Tuesday, October 23, 2012

ಪ್ರೀತಿ ಉಕ್ಕುತಿದೆ ..

ನಿನ್ನ ಜೊತೆ ನಡೆದ ಹಾದಿ
ಕಲ್ಲು ಮುಳ್ಳುಗಳು ಇದ್ದರೂ ಹೂವು ಹಾಸಿದಂತಾಗಿ
ಜೊತೆ ಜೊತೆಯಲ್ಲಿ ಸವೆದ ಕ್ಷಣಗಳು ಒಂದಾಗಿ
ಮುದ ನೀಡುತಿವೆ ಮನಸಿಗೆ ತಂಗಾಳಿಯಾಗಿ.. , ಪ್ರೀತಿ ಉಕ್ಕುತಿದೆ..!

ನಿನ್ನ ಅಂದ ಚಂದಕೆ ಬೆರಗು ನಾನಲ್ಲ
ಯಾವ ಐಶ್ವರ್ಯದ ಹಂಗು ನನಗಿಲ್ಲ
ನಿನ್ನ ಗುಣಕೆ ತಲೆ ಬಾಗಿಹೆ ನಲ್ಲ
ನಿನ್ನ ಸುಖಾಗಮನವೇ ನನದೆಲ್ಲ , ಬಯಸಿ ಬಯಸಿ ಪ್ರೀತಿ ಉಕ್ಕುತಿದೆ..!

ನಿನ್ನ ಹಣೆಗೆ ಒಂದು ಅಕ್ಕರೆಯ ಮುತ್ತಿಡಲೇ
ನಿನ್ನ ಕಣ್ಣ ಹನಿಗಳ ಇಂಗಿಸಿ ಕುಡಿಯಲೇ
ನನ್ನ ಹೃದಯದ ಗೂಡಿನಲ್ಲಿ ನಿನ್ನ ಬಚ್ಚಿಡುಲೇ
ಅನುದಿನವು ಮುದ್ದಿಸಿ ಸ್ನೇಹ ಬೆಸೆಯುಲೇ..,ನನ್ನ ಒಡಲೊಳು ಪ್ರೀತಿ ಉಕ್ಕುತಿದೆ..!

Friday, October 12, 2012

ನಿನ್ನ ಮಾತುಗಳು ಅನಾವಶ್ಯಕ ಅಂದ ನಲ್ಲೆಗೆ....

ನಿನ್ನ ಮಾತುಗಳು ಅನಾವಶ್ಯಕ ಅಂದ ನಲ್ಲೆಗೆ.... 
ನಾನು ಕೊಟ್ಟ ಉತ್ತರ " ಧೀರ್ಘ ಅನಿರ್ದಿಷ್ಟಿತ ಮೌನ "
ಇನ್ನು ಮೇಲೆ ತೆರೆಯುವುದೇ ಇಲ್ಲಾ ನನ್ನ ಬಾಯಿನ 
ನೀನಿಟ್ಟ ಹರಿತಾದ ಬಾಣ ನಾಟಿದೆ ನನ್ನ ಹೃದಯವನ್ನ  
ಮೂಕ ಮಾಡಿಸಿದೆ ಎನ್ನ , ಇನ್ನು ಬರಿ ಸ್ಮಶಾಣ ಮೌನ 

Thursday, October 11, 2012

ನಾಮಕರಣ


ನಾ ಚಿನುಕುರುಳಿ ಕಂದ


ಹುಟ್ಟುತ್ತಲೇ ಹಂಚಿದೆ ಆನಂದ

ಅಮ್ಮನ ಮಡಿಲೆ ನನಗೆ ಬೃಂದಾವನ

ಅಪ್ಪನ ಹೆಗಲೇ ನನ್ನ ವಾಹನ

ಅಜ್ಜಿ, ತಾತ, ಬಂಧು ಮಿತ್ರರೆಲ್ಲ ಒಟ್ಟಾಗಿ ಯೋಚಿಸಿ ಇನ್ನ  

ಪುಟ್ಟ ಪುಟ್ಟ ಹೆಜ್ಜೆ ಇಡುವ ಮುನ್ನ

ಏನೆಂದು ಕೂಗಿವಿರಿ ಹೇಳಿ ನನ್ನ ?

.

Tuesday, October 09, 2012

ನನ್ನ ಮೊದಲ ಪ್ರೀತಿ





ಕಣ್ಣು ಹೊಳೆವ ಚಿಗುರೆಯ ಅಣು

ಅಗಲದ ಹಣೆಯೇ ಅವಳಿಗೆ ಭೂಷಣ

ಕುಕ್ಕುತಿವೆ ಹುಬ್ಬುಗಳ ನುಣುಪಾದ ಬಾಣ

ಮೆತ್ತಗೆ ಹಾಸಿಗೆಯಂತ ಅವಳ ಕಾಲ್ಗುಣ

ಜೊತೆ ಜೊತೆಯಲಿ ಅವಳ ನಡುಗೆ ಸುಖದ ಪ್ರಯಾಣ

ಜೀವನದ ಏರಿಳಿತದಲೂ ತೋರುವಳು ಅವಳು ಸೌಮ್ಯ ಗುಣ

ದಿನ, ಮಾಸಗಳು, ಕಳೆಯುತಲಿ ಇವಳೊಡನೆ , ಇವಳಾದಳು ನನ್ನ ಪಂಚಪ್ರಾಣ

ನನ್ನ ಮೊದಲ ಪ್ರೀತಿಯೇ ಇವಳು ...ನನ್ನೊಲುಮೆಯ ಕಾರು .



***ಭಾವಪ್ರಿಯ***

Wednesday, October 03, 2012

ಮದುವೆ ಎಂದರೆ ಕೆಲವರಿಗೆ ...





ವಯಸ್ಸಿಗೆ ಬಂದ ಹುಡುಗ-ಹುಡುಗಿಯರಿಗೆ ಅದು ಮೋಜು

ಹುಡುಗಿಯರ ದೃಷ್ಟಿಯಲಿ ಗಂಡ ಒಂದು ಏಟಿಎಂ ಕಾರ್ಡು

ಚಿನ್ನ ವಜ್ರ ವೈಡುರ್ಯಗಳ ಕೊಡಿಸಲು ಒಂದು ಕ್ರೆಡಿಟ್ ಕಾರ್ಡು

ತನ್ನ ಜೀವ ಕಾಪಾಡಲು ಬೇಕಾಗುವ ಒಂದು ಬಾಡಿ ಗಾರ್ಡು.



ತಂದೆಯ ಮನೆಯಲ್ಲಿ ಸಿಗದ ಸುಪ್ಪತ್ತಿಗೆ ಬಯಸುವ ತಾಣ

ಗಂಡನನ್ನು ಮುಷ್ಟಿಯಲ್ಲಿ ಇಡಲು ಹೂಡುವಳು ತನ್ನ ಮೋಹದ ಬಾಣ

ಬಾರದೆ ಹೋದಲ್ಲಿ., ತೋರುವವಳು ತನ್ನ ನಿಜವಾದ ಬಣ್ಣ

ಎಲ್ಲದರಲ್ಲೂ ಸೋತರೆ, ಶುರುವಾಗುವುದು ಹೊಸ ರಾಮಾಯಣ..!



ಸಣ್ಣ ಪುಟ್ಟ ಜಗಳಗಳಿಗೆ ತ್ವರೆದು ಗಂಡನನ್ನ

ಮರೆತೇ ಬಿಡುವರು ಮದುವೆಯ ಸಮಯದಲ್ಲಿ ಮಾಡಿದ ಪ್ರತಿಜ್ಞ

ಆಫೀಸಿನ ಕೆಲಸ ಮಾಡುವವರಿಗೆ..,ಮಾತನಾಡಿಸುವುದು ಹಣ

ಸಂಸಾರ ತೊರೆದು ನಡೆಸುವರು ಶ್ವೆಛ್ಚಾಚಾರದ (ಹಾದರದ) ಜೀವನ ..!

-------------------------------------------------------------------------



ಹುಡುಗನ ದೃಷ್ಟಿಯಲಿ ಹೆಂಡತಿ ಒಂದು ಮನೆಯ ಆಳು

ಗಂಡನ ಬೇಡಿಕೆಗಳ ಈಡೇರಿಸಲು ಸತತವಾಗಿ ದುಡಿಯುವ ಹುಳು

ಮನೆಯ ಶುಚಿಗೊಳಿಸುತ್ತ, ಗಂಡ-ಮಕ್ಕಳಿಗೆ ಅಡುಗೆ ಮಾಡಿ ಬಡಿಸುವವಳು

ಕಾಣದು ಅವನಿಗೆ ಹೆಂಡತಿಯ ನೋವಿನ ಗೀಳು..!



ಇನ್ನು ಕೆಲವರಿಗೆ.., ಹೆಂಡತಿ ತರಬೇಕು ಆಸ್ತಿ ಪಾಸ್ತಿ ಜೋರು

ನಿವೇಶನ , ಕಾರುಗಳ ಬೇಡಿಕೆಗಳು ಸಾಲು ಸಾಲು

ಸಿಗದೇ ಹೋದಲ್ಲಿ ., ಹೆಂಡತಿಗೆ ಶುರು ಕಿರಿ-ಕಿರಿ ನೂರು

ಪಾಪ., ಅವಳಿಗೆ ಜೀವನವೇ ಜಿಗುಪ್ಸೆಯ ತೇರು !



ಹೆತ್ತವರ ಅಗಲಿ ಬಂದ ಹುಡುಗಿಗೆ ತೋಚದು ಇನ್ನೇನು

ನಂಬಿ ಬಂದ ಗಂಡನೇ ತೋರುವುದಿಲ್ಲ ಪ್ರೀತಿ ಚೂರು

ತನ್ನ ಬಯಕೆ ಬವಣೆಗಳ ಕೇಳುವವರಿಲ್ಲದೇ ಹರಿಸುತಿರುವಳು ಕಣ್ಣೀರು

ಮಾಗಿ ಹೋದ ಜೀವನ ನಡಿಸಲಾರದೆ ತಾನೆಯೇ ಕೊನೆಯಾದಾಳು..!


*** ಭಾವಪ್ರಿಯ***





Sunday, September 30, 2012

ಗೆಳತಿ

ಕಾಡ ಬೇಡ ಗೆಳತಿ 
ಬೇರ್ಯಾರಿಲ್ಲ  ನನ್ನ ಗೆಳತಿ
ಇದ್ದರೂ..., ಆಗಲಾರಳು  ನಿನ್ನ  ಸವತಿ  
ನನ್ನ ಮನಸಿನ್ಯಾಗ  ಯಾಕ  ತಣ್ಣೀರು  ಸುರಿತಿ   
ನೀನ... ನನ್ನ ಹೃದಯದ ಒಡತಿ 

ಮೌನವಾಗಿ ಓಡುತಿ ಯಾಕ ಚಿತ್ತ ಕದಡಿ 
ಬೆಂದು ಹೋಗತೇನಿ ನಾ ಒದ್ದಾಡಿ-ಒದ್ದಾಡಿ   
ನನ್ನ ಕ್ಷಣಗಳು ಕಳೆದಾವ ನಡು-ನಡುಗಿ 
ಆಗಬಾರದೇ ನೀ ನನ್ನ ಅಮೃತ ಗಡಗಿ .


***ಭಾವಪ್ರಿಯ***    

  

Friday, September 28, 2012

ಮೇಘ ಮಾಯೆ



ಮತ್ತೆ ಕವಿದಿದೆ ಕಪ್ಪು ಛಾಯೆ 
ಮತ್ತೆ ಹರಿಸ್ಯಾಳ ಹನಿ, ಮೇಘ ತಾಯೆ 
ಗೆಳತಿ ಇಳೆಯ ಸಿಟ್ಟು ಅಳಿಸಲಿಕ್ಕೆ 
"ಧೋ..." ಎಂದು ಸುರಿದಾಳೆ ಮೇಘ ಮಾಯೆ 

ಹರಿ-ಹರಿದು ಬರಲಿ ಅವಳ ಧಾರೆ 
ತುಂಬಲಿ ಹಳ್ಳ , ನದಿ , ಕಣಿವೆ, ಕೆರೆ 
ಹಸಿರು ಬಡಿಸಲಿ ಬಾಳೆಯಲೆಯಲೇ
ಹಸಿರನುಟ್ಟು ಬಸಿರಾಗು ನೀ ಧರೆ

ಮುಗಿಲು ನೋಡುತಿದ್ದ ರೈತರೇ 
ಹಾರಿ ಕುಣಿದಾಡಿ ಇಗಲೇ  
ಬೆಳೆಯ ಬೆಳೆಯಲು ಕರುಣಿಸಿಹಳು  ತಾಯೆ 
ಇನ್ನು ಸಂಕಷ್ಟಗಳು ಮಂಗ ಮಾಯೆ  

***ಭಾವಪ್ರಿಯ***


Monday, September 24, 2012

खामोश होगई है प्यार


बांध करके ह्रदय का द्वार 
इसको ना है किसीका इंतज़ार 
ना है इसको किसीसे ऐतबार 
खामोश होगई है प्यार  !

जो प्यार की भाषा ना समाज पाया वोह शायर  
कैसे हो उसको  किसीकी प्यार की खबर 
खोगाया है अँधेरे में होके बेखबर 
खामोश होगई है प्यार !

धड़कते अरमानो को छुपाकर
खुशिया सब भुलाकर 
जीवन की हर उम्मीद छोड़कर 
खामोश होगई है प्यार  !
 

Monday, September 17, 2012

ಮತ್ತೆ ಶುರುವಾಗಿದೆ ಓಟ

ಮತ್ತೆ ಶುರು ಮಾಡಿದೆ ಓಟ 
ಚಿಕ್ಕವರಿದ್ದಾಗ ಓಡಾಟವೇ ಆಟ 
ಬೆಳೆದು ಬೆಳೆಯುತ್ತಲೇ ವಿದ್ಯೆ ದೇವಿಯಡೆಗೆ ಓಟ 
ಮತ್ತೆ ಶುರುವಾಗಿದೆ ಓಟ 

ಪದವಿಧರನಾದ ಮೇಲೆ ಮುಗಿಯಲಿಲ್ಲ ಓಟ 
ಕೆಲಸ ಹುಡುಕುತ್ತಲೇ ಶುರುವಾಯಿತು.., ಮತ್ತೊಂದು  ಜಂಜಾಟ 
ಮಹಾನಗರಿಯಲ್ಲಿ  ಅಲೆದು, ಅಲೆದು, ಕಡೆಗೂ ಸಿಕ್ಕಿತೊಂದು ಆಸರೆಯ ಕೂಟ 
ಮತ್ತೆ ಶುರುವಾಗಿದೆ ಹೊಸದೊಂದು ಓಟ

ಬೆನ್ನಮೇಲೊಂದು ರೊಟ್ಟಿಯ ಬುತ್ತಿ 
ಹೊರೆಟೆವು ನಾನು  ಹಣದ ಬೆನ್ನಹತ್ತಿ.
ನೆಮ್ಮದಿ ಇರದ ಖುಷಿಯ ಮೆಟ್ಟಿ   
ತಪ್ಪದೆನಗೆ ಕಚೇರಿಯ ಕಾಟ 
ಮತ್ತೆ ಶುರುವಾಯಿತು ಓಟ    

ಹುಟ್ಟಿದಾಗಿನಿಂದಲೂ ಹೀಗೆಯೇ ಇದೆ ಓಟ 
ಒಮ್ಮೆ ನನಗಾಗಿ,  ಇನ್ನೊಮ್ಮೆ ನನ್ನ ಹಡೆದವರಿಗಾಗಿ  ಓಟ
ನನ್ನ ಆರೋಗ್ಯವ ಕಾಪಾಡಿಕೊಳ್ಳಲು,
ವರುಷಗಳ ನಂತರ ಮತ್ತೆ ಶುರುವಾಗಿದೆ ಓಟ.

***ಭಾವಪ್ರಿಯ***


 

Tuesday, September 11, 2012

ಬಾನ ಚಂದಿರ

ಚಂದ್ರ ತುಂಬಿದ ಬಾನ ತುಂಬಾ,
ಹಾಲಂತೆ ಚೆಲ್ಲಿದ ಬೆಳದಿಂಗಳ ಬೆಳಕ,
ತಂಗಾಳಿ ತೇಲಿತು ಭೂಮಿ ತುಂಬಾ,
ಸಾರಿತು ರಾಗ ತೋಟದ ಬಳಗ,
ಹೂಗಳ ಚೆಲ್ಲಾಟ ಇರುಳು ತುಂಬಾ,
ಮರೆಯಾದ ಚಂದ್ರ ಮೋಡದ ಒಳಗ.

Saturday, September 08, 2012


ಹೆದ್ದಾರಿ ಸುಂದರಿ

ಅಂಕು ಡೊಂಕಿನ ಮೈಮಾಟದ ಸುಂದರಿ,
ಉಬ್ಬು ತಗ್ಗುಗಳ ಒಯ್ಯಾರಿ,
ನಿನ್ನ ಮೇಲೆ ಹರಿದೊಡೆ ಎಬ್ಬಿತೋ ಧೂಳಿ !
ಉದ್ದಕ್ಕೂ, ಅಗಲಕ್ಕೂ, ಏಕೆ ಮರಿಮಾಚಿದೆ ನಿನ್ನ ಸಾರಿ ?
ಓಡಾಡುವ ಜನರು ನಿನ್ನ ಮೇಲೆ ಕೆಂಡಕಾರಿ,
ನಿನ್ನ  ಸುಧಾರಿಸುವವರು  ಹೌಹಾರಿ,
ಭರದಿಂದ ನಡೆದಿದೆ ನಿನ್ನ ಸಿಂಗರಿಸುವ ಕಾಮಗಾರಿ.

***ಭಾವಪ್ರಿಯ***

Monday, September 03, 2012

ಮಿಡಿಯುತಿದೆ ಹೃದಯ



ಚೆಲುವೆ ಕುಳಿತು ಬಿಡು ಹೀಗೆ ಮೌನವಾಗಿ 
ಹೃದಯದ ಮೌನವನ್ನೇ ಆಲಿಸುತ್ತಿರುವೆ ನಿನಗಾಗಿ 
ಮಾತುಗಳ ಬಿನ್ನಹಿಸಲಾರದ ಭಾವನೆಗಳಿಗಾಗಿ
ಮಿಡಿಯುತಿದೆ ಎನ್ನ ಹೃದಯ ನಿನ್ನ ಸಂತೈಸುವುದಕ್ಕಾಗಿ .

ಮನಸದು ನಿನ್ನ ಕಾಡುತಿಹುದು ನಾ ಅರಿಯೆ 
ಮೂಕ ರಾಗದಲಿ  ಹಾಡುತಿದೆ ನಾ ತಿಳಿದೆ
ಬೇಸರವ ದೂರ ಮಾಡಲು ವಿಧಾನವ ಹುಡುಕುತಿರುವೆ
ನಿನ್ನ ಮನದ ಡುಗುಡಕೆ ಎನ್ನ ಹೃದಯ ಮಿಡಿಯುತಿದೆ 

ಅಕ್ಕರೆಯ ತೋರಿಸಿದರೆ ನಿನಗೆ, ನೀ ತಪ್ಪಾಗಿ ತಿಳಿಯದಿರೆ 
ಸಹಾನುಭೂತಿ ಅಲ್ಲ ಅದು ನನ್ನ ಪ್ರೀತಿಯ ಸೆರೆ 
ಸ್ವಾಭಿಮಾನಿ ನೀ , ಧೈಯಶಾಲಿಯೂ ನೀ   
ನಿನ್ನ ಒಂಟಿತನವ ಹೋಗಲಾಡಿಸಲು ಮಿಡಿಯುತಿದೆ ಈ ಹೃದಯ 

ಬಯಸುತ್ತಿರುವ ಪ್ರೀತಿ, ನಿನಗೆ ದೊರಕದೆ 
ನೀ ಬಳಲುತ್ತಿರುವುದ ನಾ ಕಾಣಲಾರೆ
ಸುಮ್ಮನೆ ಕೂಡುವ ಗೆಳೆಯ ನಾನಲ್ಲೇ 
ನಿನ್ನ ಕಂಗಳಲಿ ಆನಂದ ಭಾಷ್ಪ ಕಾಣಲು ಈ ಹೃದಯ ಮಿಡಿಯುತಿದೆ.  

***ಭಾವಪ್ರಿಯ***

ಕನ್ನಡದ ಹುಡುಗಿ





ಕನ್ನಡದ ಹುಡುಗಿ ಈಗ ಬಲು ಜೋರು



ಮದುವೆಕೂ ಮುಂಚೆ ಇರಬೇಕು ಹುಡುಗನ ಬೈಕು ಕಾರು



ನಂತರ ಕೊಡಬೇಕು ಅವಳಿಗೆ ಮನೆಯ ಕಾರು ಬಾರು



ಪ್ರತಿ ವೀಕೆಂಡಿಗೂ ಕೊಡಿಸಬೇಕು ಒಡವೆಗಳು ನೂರಾರು



ಗಂಡನ ಜೇಬು ಚಿಂದಿ ಚೂರು ಚೂರು



ಆಮೇಲೆ ಅವನಿಗೆ ಗತಿಯೇ ನವ್ಯ ಬಾರು.



-ಭಾವಪ್ರಿಯ

Thursday, August 23, 2012

ಬಯಸಿದೆ  ಮನ ನಿನ್ನ....  ಸನಿಹಕೆ  ಬಾರೆ..!    

ಬಟ್ಟ ಬಯಲ ಆಗಸದಿ 
ಬೆಳ್ಳಿ ಮೋಡದಂತೆ ನಿನ್ನ ನಗು  
ಹನಿ ಹನಿ ಪೋಣಿಸಿ 
ಮಳೆಗರೆವ ನಿನ್ನ ಪ್ರೀತಿಯ ಸೊಬಗು 
ಚೆಲುವು ಸಿಹಿ ಹಂಚುತ್ತಿರುವ  ಮೆರಗು ಕಂಡು..,  ಬಯಸಿದೆ  ಮನ ನಿನ್ನ... ಸನಿಹಕೆ ಬಾರೆ 

ನಿನ್ನ ಒಲವು ಗೆಲ್ಲುವ ಪರಿ 
ನಾ ಅರಿಯದೆ ಹೋದೆ , ಸರಿ ..!
ಆದರೂ ನಿನ್ನ ಸೂಕ್ಷ್ಮ ಸನ್ನೆ ಸಾಕೆನಗೆ 
ನಿನ್ನ ಪಡಿಯದೇ ನಾ ಬದುಕಲಾರೆ 
ಹೃದಯದ ಪೇಚಾಟಕೆ  ಸುರಿ ನೀ ಅಮೃತ ಧಾರೆ .. ಬಯಸಿದೆ ಮನ ನಿನ್ನ... ಸನಿಹಕೆ ಬಾರೆ 

ಕೋಟಿ ಕೋಟಿ ಇಲ್ಲ ನನ್ನೆಡೆಗೆ 
ಆದರೂ ಕೋಟಿ ಶತಕೋಟಿ ಹರಿಸುವೆ ಒಲುಮೆ 
ಕಲ್ಲು ಮುಳ್ಳುಗಳು ಇರಲಿ ನನ್ನ ಪಾಡಿಗೆ 
ಸದಾ ಹೂ ಮಳೆಯ ಭೋರ್ಗರೆಸುವೆ ನಿನ್ನ ಹಾದಿಗೆ
ನನ್ನ ಬಾಹುಬಂಧನದೊಳು ಇರಿಸಿ  ಪ್ರೀತಿಸುವೆ .......ನಿನ್ನನ್ನೇ ಬಯಸಿದೆ ಮನ.... ಸನಿಹಕೆ ಬಾರೆ    


Thursday, July 19, 2012


ಕಣ್ಣು ಮುಚ್ಚಾಲೆ 

ಕಣ್ಣು ಕಣ್ಣಲ್ಲೇ, ಕಣ್ಣು ಮುಚ್ಚಾಲೆ 
ಕಣ್ಣ ಸನ್ನೆಯಲ್ಲೇ ಪ್ರೀತಿಯ ಓಲೆ 
ನವಿರು ಕಣ್ಣಗಳ  ಮೇಲೆ 
ಹಣೆಯ ಚುಂಬಿಸುವ ಮುಂಗುರುಳ ಮಾಲೆ
ಕೆಂಪು ತುಟಿಗಳ ಅಧರದ ಸೆಲೆ 
ಆ ಸುಳಿಗಳಲ್ಲಿ ಸಿಲುಕಿ ಜಾರಿಬಿಡಲೇ   
ತಂಪನೆಯ ಗಾಳಿಯ ಅಲೆ 
ಸೋಕಿದೆ ನಿನ್ನ ಮೃದು ಗಲ್ಲದ ಮೇಲೆ 
ಮೆಲ್ಲುಸಿರು ಗಾನಕೆ ಹಾರಿದೆ ನಿನ್ನ ಕೇಶದ ಬಲೆ 
ನಿನ್ನ ಅಂದಕೆ ಸೋಲದೆ, ನಾ ಹೇಗಿರಲಿ ಬಾಲೆ ?

Friday, July 13, 2012

ನಿನ್ನ ಗೆಜ್ಜೆ ಸದ್ದು ಕೇಳಿದಾಗಲೆಲ್ಲಾ ನಾ ಕವಿಯಾಗಬೇಕು ಅನ್ನಿಸುತ್ತದೆ 


ಆ ನಾದ ಕೇಳದೆ ಹೋದಲ್ಲಿ, ನನ್ನ ಮನಸು ಕಪಿಯಾಗುತ್ತದೆ...!
 
 ಭಾವಪ್ರಿಯ

Wednesday, July 11, 2012

ನಮ್ಮ ಕನ್ನಡದ ಬ್ಲಾಗು

ನಮ್ಮ ಕನ್ನಡದ ಬ್ಲಾಗು
ಒಂದು ಚಿಂತಕರ ಚಾವಡಿ
ಚಿಗುರು ಕನಸುಗಳಿಗೆ ಒಂದು ಮುನ್ನುಡಿ
ಅರಳುವ ಭಾವಗಳಿಗೆ ಒಂದು ಕೈಪಿಡಿ
ಮನಸಿನ ಭಾವನೆಯ ಹಂಚಿಕೊಳ್ಳಲು ದಿನಚರಿ

ನಮ್ಮ ಕನ್ನಡದ ಬ್ಲಾಗು
ನೊಂದ ಮನಸಿಗೆ ಸಾಂತ್ವನ ಹೇಳುವ ವೇದಿಕೆ
ಸೋತ ಮನಗಳಿಗೆ ಧೈರ್ಯ ತುಂಬುವ ತಾಣ
ಜಯ ಸಾಧಿಸಿದ ಹೃದಯಗಳಿಗೆ ಅಭಿನಂದಿಸುವ ವನ
ಗುರಿಯ ಮುಟ್ಟಲು ಹುರಿದುಂಬಿಸುವ ಬಣ

ನಮ್ಮ ಕನ್ನಡದ ಬ್ಲಾಗು
ನಗೆ ಹಂಚುವ ಹನಿಗವನ
ಉಲ್ಲಾಸ ನೀಡುವ ಪ್ರೀತಿಯ ಗಾನ
ಕವಿ ಕವಿಯಿತ್ರಿಯರ ಸುಮಧುರ ಪದಗಳ ನರ್ತನ
ಪ್ರೀತಿಯ ಹರಿಸುವ ಆನಂದನವನ

ಕನ್ನಡ ಬ್ಲಾಗಿನ ಹುಟ್ಟು ಹಬ್ಬದ ಪ್ರಯಯುಕ್ತ ......
ಪ್ರೀತಿಯಿಂದ ,
" ಭಾವಪ್ರಿಯ "

Monday, July 09, 2012


ಜೋಡಿ ಹಕ್ಕಿ

ಅಕ್ಕ ಪಕ್ಕದ ಮನೆಯ ಜೋಡಿ ಹಕ್ಕಿ
ಯಾರ ಹುಡುಕುವೆ ಹೆಕ್ಕಿಹೆಕ್ಕಿ
ಅತ್ತ, ಇತ್ತ , ಮೇಲೆ ಕೆಳಗೆ
 ಗೂಡಲಿ,  ಮರದಲಿ,
ಏನನ್ನು ನೋಡುತಿರುವೆ ಇಣುಕಿ ಇಣುಕಿ  ?

ಅತ್ತೆಗೊಂದು ಕಾಲ ..
ನೀನು ಅಂದು ನಗುತಿದ್ದೆ ನಿನ್ನ ವಂಚನೆ  ಸಾಧಿಸಿದಿ ಎಂದು...
ಇಂದು ನಾ ನಗುತಿರುವೆನಿನ್ನ  ವಂಚನೆಗೆ ಫಲವ ತಂದು...!

Saturday, July 07, 2012


ಅವ್ವ ನನಗ ಇಂತಹ ಹುಡುಗಿನ ಬೇಕ

ಸೀರಿ ಉಡಾಕ ಅಕೀಗ ಬರಬೇಕು
ಹಣಿಯಾಗ ಬೊಟ್ಟಿಡಬೇಕು
ತಲಿತುಂಬಾ ಹೂ ಮುಡಿದಿರಬೇಕು
ತಳಕು ಬಳುಕೋ ನಾಚುವ ಬಳ್ಳಿಯಾಗಿರಬೇಕು
ರೊಟ್ಟಿ ಮಾಡಕ ಬರಬೇಕು
ಮನೀನು ಸ್ವಚ್ಛಗ ಇಡಬೇಕು
ದೇವರ ಪೂಜೆ ಮಾಡಬೇಕು
ಗುರು ಹಿರಿಯರಲ್ಲಿ ಭಕ್ತಿ ಕೂಡ ಇರಬೇಕು
ಗಂಡನ ಮೇಲೆ ಅಭಿಮಾನವಿರಬೇಕು
ಅನುಕಾಲ ಪ್ರೀತಿ ಹರಿಸಬೇಕು
ನನ್ನ ಬಾಳ ಬೆಳಗುವ ನಂದಾದೀಪವಾಗಬೇಕು
ಅವ್ವ ನನಗ ಇಂತಹ ಹುಡುಗಿನ ಬೇಕ.

***ಭಾವಪ್ರಿಯ***

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...