Thursday, July 18, 2013

ಜೀವ ಜಲ


ಜೀವ ಜಲಕೆ ಇಂದು ಭಾರಿ ಖುಷಿ

ಪರದೇಶ ತೊರೆದು, ತವರಿಗೆ ಮರಳಿದ ಅಕಾಂಶಿ.

ಜೋರಾಗಿ ಸುರಿದು ಬರುತಿದೆ

ಒಮ್ಮೆ ಮಳೆ ಹನಿಯಾಗಿ

ಇನ್ನೊಮ್ಮೆ ಆಳಿಯ ಕಲ್ಲಾಗಿ

ತವರು ಮೆಟ್ಟಿದ ಖುಷಿಗೆ ಭೋರ್ಗರೆಯುತಿದೆ

ಹಳ್ಳ, ನದಿ, ಕಣಿವೆಗಳ ಸೇರಿ ಸಂಭ್ರಮಿಸುತಿದೆ

ತುಳುಕುತ್ತಾ ಚಲಿಸಿದೆ

ಆ ನದಿಯ ದಡಕೆ ಮುತ್ತಿಡುತ್ತಾ

ದಡದಲಿ ಇದ್ದ ಬಡ್ಡಿ, ಕಡ್ಡಿಗಳೆಲ್ಲಾ ಚಿಗಿಯುತಿದೆ

ಜಲಜೀವ ರಾಶಿ ಉತ್ತಿ ಬಿತ್ತಿ ನಲಿಯುತಿವೆ

ಎತ್ತರದ ಗುಡ್ಡದ ಅಡಿಯಿಂದ ಧುಮುಕಿ

ರುದ್ರ ರಮಣೀಯ ದೃಷ್ಯ ಜಲಪಾತಕೆ ಸೊಬಗು ನೀಡುತಿದೆ

ಏನು ಉಲ್ಲಾಸವೋ.., ಏನು ಸಂತೋಷವೋ..

ತವರ ಸೇರಿ, ತನ್ನ ಮನೆಗೆ ಹಸಿರು ಹಚ್ಚಿ ಕುಣಿದಿದೆ.

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...