
ಮೊದಲ ದಿನ ಕಂಡೊಡನೆ ಚಿಗುರಿತು ಪ್ರೀತಿ
ಇವಳಿಗಾಗಿಯೇ ಕಾಯುತ್ತಿದ್ದೆನೋ ಅನ್ನೂ ರೀತಿ !
ಮನ ಮೆಚ್ಚಿತು ಇವಳ ಸೌಮ್ಯತನ,
ಹೃದಯ ಮುಟ್ಟಿತು ಇವಳ ಗುಣ !
ನಾನು ಇಷ್ಟ ಪಡುವುದೇ ಇಕೆಗೂ ಇಷ್ಟ,
ನನಗೆ ಬೇಡವೆಂಬುದು ಆಕೆಗದು ದೂರ !
ಸುಂದರ ಭವಿಷ್ಯ ಕಾಣುತಿಹುದು ಕಣ್ಣ ಮುಂದೆ,
ನನ್ನ ಮನಸ್ಸು ಸುತ್ತುತ್ತಿರುವುದು ಬರಿ ಅವಳ ಹಿಂದೆ !
ನಾಲಿಗೆಗೆ ಅವಳ ಹೆಸರು ಗುಣುಗುವುದೇ ರೋಮಾಂಚನ,
ಕಣ್ಣು ಅವಳ ಮುಖವ ನೆನೆಯಲು ನಡೆಸಿದೆ ನರ್ತನ !
ದಿನೇ ದಿನೇ ಹೆಚ್ಚುತ್ತಿರುವುದು ಬಯಕೆ,
ಇವಳೇ ಆಗಬೇಕು ನನ್ನಾಕೆ..!
No comments:
Post a Comment