच्च केहेने वालों को लोग मानते नहीं
सच्चाई की रास्ते में कबी फूल खिलते नहीं
दर्द भरी सच्चाई में कोई जीना चाहता नहीं
झूठे लोगों की ही दरबार है हर जगह
बेईमानी की हर जगह कदर
जूट की साम्राज्य में सत्य का निर्नाम
कहाँ गया वो गांधीजी का आदर्ष
सज्जन लोग कर रहें संघर्ष
कब होगा इन जैसे लोगों का नाश
कब मिलेगा इंसानियत को आस ..!

ಅವಳ ಕೂಗು

ತಂದೆ ತಾಯಿರ ಮನೆಯ ತೊರೆದು
ಅಣ್ಣ ತಂಗಿಯ ಸ್ನೇಹ ಮರೆತು
ನಂಬಿ ನಿನ್ನಂಗಳಕೆ ಬಂದಿಹಳು
ತನ್ನ ಪ್ರೀತಿ ಎಲ್ಲಾ ನಿನಗೆರೆದು
ನಿನ್ನ ಕೊಂಚ ವಾತ್ಸಲ್ಯವ ಬಯಸಿಹಳು
ಏಕೆ ತಿಳಿಯದಾಗಿದೆ ನಿನಗೆ .., ಅವಳ ಕೂಗು ?

ನಗುವುದ ಮರೆತಿಹಳು
ಮೊಗವು ಇಳಿದಾಗಿ ಚಿಂತೆಯಲೇ ಮುಳುಗಿಹಳು
ಬಾಳುವ ಆಸೆ ನುಚ್ಚುನೂರಾಗಲು
ಏಕೆ ಆಲಿಸದೆ ಹೋದೆ ನೀ ಅವಳ ಒಳ ದನಿಯ
ಮರಳಿಸು ಅವಳ ಮುಗುಳು ನಗೆಯ..
ಏಕೆ ತಿಳಿಯದಾಗಿದೆ ನಿನಗೆ .., ಅವಳ ಕೂಗು ?

ನಿರ್ಲಕ್ಷಿಸುವುದು ತರವಲ್ಲ ನಿನಗೆ
ಆ ಜೀವವು ಇಲ್ಲವಾದರೆ ನಿನ್ನೊಂದಿಗೆ
ಅವಳ ಕೊರೆತೆಯು ಕಾಡುವುದು ಎಂದೆಂದಿಗೂ
ಬಾಳು ಹಸಿರಾಗುವ ಆಲೋಚನೆಯ ಬೆಳಸಿಕೊ
ಸಮಯ ಮೀರುವ ಮುನ್ನ ಎಚ್ಚೆದ್ದುಕೋ
ಇನ್ನಾದರೂ ಅರೆತು ಬಿಡು ನೀ...ಅವಳ ಕೂಗು ..!

-ಭಾವಪ್ರಿಯ

Friday, March 02, 2012

ಕೈ ರೇಖೆಗಳು ಹೇಳುವುದು ನಿಜವೇ ?



ಐಶ್ವರ್ಯಕ್ಕೆ ಒಂದು ರೇಖೆ,
ಆಯಸ್ಸಿಗೊಂದು ರೇಖೆ,
ಮದುವೆಯ ಜೀವನಕ್ಕೆ ಒಂದು ರೇಖೆ,
ಮಕ್ಕಳ ಸೂಚಿಸುವುದೊಂದು ರೇಖೆ,
ರೇಖೆಗಳು ಕೂಡಿರದಿದ್ದರೆ ಗಂಡಾಂತರವೇಕೆ ?
ರೇಖೆಗಳೇ ಇರದವರಿಗೆ ಭವಿಷ್ಯವೇ ಇಲ್ಲವೇ ?
ಕಷ್ಟಗಳು ಬಂದಾಗ ಅನ್ನುವುದು, ಅಯ್ಯೋ ನನ್ನ ಹಣೆಬಾರವೇ..
ದೇವರು ಬರೆದಿರುವುದು ಹಣೆಯ ಬರಹ..
ಕೈಯ್ಯ ರೇಖೆಗಳೂ ...ಇಲ್ಲ ಹಣೆ ಬರಹವೂ
ಹೇಗೆ ನಂಬುವುದು... ಇವೆಲ್ಲಾ ನಿಜವೇ..?

***ಭಾವಪ್ರಿಯ***

Wednesday, February 29, 2012

ಕಟುಕಿ



ನಿನ್ನ ಬಿಟ್ಟು ಬದುಕಲಾರೆ ಎನ್ನುತ್ತಿದ್ದಳು ಅಂದು ,......

ಅವನ ಜೊತೆ ಬದುಕಬಲ್ಲೆ ಎನ್ನುತ್ತಿವಳು ಇಂದು , ನಿನ್ನ ಕೊಂದು ..!

---ಭಾವಪ್ರಿಯ---

ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!



ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!

ನೀ ಮುಗಿಲಾಚೆಯ ನೀಲಿ ಬಾನು 
ಪ್ರೀತಿ ತುಂಬಿದ ಕಡಲು ನಾನು 
ಕಡಲು ನಿರೀರಬಹುದು ಲವಣ
ಸಿಹಿಗೆ ತಿರುಗಿಸಬಲ್ಲದು ನನ್ನ ಪ್ರೀತಿಯ ತಾಣ    
ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!

ನನ್ನಯ ಹೃದಯವಿದು ಚೆಲುವು ಬೃಂದಾವನ
ಮೆಲ್ಲಗೆ ಕುಳಿತು ಸವಿಬಾರೆ ಹಕ್ಕಿಗಳ ಸವಿಗಾನ
ತರ ತರ ಅರಳಿದೆ ಹೂವಿನ ವರ್ಣ
ಸುಗಂಧವು ಉಣಿಸಿದೆ ಒಲವಿನ ಚರಣ
ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!

ಕವಿ ಮನಸು ನನ್ನದು ಚಿರನೂತನ
ನಿನ್ನ ಪ್ರತಿ ಒಂದು ಭಾವವು  ನನಗೆ ಪ್ರೇರಣ
ಮಲ್ಲಿಗೆ ಮನದಲ್ಲಿ  ಇಡು  ಪಾದಾರ್ಪಣ
ನಾ ಸದಾ ಬಡಿಸುವೆ ಪ್ರೀತಿಯ ಔತಣ
ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!

***ಭಾವಪ್ರಿಯ ***

Tuesday, February 28, 2012

ಜಿನುಗುತಿವೆ ಕಣ್ಣ ಹನಿಗಳು .!



ಗೆಳತಿಯೊಡನೆ ಹಂಚಿಕೊಂಡ ನೆನಪು
ನಕ್ಕು ನಲಿದ ಕ್ಷಣವ ನೆನೆದು
ಮರುಕಳಿಸಿದೆ ನಲಿವಿನ ಕಂಪು
ಮತ್ತೆ.., ಮತ್ತೆ .. ನೆನೆ ನೆನೆದು ಜಿನುಗುತಿವೆ ಕಣ್ಣ ಹನಿಗಳು ..!

ನಿದ್ದ್ರೆಯಲಿ ಕಂಡ ಕೆಟ್ಟ ಕನಸಿಗೆ ಬೆಚ್ಚಿ ಬಿದ್ದು
ನಡು ರಾತ್ರಿಯಲಿ ಬಿಕ್ಕಿ ಬಿಕ್ಕಿ ಅತ್ತಿದ್ದು
ಎದೆಗೊರಗಿಸಿ ಮಗುವಂತೆ ರಮಿಸಿದ್ದು
ಮತ್ತೆ.., ಮತ್ತೆ .. ನೆನೆ ನೆನೆದು ಜಿನುಗುತಿವೆ ಕಣ್ಣ ಹನಿಗಳು ..!

ಚಳಿಗೆ ನಿ ನಡುಗುತ್ತ ನಿಂತಾಗ
ಹೊದೆಸಿದ್ದೆ ನಿನಗೆ, ನನ್ನ ಬಾಹುಗಳ ಕಂಬಳಿ
ಎದೆಗೊತ್ತಿದ ನಿನ್ನ ಕಿವಿ ಜುಮಕಿ
ಮತ್ತೆ, ಚುಚ್ಚಿ ಚುಚ್ಚಿ...ಜಿನುಗಿಸಿವೆ ಕಣ್ಣ ಹನಿಗಳು ..!

ಮರೆತೇ ಹೋಗಿರುವೆ ನೀನು...
ಹಿಂತಿರುಗಿ ಬಾರದ ಊರಿಗೆ ನಿ ಹೋದರೂ
ನಿ ಬರುವದಿಲ್ಲ ಎಂಬ ಸತ್ಯವ ತಿಳಿದರೂ
ಆವಿ ಗೊಳ್ಳದೇ.. ಮತ್ತೆ.. ಮತ್ತೆ., ಜಿನುಗುತಿವೆ ಕಣ್ಣ ಹನಿಗಳು ..!

Friday, February 24, 2012

ಕನಸುಗಳ ಕಾರುಬಾರು

ಯಾಕೋ ಇಂದಿಂದು ಕನಸುಗಳದೇ ಕಾರುಬಾರು
ಇರುಳ ತೋಳಲಿ ನಿದ್ದ್ರೆಗೆ ಜಾರುತಲಿ
ಲಗ್ಗೆ ಇಡುವವು ಮುಖಗಳು ಸಾವಿರಾರು ..

ಮುಖ ಪರಿಚಯವೇ ಇಲ್ಲದ ಮುಖಗಳು
ನಸು ನಕ್ಕು ಶೂನ್ಯದಡೆಗೆ ಜಾರಿದರು
ತಿರುಗಿ ನೋಡಿದೊಡನೆ ಅಲ್ಯಾರೂ ಇಹರು

ಕೆಲವು ಕೋಪಗೊಂಡ, ಭೀತಿಗೊಳಿಸುವ ಮುಖಗಳು
ಯಾರದೋ ಮೇಲಿನ ಸಿಟ್ಟಿಗೆ ನನ್ನ ದುರುಗುಟ್ಟುತ್ತಿದ್ದರು
ಭಯದ ಛಾಪು ಮೂಡಿಸಿ, ಕತ್ತಲೆಯ ಬಾವಿಗೆ ದೂಡಿದರು

ಇನ್ನು ಪಾಪ ಮುಘ್ಧ ಮುಖಗಳು
ತಮ್ಮ ಅಗಲಿದ ಆತ್ಮಿಯರ ಹುಡುಕುತ್ತಿದ್ದರು
ಅವರಿವರ ಬಳಿ ತೆರಳಿ ಪರಿಚಯ ಕೇಳುತ್ತಿದ್ದರು

ಇನ್ನು ರೋಧಿಸುತ್ತಿದ್ದ , ಅಳು ಮುಖಗಳು
ವಿಧಿಯ ಆಟಕೆ ಕಂಗೆಟ್ಟ ಮೂಕರು
ಮರಳಿ ಬಾರದ ಜೀವಗಳಿಗೆ ತಪಿಸುತ್ತಿದ್ದರು

ಯಾಕೋ ಇಂದಿಂದು ಇಂತಹ ಕನಸುಗಳದೇ ಕಾರುಬಾರು
ಇರುಳು ಕಳೆದು ಬೆಳಗಿನ ಮುಂಜಾವಲಿ
ಮರೆಯಾಗುವವು.. ಅವೇ ಮುಖಗಳು ಸಾವಿರಾರು ..!!

चाहने का अंदाज़

प्यार करने का अपना अलग्सा अंदाज़ है..
अपने मन को.., उनके मनको  डोर से बांदते है ..
अपने छाया में हम उन्हें पाते है..
हो ना हो ओ भी हमें इतनाही चाहती होगी...
लेकिन हम उसका जवाब का इंतज़ार ना करते हुवे...
उनको चाहनेकी पल पल में अपनी ख़ुशी पाते है..! 

ಮಾರಕ ನೆನಪುಗಳು

ನೆನಪುಗಳು ನೆನಪಿಗೆ ಬರಲು 
ನೆನೆದು ನೆನೆದು ಖುಷಿ ಪಡುವುದೋ.., ಇಲ್ಲ ದುಃಖಿಸುವುದೋ ?
ಸವಿ ಕ್ಷಣಗಳು  ಸಿಹಿ ಹಂಚಿದರೆ.. ಕಹಿ ನೆನಪುಗಳು ಕುಕ್ಕಿ ತಿಂದಿವೆ
ಅರಗಿಣಿ ಎಂದು ಪ್ರೀತಿಸಿದ ಕಾರಣಕೆ ರಣ ಹದ್ದಾಗಿ ಕಿರು-ಕಿರುಚಿ ಹರಿದಿದೆ  
ಸಂತಸದ  ಸಾಗರದಿ ತೇಲಿದೆ ಎಂತ್ತಿದ್ದೆ..,ಆದರೆ ಸುಳಿ ಅದು ನನ್ನ ಸೆಳೆದು ಮುಳುಗಿಸಿ ಕೊಂದಿಹುದು  
ನೆನಪುಗಳ ದಿಕ್ಕರಿಸಿ ನಡೆಯಲೇ... ಜೀವವ ತ್ಯಜಿಸಿ ಮಣ್ಣಾಗಲೇ 
ಮಾರಕ ನೆನಪುಗಳು ಮನ ಕೊಂದಾಗ ..ಜಿವಿಸಲಿ  ಹೇಗೆ ? 

ಮನವ ತೊಳೆಯಿರಿ

ಮನವ ತೊಳೆಯಿರಿ ಓ ಮಾನವರೇ ,
ಕೆಟ್ಟ ಚಟಗಳ ಪ್ರೇರೇಪಿಸುವ ಮನವ,
ದುಷ್ಟ ಕೆಲಸಕ್ಕೆ ಕೈ ಹಾಕುವ ಮನವ,
... ಮಾನವನ ವ್ಯಕ್ತಿತ್ವ ಹಾಳು ಮಾಡುವ... ಮನ ತೊಳೆಯಿರಿ..!

ಮನವ ತೊಳೆಯಿರಿ ಓ ಮಾನವರೇ ,
ಅನ್ನ್ಯರನ್ನು ದೂಷಿಸುವ ಮನವ,
ಪರ ಜನರ ಅಳಿವು ಬಯಸುವ ಮನವ,
ಅನ್ಯರ ಕಷ್ಟಗಳಲ್ಲಿ ತೃಪ್ತಿ ಕಾಣುವ .... ಮನ ತೊಳೆಯಿರಿ..!

ಮನವ ತೊಳೆಯಿರಿ ಓ ಮಾನವರೇ ,
ಶ್ರೀಹರಿಯ ಜಪಿಸದ ಮನವ
ದೇವನೋಲುಮೆಯ ಕೊಂಡಾಡದ ಮನವ
ಜಗತ್ತ ಸೃಷ್ಟಿಯ ಮಾಯವ ಅರಿಯದ ....ಮನ ತೊಳೆಯಿರಿ..!

ಮನವ ತೊಳೆಯಿರಿ ಓ ಮಾನವರೇ ,
ಕಲಿಯುಗದ ಕಾಲ ಮುಗಿಯುವ ಮುನ್ನ,
ಮಾನವನ ಹುಟ್ಟು ಅಡಗುವ ಮುನ್ನ,
ಪ್ರಕೃತಿ ವಿಕೊಪಕೆ ತೆರಳುವ ಮುನ್ನ ....ಮನ ತೊಳೆಯಿರಿ..!

Friday, November 25, 2011

ಮೋಡಗಳ್ಯಾಕೋ....



ಮೋಡಗಳ್ಯಾಕೋ ಧರೆಗೆ ಬಂದಾವ ಇಂದು..
ಸೌಮ್ಯದಿ ಚಲಿಸುತ್ತ ..ಯಾರನ್ನೋ ಆರಿಸುತ್ತ ..
ತವಕದಿ ಮುನ್ನುಗ್ಗುತ್ತಾ ..ಸುಯ್ಯನೆ ಕೂಗಿ ಕರೆಯುವಂತೆ ..!

ಅತ್ತಾಗೆ ಕಪ್ಪಗು ಅಲ್ಲ ಇತ್ತಾಗ ಬೆಳ್ಳಗೂ ಅಲ್ಲ
ತಿಳಿ ಕಪ್ಪು ಸವರಿದ ಹಾಗೆ ಮುಖದಾಗ
ಬಿಡಿ ಬಿಡಿಯಾಗಿ ಹೊರಟಾಳ ...ಇವಳ ಚಲನವು ಯಾರ ಕಡೆಗೋ ?

ಬಿಂಕ ಒಯ್ಯಾರ ತಳುಕು ಬಳುಕೋ ...
ಮನದಲಿ ಏನೋ ಇರಬಹುದು ಅಳುಕು
ಸಂಜೆಯ ತನಕ ಕಾದರೆ ತಿಳಿದೀತು... ಇವಳ ಅಳುವೋ ಇಲ್ಲವೋ ಆನಂದ್ ಭಾಷ್ಪವೋ ..!

Thursday, November 24, 2011

ಎತ್ತಕಡೆ ಸಾಗಿದೆಯೋ ಪಯಣ ?

ಜೀವನದಲ್ಲಿ ನೆಮ್ಮದಿ ಇಲ್ಲ
ಮನಸ್ಸಿಗೆ ಶಾಂತಿಯು ಇಲ್ಲ
ಕಾಡುವ ವಿಷಗಳೆಲ್ಲಾ ನಿಗ್ರಿಸುತಿಹವಲ್ಲ
ದಾರಿಯೇ ಕಾಣದಂತಾಗಿದೆ ....ಎತ್ತಕಡೆ ಸಾಗಿದೆಯೋ ಪಯಣ..?

ಕಛೇರಿಯ ಕ್ಷಣಗಳು ಇಂದು ಕೊಲ್ಲುತ್ತಿವೆಯಲ್ಲ
ಕೆಲಸ ಕಾರ್ಯಗಳಲ್ಲಿ ಆಸಕ್ತಿಯೇ ಇಲ್ಲ
ರಾಜ್ಯಕಿಯ ಕಂಡು ಮನ ಬೇಸತ್ತಿದೆಯಲ್ಲ
ಉನ್ನತಿ ಕಾಣುವ ಲಕ್ಷಣಗಳೇ ಇಲ್ಲ... ಎತ್ತಕಡೆ ಸಾಗಿದೆಯೋ ಪಯಣ ..?

ಶನಿಯ ಕಾಟವೋ..., ಇಲ್ಲವೋ ಮೋಹಿನಿಯ ಆಟವೋ ,
ಜೀವನಕ್ಕೆ ಅಡ್ಡಗಾಲಾಗಿ.., ಏಳಿಗೆಗೆ ಸರ್ಪಗಾವಲಾಗಿ...
ಕ್ಷಣ ಕ್ಷಣಕೆ ತಡವಿ , ಕೆಟ್ಟ ಶಕ್ತಿಯೊಂದು ಕೆಣಕಿದೆಯಲ್ಲ
ಎಂದು ಅಳಿಯುವುದು ಕೇಡುಗಾಲ....ಎತ್ತಣದಿಂದೆತ್ತ ಸಾಗಿದೆಯೋ ಪಯಣ..?

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...