ಮೈ ನೆರೆದಾಗ ಚಿಗುರೊಡೆದಿತ್ತು
ವಸಂತ ಹಸಿರು ಹಾಸಿದಾಗ ಕಂಕಣ ಭಾಗ್ಯತಂದಿತ್ತು
ಉತ್ತಿ ಬಿತ್ತಿ ಬೆಳೆದು ರೂಪಿಸಿಕೊ ನಿನ್ನ ಜೀವನದ ಹಾದಿ ಎಂದಿತ್ತು
ಸುಂದರ ಸರಳ ಜೀವನ ನಿನ್ನ ಕಣ್ಣಗಳಿಗೆ ಕಾಣದಾಯಿತು
ಮೆಟ್ಟಿ ನಡೆದು ಬಿಟ್ಟೆ., ತುಳಿಯುತ್ತಾ ಹಸಿರ ಹಾಸಿಗೆ
ಬರುಡಾಯಿತು ನೆಲ..,ಚಿಗುರದೇ ಒಂದೇ ಒಂದು ಗರಿಕೆ
ಹಳಿಸಿದ ಜೀವನ ಮರಳದು ಕೊನೆವರೆಗೂ..,
ಬಾಳು ಬರಡು.., ಎಂದೆಂದಿಗೂ ತುಂಬದು ನಿನ್ನ ಒಡಲು.
1 comment:
ವಸುಂಧರೆಯ ಅಧೋಗತಿ ಮತ್ತು ಮಾನವನ ದಾಹದ ಪ್ರವೃತ್ತಿಯ ಸಮರ್ಥ ಅನಾವರಣ ಇಲ್ಲಾಗಿದೆ. ಉತ್ತಮ ಸಮಾಜ ಮುಖಿ ಕವನ.
Post a Comment