Tuesday, February 26, 2013

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 7

(.....ಮುಂದುವರೆಯುತ್ತದೆ... ) ಇದ್ದಕ್ಕಿದ್ದಹಾಗೆ ಊಟಕ್ಕೆ ಬನ್ನಿ ಎಂದು ಕರೆಯಲು ಕಾರಣವೇನು..? ಹಬ್ಬವಂತು ಅಲ್ಲ ಮತ್ತೆ ಯಾವುದೇ ಕಾರ್ಯಕ್ರಮ ಕೂಡ ಇಲ್ಲ ಮೊನ್ನೆ ಅಂದರೆ ಒಂದು ತಂಗಳ ಕೆಳಗೆ ಮನೆಗೆ ಬಂದು ಹೋಗಿದ್ದವಿ, ಎಂಬ ಪ್ರಶ್ನೆಗಳು ಉದ್ದ್ಭವಿಸುತ್ತಿದ್ದವು ವಿಜಯನ ಮನದಲ್ಲಿ. ಹೆಂಡತಿ ತನ್ನ ತವರು ಮನೆಗೆ ಹೋಗುವಾಗ ಬೆಳ್ಳಂಬೆಳಿಗ್ಗೆ ಎಂದ್ದು ೧೦ ಗಂಟೆಗೆ ತಯ್ಯಾರ್ ಆಗುವಳು ಇಂದು ಯಾಕೋ ತಡ ಮಾಡುತ್ತಿದ್ದಾಳೆ...ಓಹೋ ನಮ್ಮ ಸಂಬಂಧಿಕರ ಮನೆಗೆ ಹೋಗಲು ಇವಳಿಗೆ ಇಷ್ಟವಿಲ್ಲ ಅದಕ್ಕೆ...ಇಲ್ಲವಾದರೆ ಬೇರೆ ಏನೋ ಕಾರಣವಿರಬಹುದೇ ?? ಒಂದು ಗಂಟೆ ಸುಮಾರಿಗೆ ಮನೆಗೆ ಊಟಕ್ಕೆ ಬನ್ನಿ ಅಂತ ಹೇಳಿದವರು ವಿಜಯನ ದೊಡ್ಡವ್ವ ತುಂಬಾ ಸಮಯ ಪ್ರಜ್ನೆ ಹೊಂದಿದವರು. ಇವಳು ಜಳಕ ಮಾಡಿ ತಯ್ಯಾರ್ ಆಗಲೂ ಇವಳಿಗೆ ೧.೩೦ ಗಂಟೆಯೇ ಆಯಿತು..ವಿಜಯ ತನ್ನ ಅವ್ವನ ಬಗ್ಗೆ ತಿಳಿದವನು ಚಟಪಟಿಸತೊಡಗಿದನು..ಅಯ್ಯೊ ನಾವು ತಡವಾಗಿ ಹೋದರೆ ಅವ್ವಾ ಬೈಯುತ್ತಾಳೆ..ಬೇಗನೆ ಬಾ ಎಂದು ಹೆಂಡತಿಗೆ ಕೂಗುತ್ತಾನೆ..! ಇವಳ ಮೇಕಪ್ಪು ಮುಗಿಯುವುದೇ ಇಲ್ಲ..ಸಿಟ್ಟಿಗೆದ್ದು ಬೇಗನೆ ನಡಿಯಲೇ ಅಂದು ಗದರಿಸುತ್ತಾನೆ. ಸರಿ..ಏಕೆ ಇಷ್ಟು ತಡವಾಯಿತು ಅವ್ವಾ ಕೇಳಿದರೆ ಏನು ಹೇಳುವುದು ಎಂದು ಕೇಳಿದರೆ ಟ್ರಾಫಿಕ್ಕು ಇತ್ತು ಅಂತ ಹೇಳಿದರಾಯಿತು ಅಂತ ಸಲಿಸಾಗಿ ಉತ್ತರಿಸುತ್ತಾಳೆ, ಇವನೊ ಅವ್ವನಿಗೆ ಆಗಲಿ ಅಪ್ಪನಿಗೆ ಆಗಲಿ ಎಂದಿಗೂ ಸುಳ್ಳು ಹೇಳಿದವನಲ್ಲ...ಹೆಂಡತಿಯ ತಪ್ಪನ್ನು ಮುಚ್ಚಿಕೊಳ್ಳಲು ಅದನ್ನೆ ಹೇಳಿದರಾಯಿತು ಅಂದುಕೊಂಡ. ಸುಮಾರು ೨.೩೦ ಗಂಟೆಗೆ ಮನೆಗೆ ತಲುಪುತ್ತಾರೆ.., ಕಾದು ಕಾದು ಸುಸ್ತಾದ ಅವ್ವ ಅಪ್ಪ ಊಟಕ್ಕೆ ಕುಳಿತ್ತಿರುತ್ತಾರೆ. ಅಪ್ಪ ವಿಜಯನ ಕುರಿತು ಏನಪ್ಪಾ ಊಟಕ್ಕೆ ಅಂದರೆ ರಾತ್ರಿಯ ಊಟ ಅಂತ ತಿಳಿದಿದ್ದಿಯಾ ಎಂದು ತಮಾಷೆ ಮಾಡುತ್ತಾರೆ, ಅವ್ವಾ ಯಕೋ ಇಷ್ಟು ಲೇಟು..? ಅಂದಿದ್ದಕ್ಕೆ ಇಲ್ಲ ಅವ್ವಾ ಬೇಗಾನೆ ಮನೆ ಬಿಟ್ಟಿದ್ವಿ ಆದರೆ ಟ್ರಾಫಿಕ್ಕು ಜಾಮ್ ಇತ್ತು ಅದಕ್ಕೆ ತಡವಾಯಿತು ಅನ್ನುತ್ತಾ ಹೆಂಡತಿಯ ಮುಖ ನೋಡುತ್ತಾನೆ..,ವಿಜಯನ ಮುಖ ಭಾವನೆಗಳ ಅರಿತ ಅವ್ವ... ಎನವ್ವ ನೀ ತಡ ಮಾಡಿದಿಯೋ ಇಲ್ಲಾ ಅವನೇ ಮಾಡಿದನೊ ಅಂತ ಕೇಳಿದ್ದಕ್ಕೆ ಕುಹಕು ನಗು ಬೀರುತ್ತಾಳೆ.., ಅಲ್ಲಿಗೆ ಅವ್ವನಿಗೆ ಖಾತ್ರಿ ಆಗುತ್ತದೆ. ಅಲ್ಲಾ ಹೆಂಗಸರು ಯಾವಾಗಲೂ ಬೇಗ ತಯ್ಯಾರ್ ಆಗಬೇಕು ಒಂದು ಪಕ್ಷ ಗಂಡಸರು ತಡವಾದರೆ ನಾವೇ ಅವರಿಗೆ ಅವಸರ ಮಾಡಿ ಕರೆಯಬೇಕು ಸಮಯ ಪ್ರಜ್ಣ್ಯೆ ಹೆಣ್ಣಿಗೆ ತುಂಬಾ ಮುಖ್ಯ ಅಂತ ಬುದ್ದಿ ಮಾತು ಹೇಳಿ..ಈ ಸಲ ಕ್ಷಮಿಸುತ್ತೇನೆ ಮುಂದೆ ಹೀಗಾಗದ ಹಾಗೆ ನೋಡಿಕೊ ಅಂತ ಹೇಳಿ ಊಟಕ್ಕೆ ಕೂಡಲು ಹೇಳುತ್ತಾರೆ. ದೊಡ್ಡವ್ವನದು ಅಡುಗೆ ಮಾಡುವುದರಲ್ಲಿ ಎತ್ತಿದ ಕೈ. ಅವರು ಊಟದಲ್ಲಿ ಪಾಯಸ, ಹೋಳಿಗೆ, ಒಡೆ , ಫಲಾವು ಮತ್ತೆ ತರ ತರಹದ ಅಡುಗೆ ಮಾಡಿರುತ್ತಾರೆ. ದಂಪತಿಗಳು ಸೇರಿ ಊಟ ಮಾಡುತ್ತಾರೆ. ಊಟ ಮುಗಿದ ಬಳಿಕ ಸ್ವಲ್ಪ ಕುಶಲೋಪರಿ, ಕೆಲಸದ ಬಗ್ಗೆ, ಅಪ್ಪ ಅಮ್ಮಂದಿರ ಬಗ್ಗೆ ಬಂಧು ಬಳಗದವರ ಬಗ್ಗೆ ಸ್ವಲ್ಪ ಮಾತುಗಳು ಆಡುತ್ತಾರೆ. ಸ್ವಲ್ಪ ವಿರಾಮ...! ದೊಡ್ಡವ್ವ ವಿಜಯನ ಕುರಿತು ಏನಪ್ಪಾ ನಿನ್ನ ಅತ್ತೆ ಮತ್ತೆ ಅವಳ ತಮ್ಮ ಹಾಗು ಇವಳ ಅಕ್ಕ ಭಾವಂದಿರು ಮೊನ್ನೆ ಮನೆಗೆ ಬಂದಿದ್ದರು ನಿನ್ನ ಮೇಲೆ ತುಂಬಾನೆ ದೂರುಗಳ ನೀಡುತ್ತಿದ್ದರು...ಏನ್ ವಿಷಯ...ಅಂತ ಕೇಳಿತ್ತಾರೆ..! ವಿಜಯನಿಗೆ ಏನೂ ತಿಳಿಯದಾಗುತ್ತದೆ., ಅವರು ಇಲ್ಲಿಗೆ ಬಂದಿದ್ದರಾ....??? ನನಗೆ ನೀನು ಏನೂ ಹೇಳಿಲ್ಲಾ ಅಂತ ಹೆಂಡತಿ ಹತ್ತಿರ ಮುಖ ಮಾಡುತ್ತ ಕೇಳುತ್ತಾನೆ. ಅವಳು ತನಗೇ ತಿಳಿದಿಲ್ಲ ಅನ್ನುವ ಹಾರು ಉತ್ತರ ಕೊಡುತ್ತಾಳೆ..!ಸರಿ ದೊಡ್ಡವ್ವ ಏನಂತ ಹೇಳಿದರು...ನೀನು ನಿನ್ನ ಹೆಂಡತಿಗೆ ತುಂಬಾ ತ್ರಾಸು ಕೊಡುತ್ತಿ ಅಂತೆ ಅವಳಿಗೆ ಚಾಕೊಲೇಟು, ಚಿಪ್ಸು ಹಪ್ಪಳ ತಿನ್ನಲು ಬಿಡುವುದಿಲ್ಲವಂತೆ ಇದರಿಂದ ಅವಳಿಗೆ ತುಂಬಾ ಹಿಂಸೆ ಆಗುತ್ತೆ ಅಂತೆ ಹೇಳುತ್ತಾರೆ. ಹೌದಾ ಇಲ್ಲೇ ಇದ್ದಾಳಲ್ಲ ಇವಳಿಗೆ ಕೇಳಿ ನಾನು ಈ ವಿಷಯವಾಗಿ ಏನನ್ನು ಹೇಳುವುದಿಲ್ಲ ಅನ್ನುತ್ತಾನೆ. ಏನಮ್ಮ ನೀನು ನಿನ್ನ ಗಂಡನಿಗೆ ಮೇಲೆ ನಿಮ್ಮ ಮನೆಯವರ ಮುಂದೆ ದೂರು ನೀಡಿದ್ದು ನಿಜಾನಾ ? ಅಯ್ಯೊ ಆಂಟಿ ನಾನು ಹಾಗೆ ಹೇಳಿಯೇ ಇಲ್ಲ ಅಂದಳು.. ( ಓದುಗರೇ ಒಂದು ವಿಷಯ ಗಮನಿಸಬೇಕು..ಈ ತರಹ ವಿಜಯನ ಮೇಲೆ ದೂರು ಹೇಳುವುದು ಇವರ ಮನೆಯ ಕೆಟ್ಟ ಬುದ್ದಿನಾ ಅಥವಾ ಅವನ ಹೆಂಡತಿಯ ಕೆಟ್ಟು ಬುದ್ದಿಯಾ ? ) ವಿಜಯನು ಯೋಚನೆಯಲ್ಲಿ ಮುಳುಗುತ್ತಾನೆ..ನನ್ನ ಬಗ್ಗೆ ದೂರು ನೀಡಲು ಇವಳೆ ಕಾರಣವಿರಲೇಬೇಕು.., ಬೆಂಕಿ ಇರದೇ ಹೊಗೆ ಆಡುವುದಿಲ್ಲ, ಹೆಂಡತಿಯ ಈ ಮಸಲತ್ತು ಗಂಡನಿಗೆ ತಿಳಿಯದೇ ಹೋಗುತ್ತದೆ. ಅದಕ್ಕೆ ಅವ್ವಾ ನೋಡವ್ವಾ  ವಿಜಯನ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ, ಅವನು ನನ್ನ ಕೈಯಲ್ಲಿ ಬೆಳೆದ ಮಗ,ಆವನ ಒಂದೊಂದು ಸ್ವಭಾವದ ಬಗ್ಗೆ ನನಗೆ ತಿಳಿದಿದೆ, ಅವನು ಸ್ವಲ್ಪ ಮಟ್ಟಿಗೆ ಮುಂಗೋಪತನವಿದೆ ಆದರೆ ಯಾರನ್ನಾದರೂ ಹಿಂಸಿಸುವುದು ಅಥವಾ ತೆಗಳುವುದು ಅವನ ಜಾಯಮಾನವೇ ಅಲ್ಲ. ನಿಮ್ಮ ಮನೆಯವರು ಇಂತಹ ಸಣ್ಣ ವಿಷಯಗಳನ್ನು ತಂದು ನಮ್ಮ ಮುಂದೆ ಹೇಳುವ ಅವಶ್ಯಕತೆ ಇರಲಿಲ್ಲ. ನೀವು ಇಬ್ಬರೂ ವಿದ್ಯಾವಂತರು ನಿಮ್ಮ ಜೀವನದ ಬಗ್ಗೆ ಹಾಗು ರೂಪಿಸಿಕೊಳ್ಳುವುದರ ಬಗ್ಗೆ ಯೋಚಿಸಿ ವಿನಃ ತಂದೆ ತಾಯಿಯರನ್ನು ಮದ್ಯಸ್ತಿಕೆ ತರಬೇಡಿ. ನಾನು ಅವರಿಗೂ ಸಹ ಅದೇ ಹೇಳಿ ಕಳಿಸಿದ್ದೇನೆ, ನವ ದಂಪತಿಗಳಿಗೆ ಅವರ ಪಾಡಿಗೆ ಅವರನ್ನ ಬಿಟ್ಟು ಬಿಡಿ, ಅವರ ಜೀವನ ಅವರು ರೂಪಿಸಿಕೊಳ್ಳುತ್ತಾರೆ. ಸರಿ ಸಂಜೆಯ ಚಾಹಾದ ಸಮಯವಾಯಿತು, ಚಾಹ ಕುಡಿದವರೆ ಮನೆಯ ಕಡೆ ವಿಜಯ ಮತ್ತು  ಅವನ ಹೆಂಡತಿ ಪ್ರಯಾಣ ಬೆಳೆಸುತ್ತಾರೆ. ನಾವು ನಮ್ಮಷ್ಟಕ್ಕೆ ಚೆನ್ನಾಗಿಯೇ ಇದ್ದಿವಿ, ಇವಳ ತಾಯಿ ಭಾವನಿಗೆ ಅಕ್ಕನಿಗೆ ಏನ್ ಆಗಬೇಕಿತ್ತು ಅನ್ನುವ ವಿಷಯ ಕಾಡತೊಡಗುತ್ತದೆ. ಅಲ್ಲಿಗೆ ನವ ದಂಪತಿಗಳ ನಡುವೆ ಹುಡುಗಿಯ ತಾಯಿ ಹಾಗು ಬಳಗದವರು ವೈರಿಗಳ ಹಾಗೆ ಕಾಡತೊಡಗುತ್ತಾರೆ. ಪದೇ ಪದೇ ಪೊನು ಮಾಡಿ ಹುಡುಗಿಯ ಕಿವಿಯ ಊದುವಿಕೆ ಪ್ರಾರಂಭವಾಗುತ್ತದೆ. ಇವರ ಮನೆಯಲ್ಲಿ ಜಗಳಗಳು ಶುರುವಾಗತೊಡಗುತ್ತವೆ. ವಿಜಯ ಹೆಂಡತಿಯ ಕುರಿತು ನೀನು ಏನನ್ನೂ ಹೇಳದೆನೇ ನಿನ್ನ ಮನೆಯವರು ನಮ್ಮ ದೊಡ್ಡವ್ವನವರ ಮನೆಗೆ ಹೋಗಲು ಸಾಧ್ಯವಿಲ್ಲ.., ಹೋದರೆ ಹೋಗಲಿ ಆದರೆ ಸುಳ್ಳು ಸುಳ್ಳು ದೂರುಗಳು ನನ್ನ ಮೇಲೆ ಹೇಳುವುದಂದರೇನು..? ನೀನು ನನ್ನ ಜೊತೆ ಬಾಳೆಬೇಕಾದವಳು ನನ್ನ ಬೆನ್ನ ಹಿಂದೇನೇ ಚೂರಿ ಹಾಕುತ್ತಿರುವೆಯಲ್ಲಾ, ಏನು ಇದೆ ನಿನ್ನ ಮನದಲ್ಲಿ " ನನಗೆ ನಿನ್ನ ಜೊತೆ ಬಾಳಲು ಇಷ್ಟವಿಲ್ಲ ಅನ್ನುವ ಅರ್ಥ ಹಾಗು ನನಗೆ ಕಳಿಸಿಕೊಡು ಅನ್ನುವ ಅರ್ಥ ನನಗೆ ಸ್ವಲ್ಪ ಮಟ್ಟಿಗೆ ತಿಳಿಯುತ್ತಿದೆ ಅನ್ನುತ್ತಾನೆ. ವಿಜಯನ ಮನಸ್ಸಿಗೆ ಶಾಂತಿಯೇ ಇಲ್ಲದಂತಾಗುತ್ತದೆ. ದಿನಗಳು ಕಳೆದಂತೆ ಮರೆತು ಮತ್ತೆ ಸುಖದಿಂದ ಬಾಳ ತೊಡಗುತ್ತಾರೆ...ಆದರೆ ಬೆನ್ನ ಹಿಂದೇನೆ ಹೆಂಡತಿ ಆಡುತ್ತಿರುವ ಕ್ರೂರ ಕೃತ್ಯದ ಬಗ್ಗೆ ವಿಜಯನಿಗೆ ಅರಿವೆಯೇ ಇರುವುದಿಲ್ಲ. ಹೆಂಡತಿಯ ಹೆಜ್ಜೆಗಳು ತುಂಬಾ ನಿಗೂಢವೆನ್ನಿಸಲು ಪ್ರಾರಂಭವಾದಾಗ...ಒಂದು ದಿನ ಹೆಂಡತಿಯು ತನ್ನ ಕಚೇರಿಯವರಾದ ಗೆಳತಿಯನ್ನು ಮನೆಗೆ ಕರೆತರುತ್ತಾಳೆ. ಸಹಾಯ ಬಯಸಿಬಂದ ಆಕೆ ವಿಜಯನ ಕುರಿತು ನಾನು ಕೂಡ ಹೊಸತಾಗಿ ಮದೆವೆ ಆಗಿದ್ದೇನೆ, ಮನೆ ಹುಡುಕುವುದಕ್ಕೆ ಹಾಗೆ ಮನೆಗೆ ಅನಿಲದ ಗ್ಯಾಸು ತೆಗೆದು ಕೊಳ್ಳಲಿಕ್ಕೆ ಸಹಾಯ ಮಾಡಿ ಎಂದು ಕೇಳುತ್ತಾಳೆ. ಹೆಂಡತಿಯ ಗೆಳತಿಗೆ ಎಲ್ಲಾ ತರಹದ ಮಾಹಿತಿ ಕೊಟ್ಟು ಸಹಾಯ ಮಾಡುತ್ತಾನೆ, ಸಂತೋಷಗೊಂಡು ಅವಳು ಧನ್ಯವಾದ ಅರ್ಪಿಸಿ ಮನೆಗೆ ಮರೆಳುವ ಮುನ್ನ, ನಿಮ್ಮಿಂದ ತುಂಬಾ ಉಪಕಾರವಾಯಿತು ಮತ್ತೊಂದು ಸಲ ನನ್ನ ಗಂಡನನ್ನ ಕರೆ ತರುವೆ ಅವರಿಗೆ ಕೂಡ ಸ್ವಲ್ಪ ಮಾಹಿತಿ ಬೇಕಂತೆ ಸಹಾಯ ಮಾಡಿ ಎಂದು  ವಿನಂತಿಸಿಕೊಳ್ಳುತ್ತಾಳೆ. ಪರರರಿಗೆ ಸಹಾಯ ಮಾಡುವುದರಲ್ಲಿ ಏನು ಸಂತೋಷ ಹಾಗು ನೆಮ್ಮದಿ ಇರುತ್ತದೆ ಎಂದರೆ ವಿಜಯನ ತರಹದ ಹುಡುಗನನ್ನು ನೋಡಿ ಕಲಿಯಬೇಕು ಅನ್ನಿಸಲ್ಲವೇ..? ಕೆಲವರಿಗೆ ಅನಿಸಲಿಲ್ಲ ಅಂದರೂ ತಪ್ಪೇನಿಲ್ಲಾ ಬಿಡಿ...! ಹೆಂಡತಿಯ ಗೆಳತಿ ತುಂಬಾ ಜೋರು ಹಾಗೆ ಮನುಷ್ಯರನ್ನು ಒಂದೇ ನೋಟದಲ್ಲಿ ಹೀಗೆ ಎಂದು ತಿಳಿದುಕೊಳ್ಳುವ ಚಾತುರತೆ ಹೊಂದಿದವಳಾಗಿದ್ದಳು,ಹಾಗೆಯೇ ಅವಳ ಗಂಡ ಕೂಡ...ಭಾರಿ ಸೌಮ್ಯ ಸ್ವಭಾವದವ. ಆಗಾಗ ಇವರ ಮನೆಗೆ ಅವರು ಬರುವುದು ಅವರ ಮನೆಗೆ ಇವರುಗಳು ಹೋಗುವುದು ನಡಿದೇ ಇರುತ್ತದೆ. ಗೆಳೆಯತನ ಹೀಗೆ ತಾನೆ ಬೆಸೆಯುವುದು. ಈ ಗೆಳತಿಯ ಪಾತ್ರ ಮುಂದೆ ಮತ್ತೆ ಬರುತ್ತದೆ, ಮತ್ತೆ ಹೇಳುತ್ತೆನೆ. ಇಲ್ಲಿ ವಿಜಯನ ಹೆಂಡತಿ ಇಷ್ಟೊಂದು ಮುಚ್ಚು ಮರೆ ಮಾಡುತ್ತ ತನ್ನ ಮನೆಯವರ ಜೊತೆ ಸೇರಿ ಏನೋ ಪ್ಲಾನು ಮಾಡುತ್ತಿರುತ್ತಾಳೆ. ಮುಗ್ಧ ಗಂಡ ಇವೆಲ್ಲ ವಿಷಯಗಳಿಂದ ಬಹಳ ದೂರದಲ್ಲಿರುತ್ತಾನೆ, ಅವನಿಗೆ ಪರಿಸ್ಥಿತಿಯ ಪರಿವೇಯೇ ಇರುವುದಿಲ್ಲ.  ಒಂದು ದಿನ ಹೆಂಡತಿ ಮನೆಗೆ ಬಂದು ಕೈ ಕಾಲು ತೊಳೆದು ಅಡುಗೆ ಮಾಡಲು ಅಡುಗೆ ಮನೆ ಸೇರುತ್ತಾಳೆ, ಗಂಡ ಪೇಪರ್ ಓದುತ್ತಾ ಕುಳಿತ್ತಿರುತ್ತಾನೆ ತಟ್ಟನೆ ಅಲ್ಲಿಯೇ ಇಟ್ಟ ಅವನ ಹೆಂಡತಿಯ ಮೊಬೈಲಿಗೆ ಒಂದು ಮೆಸೇಜು ಬಂದು ಬೀಳುತ್ತದೆ...ಕೈಗೆತ್ತಿಕೊಂಡ ಗಂಡ ನೋಡಿದರೆ ಒಬ್ಬ ಹುಡುಗನ ಮೆಸೇಜು ಅದು, " Why are you not talking to me ? Till today you have used me and now you are not at all seeing me. I want to talk to you please call me  " ಗಂಡ ಹೇ ಯಾರದಿದು ಮೆಸೇಜು ಎನ್ ಏನೋ ಹುಚ್ಚರ ಹಾಗೆ ಕಳಿಸಿದ್ದಾನೆ..., ಅವನಿಗೆ ಚೆನ್ನಾಗಿ ಹೇಳಿ ಬಿಡು ಇನ್ನ ಮೇಲೆ ಇಂತಹ ಸಂದೇಶಗಳನ್ನು ಕಳಿಸಬೇಡವೆಂದು ಸುಮ್ಮನಾಗುತ್ತಾನೆ. ( ಅಯ್ಯೊ ಈ ಮಂಕು ಬುದ್ದಿಯ ವಿಜಯ....ಪಾಪ ಒಳ್ಳೆಯದನ್ನೆ ಯೋಚಿಸುವವನು ) ಮತ್ತೊಂದು ಸಲ ಕಚೇರಿಯ ಹುಡುಗ ಕಾಲ್ ಮಾಡುತ್ತಾನೆ, ಕಾಲ್ ರಿಸೀವ್ ಮಾಡಿದ ಗಂಡನಿಗೇನು ಗೊತ್ತು ಯಾರು ಅಂತ, ಪಾಪ ವಿಜಯ.....ಯಾರು ಸಾರ್ ತಾವು ಏನ್ ಬೇಕಿತ್ತು ಅಂದಿದ್ದಷ್ಟರಲ್ಲಿ ಪಟಕ್ಕನೆ ಬಂದು ಕಸಿದು ಕೊಳ್ಳುತ್ತಾಳೆ...ಅಯ್ಯೊ ಅವರು ನಮ್ಮ ಯಜಮಾನರು ಅವರಿಗೆ ಬುದ್ದಿ ಇಲ್ಲಾ ಅಂತ ಹೇಳುತ್ತಾಳೆ. ( ಪರ ಗಂಡಸಿನ ಮುಂದೆ ಹೆಂಡತಿ ಆದವಳು ಗಂಡನಿಗೆ ಕೊಡುವ ಮರ್ಯಾದೆ ನೋಡಿದ್ದಿರಾ ಗೆಳೆಯರೆ ??) ಇವಳ ಬಾಯಲ್ಲಿ ಬರೀ ಕಚೇರಿಯ ಹುಡುಗರದೇ ಮಾತು...ಒಬ್ಬ ಹುಡುಗನ ಮಾತುಗಳು ಇವಳಿಗೆ ಇಷ್ಟ, ಒಬ್ಬ ಹುಡುಗನ ಹೇರ್ ಸ್ಟೈಲ್ ಇವಳಿಗೆ ಇಷ್ಟ, ಒಬ್ಬ ತೊಡುವ ಅಂಗಿ ಇವಳಿಗೆ ಇಷ್ಟ, ಒಬ್ಬ ನಡಿಯುವ ಬಂಗಿ ಇವಳಿಗಿಷ್ಟ...ಹೀಗೆ ಒಂದು ಸಾರಿಯಾದಳು ಗಂಡನಿಗೆ ಹೇಳಿದ ಸನ್ನಿವೇಷಗಳೇ ಇರಲಿಲ್ಲ. ನೋಡು ಪ್ರೀಯೆ ನೀನು ಈಗ ಗೃಹಿಣಿ ಪರ ಗಂಡಸರಿಂದ ಸ್ವಲ್ಪ ದೂರವಿದ್ದಷ್ಟು ಒಳ್ಳೆಯದು ಅಂತ ಬುದ್ದಿವಾದ ಹೇಳುತ್ತಾನೆ ಆದರೆ ಆ ಹೆಂಗಸು ಅದನ್ನ ಕಿವಿಗಳಿಗೇ ಹಾಕುವುದಿಲ್ಲ...ಅವಳ ಆಟ ಮುಂದುವರೆದೇ ಇರುತ್ತದೆ..... ಇವಳ ಕ್ಯಾರೆಕ್ಟರ್ ಬಗ್ಗೆ ನಿಮಗೆ ಸ್ವಲ್ಪ ಮಟ್ಟಿಗೆ ತಿಳಿದಿರಬೇಕಲ್ಲವೆ ಇಲ್ಲಿಯತನಕ. ಸರಿ ನಮ್ಮ ವಿಜಯನಿಗೆ ಏನೂ ಬೇಜಾರಿಲ್ಲಾ ಬಿಡಿ ಯಾಕೆಂದರೆ ಅವನು ಒಬ್ಬ ಜೆಂಟಲ್ ಮ್ಯಾನ್ ಒಬ್ಬ ಮಾದರಿ ಅಭಿಯಂತರ, ತನ್ನ ಕಚೇರಿಯಲ್ಲಿ ಒಳ್ಳೆಯ ಕೆಲಸಗಾರ ಅನ್ನುವ ಹೆಸರು. ಇವಳದು ಇನ್ನೂ ಬಲಿತ ಬುದ್ದಿಅಲ್ಲ ಅಂತ ಕ್ಷಮಿಸಿಬಿಟ್ಟಿದ್ದ......ಆದರೇ ಅಲ್ಲೆ ಆಗಿದ್ದು ಎಡವಟ್ಟು.....ಅವಳ ಹಿಂದಿನ ಚರಿತ್ರೆ ಅವನಿಗೆ ಇನ್ನೂ ಮೇಲೆ ಹಂತ ಹಂತವಾಗಿ ತಿಳಿಯಲಾರಂಬಿಸುತ್ತದೆ...!  ( ಮುಂದೆವರೆಯುವುದು....)

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...