
ಹೊಸ ಅನುಭವಕೆ ಇಂದು ಆರಂಭ..
ಆಡಿದ ಮಾತಿಗೆ ಎದಿರು ನೋಡುತ ...
ದಾರಿ ತೋರಿಸಿ ಅಂದಳು ನಸು ನಗುತ್ತ..!
ಬಾ ಎಂದು ಕರೆದುಕೊಂಡು ಹೊರಟೆ ..
ಅವಳ ಮೊಗಕೆ ಆ ನಗುವೇ ಚಂದ
ಅಧರದ ಧ್ವನಿಗೆ ಮಹದಾನಂದ ...!
ಜೊತೆ ಜೊತೆಯಲಿ ...
ನಡೆದಿರುವ ಆ ಕ್ಷಣದಲಿ ....
ನವೀನ ಭಾವಗಳ ಹೆಣೆಯುತಿರಲಿ ...!
ಹೊಸ ಅನುಭವ ಸವೆಯಲು....
ಆ ಸಮಯವೇ ಸಾಲದು ಎಂದೂ..
ಮೂಡಲಿ ಅನುಕ್ಷಣ ಸವಿಯಾದ ಬಂಧ ...!
ಕನಸಿನ ಮನೆಯ ಕಟ್ಟಲು...
ಪ್ರೀತಿ ಬಾಂಧವ್ಯ ಮುಟ್ಟಲು...
ನನಗೆ ನಿ ಅಣಿಯಾಗು.. ಜೊತೆಗೆ, ಹೆಜ್ಜೆ ಇಡಲು ...!!
No comments:
Post a Comment