ಕುತ್ತಿಗೆಯಲ್ಲಿ ತಾಳಿ ಇದ್ದರೆನೇ ಭದ್ರತೆ
ಹಣೆ ಮೇಲೆ ಕುಂಕುಮ ರಾರಾಜಿಸಿದರೆ ಶೊಭಿತೆ
ಮೂಗ ಮೇಲೆ ಮೂಗುತಿ ಚಂದ
ಕಾಲುಗಳಿಗೆ ಉಂಗುರಗಳೇ ಅಂದ
ಮುಡಿಗೆ ಮಲ್ಲಿಗೆಯೇ ಹೆಚ್ಚಿಸುವುದು ಹೆಂಗಳೆಗೆ ಬಣ್ಣ
ಹಸಿರು ಗಾಜಿನ ಬಳಿಗಳೇ ಸೌಭಾಗ್ಯವತಿಯ ಲಕ್ಷಣ
ಪಂಚ ಮುತ್ತುಗಳ ಹೊತ್ತವಳೇ "ಮುತ್ತೈದೆ "
ಕುತ್ತಿಗೆಗೆ ತಾಳಿ ಬೇಡ, ಅದು ಕತ್ತಿಗೆ ಬಿಗಿಯುವ ಉರುಳ ಹಗ್ಗ
ಹಣೆಗೆ ಕುಂಕುಮವೇಕೆ ? ಅದು ಇವಳ ವೇಶಕ್ಕೆ ಒಪ್ಪುವುದಿಲ್ಲವಂತೆ
ಮೂಗುತಿ ಚುಚ್ಚಿಸಿಕೊಳ್ಳೋಳು ಹಳ್ಳೀ ಗುಗ್ಗು
ಮುಡಿಗೆ ಮಲ್ಲಿಗೆ ಇಡಲು, ಅವಳ ತಲೆ ಅಲ್ಲವಂತೆ ಹೂ ಕುಂಡಲ
ಬಳೆಗಳು ತೊಡಲು ಇವರ ಕೈಗಳೆಗೆ ಭಾರವಂತೆ
ಮುತ್ತುಗಳು ಯಾರೂ ಕೊಟ್ಟರು ಅವರಿಗೋಕೆ
ಮುತ್ತುಗಳ ಕೊಡಿಸುವವರ...ಇವಳು ಮನೆಯಾಕೆ..!

1 comment:
ಮುತ್ತೈದೆ ಮತ್ತು ಆಧುನಿಕತೆ ಎರಡೂ ಚರಣಗಳಲ್ಲಿ ಅರ್ಥಪೂರ್ಣವಾಗಿ ಬಂದಿದೆ. ಬದಲಾಗಿದೆ ಕಾಲವೆಂದರೆ ಇಷ್ಟು ಬದಲಾವಣೆಯೇ?
Post a Comment