Tuesday, November 12, 2019

ಹಚ್ಚು ಬಾರೋ ದೀಪವ


ಹಚ್ಚು ಬಾರೋ ದೀಪವ, ಹಚ್ಚು ಬಾರೋ....
ಗುಡಿಸಿ ಮನೆಯ, ಮನೆ ಅಂಗಳವ
ಶುಚಿಗೊಳಿಸಿ ಗೋಡೆಯ,
ಸುಣ್ಣ ಬಣ್ಣವ ಸಾರಿಸು ಬಾರೋ...
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ತಾಂಬ್ರದ ಬಿಂದಿಗೆಯ ಬೆಳಗಿ
ಮಾಲಿಂಗನ-ಅಮೃತ ಬಳ್ಳಿಯ ಸುತ್ತಿ
ಅರಿಶಿಣ ಕುಂಕುಮವ ಹಚ್ಚಿ ನೀರನು ತುಂಬಿ...
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ಜಗಲಿಯ ಮೇಲೆ ಬೆಳ್ಳಿ ದೀಪ
ಕಿಟಕಿಯ ಅಡಿಯಲ್ಲಿ ಹಣತೆಯ ದೀಪ
ತುಳಸಿಯ ಗೂಡಿಗೊಂದು ಹಿತ್ತಾಳೆಯ ದೀಪ...
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ಮನೆಯ ಹೆಬ್ಬಾಗಿಲಿಗೆ ತೋರಣ ಕಟ್ಟಿ
ಚೆಂಡು ಹೂವಿನ ಮಾಲೆ ತೊಡಿಸಿ
ಬಾಗಿಲ ಇಬ್ಬದಿಗೆ ಪಾಂಡವರ ಕೂಡಿಸಿ.....
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ಮಕ್ಕಳು ನಲಿದಾರು ಹೊಸ ಬಟ್ಟೆಯ ತೊಟ್ಟು
ಸಂತಸದಿ ಕುಣಿದಾರು ಸುಚಂದ್ರಿ ಕಡ್ಡಿ, ಪಟಾಕಿ ಸುಟ್ಟು
ಚಕ್ರದ ಮದ್ದಿಗೆ ಮನೆ ಮುಂದೆ ರಂಗೋಲಿ....
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ಬಡವರ ಪಾಲಿನ ಮಣ್ಣಿನ ಹಣತೆ
ಸಿರಿವಂತರ ಅಂತಸ್ಠಿನ ಬಂಗಾರದ ಬೆಳಕೆ..
ಮನೆಮನಗಳ ಬೆಳಗುವ ದೀಪಗಳ.....
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ದೀಪಗಳ ಹಬ್ಬವೇ ಬಲು ಸೊಗಸ್ಸು
ದೀಪಾವಳಿಂದಲೇ ಹೆಚ್ಚಿಸುವುದು ಹುಮ್ಮಸ್ಸು
ಬೆಳಗುತಿರಲಿ ದೀಪಗಳು ಹೆಚ್ಚಿಸುತ್ತಾ ವರ್ಚಸ್ಸು.....
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!!


No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...