ಅಪ್ಪು - ಮರೆಯದ ಚೇತನ
Monday, November 29, 2021
ಅಪ್ಪು - ಮರೆಯದ ಚೇತನ
ಆಶಯದ ನಮನ
ಆಶಯದ ನಮನ
Tuesday, August 10, 2021
ಡೊಂಬ್ರಾಟ
ಶುರುವಾಯಿತು ರಾಜಕಾರಣಿಗಳ ಡೊಂಬ್ರಾಟ ...
ಮಂತ್ರಿ, ಖಾತೆ, ಪದವಿಗಳಿಗೆ ಇವರ ಕಿತ್ತಾಟ,
ಸಿಹಿ ನೆನಪೆ ಸ್ನೇಹ....
Monday, January 25, 2021
ಆಶಾಕಿರಣ
ಬಿಗಿ ಹಿಡಿದ ಕುಪ್ಪಸದ ಉಸಿರು
ನಿಶ್ವಾಸವೂ ಕಠೀಣವಿಂದು
ಕಲ್ಮಶ, ವೈರಾಣು ಕೂಡಿದ ಗಾಳಿಯಲ್ಲಿ
ಉಸಿರಾಟವೇ ಕಷ್ಟ ಈ ಸಮಯದಲ್ಲಿ !
ಲಸಿಕೆ ಮೂಡಿಸಿದ ಭರವಸೆ
ಜವಾಬ್ದಾರಿ ಹೊರುವರು ಯಾರಿಲ್ಲಿ ?
ಆರೋಗ್ಯವಾಗಿದ್ದ ಮನುಷ್ಯ ಇಂದು
ತಡೆಮದ್ದಿನಿಂದಲೇ ಜೀವ ತೊರೆದನಿಲ್ಲಿ !
ಭಯ ಹುಟ್ಟಿಸಿದ ವೈರಾಣು
ಸದ್ದಿಲ್ಲದೇ ಮಾಡಿದೆ ಹೈರಾಣು
ಸಂಖ್ಯೆ ಕಡಿಮೆಗೊಂಡರೂ
ಧೈರ್ಯವೇ ಸಾಲದು ಬೆರೆತು ಮೆರೆಯಲು !
ಸ್ನೇಹಿತರು ಬಂಧುಗಳು ಬಂದರೂ
ಅನುಮಾನ ಪಡೋದೆ ಸವಾಲು
ಯಾವ ರೂಪದಲ್ಲಿರುವಳೊ ಮಹಾಮಾರಿ
ಅವುಚಿಕೊಳ್ಳುವಳೊ ಯಾಮಾರಿ..!
ಹೇಗೆ ಹುಟ್ಟಿಕೊಂಡಿತೋ ಈ ಕುತ್ತು
ಕ್ಷಣ ಕ್ಷಣಕ್ಕೂ ತಪ್ಪದ ಆಪತ್ತು
ವಿಶ್ವಾಸದ ಆಶಾಕಿರಣ ಚಿಗುರುವುದೆಂದೋ
ಮತ್ತೆ ನಲಿವಿನ ವೇಳೆ ಬರುವುದೆಂದೋ..!
***ಭಾವಪ್ರಿಯ***
Tuesday, January 05, 2021
ನಾಡಪ್ರೇಮಿ
ಕನ್ನಡ ಪ್ರೇಮಿ ನಾನು
ಕನ್ನಡದ ಅಭಿಮಾನಿ
ಕನ್ನಡ ತನವ ಪ್ರದರ್ಶಿಸಲು
ನನಗೆ....,
ಯಾವ ದೊಣ್ಣೆ ನಾಯಕನ ಸವಾಲು ?
ಕನ್ನಡ ಪುಸ್ತಕ ವಿತರಿಸಿ,
ಭಾಷೆ ಬೆಳೆಸುವ ಕಾಲ ಇಂದಿಲ್ಲ..!
ಕನ್ನಡದ ಅನ್ನವ ತಿಂದು,
ನಮ್ಮನ್ನೇ ಹೀಗಳೆವರೆಲ್ಲಾ....!
ಸಾಹಿತ್ಯದ ಗಂಧ ಇರದವರು
ಪಡ್ಡೆ ನೀತಿಯ ಭೋಧಿಸುವರು !
ನೆಲೆ ಕೊಟ್ಟ ನೆಲಕ್ಕೆ .,
ಕಿಂಚಿತ್ತು ಅಭಿಮಾನವಿಲ್ಲದವರು
ಊರು ಬಿಟ್ಟು ಬಂದ ಅಲೆಮಾರಿಗಳು,
ಕನ್ನಡದ ವಿರುದ್ಧವೇ ವಿಜಯೋತ್ಸವ ಆಚರಿಸಿದರು ! 👿
ಕನ್ನಡಿಗರ ಸೌಮ್ಯ ಗುಣವಿದು
ಸಂಚು ಮಾಡುವವರಿಗೆ ದಾರಿ ದೀಪವಾಗಿಹುದು.
ನಮ್ಮ ನೆಲದಲ್ಲಿ ರಾರಾಜಿಸಿದರೆ ನಮ್ಮ ಬಾವುಟ
ದುಷ್ಟರಿಗೇಕೆ ಹೊಟ್ಟೆ ಸಂಕಟ ?
ನಮ್ಮ ಬಾವುಟ ಹಾರಿಸುವುದು ನಮ್ಮ ಹಕ್ಕು,
ಬಿಡಲೊಲ್ಲೆ ಅನ್ನುವರಿಗೆ ಎಲ್ಲಿಯ ಸೊಕ್ಕು.?
ವಿಶಾಲತೆ ತೋರಿದ್ದು ಸಾಕು ಇನ್ನೂ..,
ತಿರುಗಿ ಬೀಳುವುದು ಮುಂದೆ ತೀಕ್ಷಣ ಕಣ್ಣು.
ಮರ್ಕಟನ ಬಾಲ ಮುದುಡಿದರೆ ಚೆನ್ನ
ಇಲ್ಲವಾದರೆ ಬೈಲಿಗೆಳೆವೆವು ಇವರ ಬಣ್ಣ.( ಚೊಣ್ಣ)😉
*********ಸುನಿಲ್ ಅಗಡಿ*********
೩೧-೧೨-೨೦೨೦
Saturday, July 04, 2020
ಧಾರವಾಡ ಮಳಿ...!
Monday, March 02, 2020
Wednesday, February 26, 2020
ಸಾಹುಕಾರ
ನಮ್ಮ ರಾಘು
ಪೂರಿಯೊಳಗಿನ ಸಾಗು
ಪಾನಿ ಪುರಿ, ಬೇಲ್ ಪುರಿಯ
ಪ್ರೀತಿಸುವ ಮಗು
ನಾಲಿಗೆ ರುಚಿಗೆ ಸುತ್ತುತ್ತಾನೆ
ಪ್ರತಿ ಹೋಟೆಲ್ ಸೂರು
ತೃಪ್ತಿ ಆಗದು ಎಷ್ಟೇ ಸುತ್ತಿದರೂ
ದೊಡ್ಡ ದೊಡ್ಡ ಮಾಲು
ಇವನ ಜೊತೆಗೂಡಿ ಕುಲ್ಫಿ
ತಿನ್ನುವರು ಕೆಲವರು
ನೆಗಡಿ ಬಂದೊಡನೆ
ಎಳೆಯುವರು ಇವನ ಕಾಲು
ಈಗ ನಮ್ಮ ರಾಘು
ಮಾಡಿಹನು ಕಛೇರಿಯ ಡಾಯಟ್ಟು
ಬಿಟ್ಟು ಬಿಟ್ಟಿದ್ದಾನೆ ಊಟದಲ್ಲಿ ಸ್ವೀಟು
ಸಂಜೆ ಸ್ನ್ಯಾಕ್ಸಿಗೂ ಹಾಕಿದ್ದಾನೆ ಗೇಟು
ಇನ್ನೂ ವಜ್ಜೆ ಇಳಿಸೋದು.., ನೋ-ಡೌಟು !!
Thursday, February 13, 2020
Wednesday, February 12, 2020
ಮಹಾಸಮರ
ನಡುವೆ ಭಾರಿ ಸಮರ !

ಕಮಲ ಬೀಗಿತ್ತು
ಅಲೆಯ ಸುಳಿಯಲಿ !
ಮೆರೆದಿದ್ದು ಒಣ ಜಂಭ
ಹಚ್ಚಿ ಧರ್ಮದ ಕಿಚ್ಚಿನಲಿ !
ಪೊರಕೆ ಮಾತ್ರ ಮಗ್ನ
ಕಾಯಕದ ಮಡುವಿನಲಿ !
ಜಂಭದ ಕೋಳಿಯ
ಗೋಲಿಗಳ ಮಾತು..
ಪರಿಣಾಮವೇ ಬೀಳಲಿಲ್ಲ
ಪೊರಕೆ ತಾಳಿತ್ತು ಮೌನದ ಗತ್ತು !
ಕೇಡು ತಿರುಗಿ ಬಂತು ಫಲಿತಾಂಶದ ದಿನದಂದು
ಕಮಲ ಮುದುಡಿ, ನೆಲಕಚ್ಚಿತ್ತು..!
ಸೌಮ್ಯತೆ ಮೆರೆದ ಪೊರಕೆ
ಜಯಗಳಿಸಿ,ಕಸವ ದೂಡಿ ಗೂಡಿಸಿತ್ತು !!
Wednesday, January 29, 2020
ಶೂನ್ಯದ ಮಹಿಮೆ
ಶೂನ್ಯನಿಗೂ
ಕೊಡುವುದು ಗಮ್ಮತ್ತು !
ಶೂನ್ಯದಿಂದ
ಉಗಮಿಸಿದ ಪ್ರಾಣ,
ಶ್ರಮಿಸಿ ಪ್ರಯೋಗಿಸು
ಸಂಖ್ಯೆಗಳ ಬಾಣ
ಜೀವನುದ್ದುಕ್ಕೂ
ನೆಮ್ಮದಿಯ ಝಣ-ಝಣ ಕಾಂಚಾಣ !!
ಮುಗಿಲೆತ್ತರಕ್ಕೆ ಹಾರಲಿ ಕೀರ್ತಿ
ಕಷ್ಟ ಪಟ್ಟು ಕಲಿತ ವಿಧ್ಯೆ
ಎಂದಿಗೂ ವ್ಯರ್ಥವಲ್ಲ !
ದಿಟ್ಟ ಧೇಯದಿ ಮುನ್ನಡೆದರೆ
ಬದುಕು ಬವಣೆಯ ಸಾಗರ,
ಮುನ್ನುಗ್ಗಿ ನಡೆ ಸರ-ಸರ !
ಕಾದಿಹುದು ಗುರಿ ಅಲ್ಲಿ…,
ದಾರಿಯೇ ಎದ್ದು ಕಾದಿದೆ ಇಲ್ಲಿ!
ಬಂದು ಬಿಡಬಾರೋ ಓ ಧೀರಾ,
ನಿನ್ನ ಮೇಲೆ ನಂಬಿಕೆ ಅಪಾರ !
ಛಲದಿಂದ ಗೆಲ್ಲುವ ಮೂರ್ತಿ,
ಮುಗಿಲೆತ್ತರಕ್ಕೆ ಹಾರಲಿ ಕೀರ್ತಿ !
Friday, January 17, 2020
ಚಿಗ್ರಿ ಬಂತ ಚಿಗ್ರಿ
ಚಿಗ್ರಿ ಚಿಗ್ರಿ ಅವಳಿನಗರದ ಕುದುರಿ
ಬ್ಯಾಸಿಗ್ಯಾಗ ಹವಾನಿಯಂತ್ರಿತ ಸಫಾರಿ !
ಮಳಿಗಾಲಕ್ಕ ಬೆಚ್ಚಗಿನ ಸವಾರಿ
ನೀರ ನಿಂತ್ರ ಟೋಲ್ ನಾಕಾದಾಗ..., ಚಿಗ್ರಿಗೆ ಬೈಬ್ಯಾಡ್ರಿ !
ದೊಡ್ಡ ದೊಡ್ಡ ಗಾಜಿನ ಕಿಡಕಿ
ಹೊರ್ಗ ನೋಡಾಕ ಕುಂತ್ರ ಇಲ್ಲಾ ಬ್ಯಾಸರ್ಕಿ !ಬಯಲಾಗಿಂದು ಕೇಳಂಗಿಲ್ಲಾ ಯಾವ ಸಪ್ಳಾ
ಆಕಾಶವಾಣ್ಯಾಗಿನ ಚೊಲೋ ಹಾಡ್ ಕೇಳ್ರಲ್ಲಾ !
ಎಲ್ಲಾ ನಿಲ್ದಾಣಕ್ಕೂ ಬರಾಕ ಮೊದಲ
ಒದರಿ ಹೇಳ್ತದ ತಂಗುದಾಣದ ಹೆಸರ !
ಕಂಡಕ್ಟರ ಇಲ್ಲದ ಬಸ್ಸು ಚಾಲಕಂಗ ಓಡಸೋದು ಕಷ್ಟ
ಗಾಡಿ ನಿಲ್ಲಿಸಾಕ..,ಅಲ್ಲಿ ಒಂದು ಗುಂಡಿ ಒತ್ತ !
ಕೈ ಹಾಕಿದ್ದಲ್ಲೆಲ್ಲಾ ನಿಲ್ಲಂಗಿಲ್ಲಾ ನಮ್ಮ ಕುದುರಿ
ಮೈ ಮರ್ತ ಮಲ್ಕೊಂಡೋರು ಧಾರ್ವಾಡ/ಹುಬ್ಬಳ್ಳಿ ತಲುಪೋದು ಖಾತ್ರಿ !!
------------ಭಾವಪ್ರಿಯ------------
Thursday, January 16, 2020
ನಿರೀಕ್ಷಣೆ
ಮನದ ಮುಗಿಲಲ್ಲಿ
ಹಾರುತಿದೆ ಗೆಳತಿ
ಬಣ್ಣ ಬಣ್ಣದ
ಗಾಳಿ ಪಟ
ನಿನ್ನ ಕಂಪನ್ನು ಸೂಸುತಿದೆಪವನ ತಂದ ಸುಗಂಧ !
ದಿನವೂ ಕಾಡುತಿದೆ
ಆ ನಿನ್ನ ಮೊಗವು
ಕರ್ಣಗಳಲ್ಲಿ ತೂಗುವ
ಆ ತೂಗಿಕೆಗಳು...,
ಅಸೂಯೆ ಪಟ್ಟ, ನನ್ನ ಅದರಗಳು
ಕೊರಗುತಿವೆ, ನೀಡಲಾಗದ " ಮುತ್ತುಗಳಿಗೆ " !!
ಹರಿಣಗಳ ನಯನಗಳಂತೆ
ಹೊಳೆವ ಆ ಹೊಳಪು
ಕಾಡುತಿದೆ ಹಗಳಿರುಳಲ್ಲೂ..
ಅಕ್ಷಿಗಳು ಕುಕ್ಕುವಂತೆ
ಇನ್ನು ಈ ಜೀವಕೆ
ಸುಪ್ತಿ ಎಲ್ಲಿ...?
ನಿನ್ನ ತುಂಟು
ನಗೆಯ ಆಟಗಳು...
ಮುಂಗುರುಳ ಸರಿಸುವ ಪರಿ
ಮಡುಹುದಿದೆ ಎನ್ನ
ಜೀವಾಳ....ಇನ್ನೂ ಕಾಯಬೇಕೆಷ್ಟು
ಮಿಡಿತಗಳ ಆವರ್ತಿ..?
ನಿರೀಕ್ಷಿಸುತ್ತಿರುವೆ
ನಿನ್ನ ಬರುವಿಗಾಗಿ..
ಮಿಟುಗದೇ ಕಾದಿವೆ
ನೆತ್ರಗಳು.., ವಿರಾಮವಿಲ್ಲದೆ
ಪ್ರೀಯೆ ..ಇನ್ನೂ ಬಾರದಾಗಿಹೆ
ನೀನೆಲ್ಲಿ ???
****ಭಾವಪ್ರಿಯ****
Tuesday, January 14, 2020
ಸಂಕ್ರಾಂತಿ ಸುಗ್ಗಿ
ಸೂರ್ಯನ ಆರಾಧಿಸುವ ಸುಗ್ಗಿ
ಉತ್ತರಾಯಣದ ಪಯಣದಾರಂಬದ ಸುಗ್ಗಿ
ತೀಕ್ಷಣ ಕಿರಣಗಳ ಚೆಲ್ಲುವ ಸುಗ್ಗಿ
ಚಳಿಯಿಂದ ಬೆಚ್ಚಗೆ ತೆರಳುವಾ ಸುಗ್ಗಿ
ಪೂರ್ವದಲ್ಲಿ ಉದಯಿಸಿದ ಸೂರ್ಯ ಪಶ್ಚಿಮಕ್ಕೆ ತೆರಳೊ ಸುಗ್ಗಿ
ಹಗಲಿರುಳುಗಳು ಸಮಾನವಾದ ಸುಗ್ಗಿ
ಶುಭಕಾರ್ಯಗಳಿಗೆ ಮುಹೂರ್ತದ ಸುಗ್ಗಿ
ಸೂರ್ಯನು ಮಕರ ರಾಶಿಯ ಪ್ರವೇಸಿಸುವ ಸುಗ್ಗಿ ||
ಸುಗ್ಗಿ ಬಂತು ಸುಗ್ಗಿರೈತರ ಫಸಲು ಕಟಾವಿನ ಸುಗ್ಗಿ
ಬೆಳೆದ ಬೆಳೆಯಾ ಪೂಜಿಸೊ ಸುಗ್ಗಿ
ವರ್ಷದಿಂದೊರುಷಕೆ ಬೆಳೆ ವೃದ್ದಿಸೋಕೆ ಸುಗ್ಗಿ
ದನಕರುಗಳ ಸಿಂಗರಿಸಿ, ಮೆರವಣಿಗೆಯ ಸುಗ್ಗಿ
ಕೆಂಡವ ಹಾಸಿ, ಕಿಚ್ಚು ಹಾಯಿಸುವ ಸುಗ್ಗಿ
ಜಲ್ಲಿಕಟ್ಟಿನ ಓಟದ ಸ್ಪರ್ಧೆಯ ಸುಗ್ಗಿ
ಗೆದ್ದ ಗೂಳಿಯ ಸನ್ಮಾನಿಸುವ ಸುಗ್ಗಿ
ಅಯ್ಯಪನ ದರುಶನ,ಮಕರ ಜ್ಯೋತಿಯ ಕಾಣುವ ಸುಗ್ಗಿ ||
ಸುಗ್ಗಿ ಬಂತು ಸುಗ್ಗಿ
ಹೆಣ್ಣುಮಕ್ಕಳ ಸಡಗರದ ಸುಗ್ಗಿ
ಬಣ್ಣಗಳ ತುಂಬಿ ರಂಗೋಲಿ ಬಿಡಿಸುವ ಸುಗ್ಗಿ
ಸಿಹಿ ಸಿಹಿ ತಿನಿಸುಗಳ ಮಾಡುವ ಸುಗ್ಗಿ
ನವವಿವಾಹಿತ ಮಹಿಳೆಗಯರು ಬಾಳೆಹಣ್ಣು ವಿತರಿಸುವ ಸುಗ್ಗಿ
ಮಕ್ಕಳಿಗೆ ಹೊಸ ಬಟ್ಟೆ ಧರಿಸುವ ಸುಗ್ಗಿ
ಗಾಳಿಪಟ ಮಾಡಿ ಎತ್ತರಕ್ಕೆ ಹಾರಿಸುವ ಸುಗ್ಗಿ
ಸಿಹಿ ಕಬ್ಬಿನ ರಸ ಹೀರುವ ಸುಗ್ಗಿ
ಎಳ್ಳು,ಬೆಲ್ಲ, ಸಕ್ಕರೆಯ ಅಚ್ಚು ಸವೆಯುವಾ ಸುಗ್ಗಿ ||
ಜೋಳಿಗೆ
ಮುಕ್ಕಣ್ಣನೇ ನೀಡೊ ವರ ನನಗೆ !
ಶಿಶುಗಳ ಒಲವಿಗೆ ಕಾದಿಹೆನು ದೇವಾ
ಪಡೆದು ಪಾತ್ರನಾಗುವೆ ನಿನ್ನ ಕೃಪೆಗೆ !!
ಮಂಗಳವಾರದಂದು ಮಂಗಳಮೂರ್ತಿಯ ಪೂಜಿಪೆ
ವಿಘ್ನಗಳ ನಿವಾರಿಸೋ ಗಣನಾಥನೆ..!
ಮೋದಕ ಪ್ರೀಯ ಪಾರ್ವತಿ ಕಂದ
ತುಂಬಿ ಬಿಡು ಗಣಪಾ, ನನ್ನ ಜೋಳಿಗೆ !!
ಬುಧುವಾರದಂದು ಮೇಘ ಶಾಮನ ನೆನೆವೆ
ನನ್ನವರ ಒಡಗೂಡಿ ನಿನ್ನ ಆರಾಧಿಸುವೆಹೂವುಗಳ ಕರುಣಿಸೋ ಓ ವಾಸುದೈವನೇ
ನಗೆಯ ನೀಡೋ..,ಆಡಲಿ ಕಂದನು ಎನ್ನ ಮಡಿಲೊಳಗೆ !!
ಗುರುವಾರದಂದು ಗುರುರಾಯರ ಆರಾಧಿಸುವೆ
ತುಂಗೆಯ ತಟದಿ ಮಿಂದು ದರುಶನ ಪಡೆದೆ
ನಿನ್ನ ಬಜನೆಗೆ ಕುಣಿಯೋ ಗೋಪಾಲನ
ದಯಪಾಲಿಸೋ ಬಾಲಕೃಷ್ಣನ ಯಶೋದೆಯಾಗಿ ನಾನು ಬೇಡಿಪೆ !!
ಶುಕ್ರವಾರದಂದು ಮಹಾಲಕ್ಷ್ಮೀಯ ವೃತ
ಕಳಸವ ಶೃಂಗರಿಸಿ, ಸೀರೆಯ ಉಡಿಸಿ
ಭಕ್ತಿಯಿಂದ ವೈಭವದಿ ಪೂಜಿಸುವೆ
ಲಕ್ಷ್ಮೀಯ ಕರುಣಿಸೇ ಸಂತಾನಲಕ್ಷ್ಮಿ, ಭಜಿಸುವೆ ನಾ ಅಷ್ಟಲಕ್ಷ್ಮಿ !!
ಶನಿವಾರದಂದು ಹನುಮನ ನೆನೆಸುವೆ
ಕೇಸರಿನಂದನ, ಅಂಜನಾ ಪ್ರೀಯನೆ
ತಾಯಿಯ ಆರಾಧಕನೆ, ರಾಮ ಅನುಜನೆ
ಆಶಿರ್ವಧಿಸು, ಬಾಲಹನುಮ ಪರಿಯ ಕಂದ ನನದಾಗಿಸು !!
ಭಾನುವಾರ ಮೈಲಾರಲಿಂಗೈಯಾ
ಭಂಡಾರ ಶೋಭಿತ ನೀನಯ್ಯಾ
ಹಾಲ ಅಭಿಷೇಕವ ನೆರವೇರಿಸುವೆ...
ಹಾಲ್ಗೆನ್ನೆಯ ಕಂದನ ಕರುಣಿಸಯ್ಯಾ...!
ವಿಧ ವಿಧ ದೇವರ ಬೇಡುವೆನಯ್ಯಾ...,
ಕರುಣಿಸಿ ಕಂದನ ನನಗಯ್ಯಾ
ತಾಯಿಯ ಮಡಿಲ ತುಂಬಿರಯ್ಯಾ....,
ಕೃಪಾಕರಿಸಿರೇ ದೇವರೆಲ್ಲಾ...!!
Monday, January 13, 2020
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಅಪ್ಪು - ಮರೆಯದ ಚೇತನ --------------------- ಒಂದು ಮರೆಯಾಗಲಾರದ ಚೇತನ.. ಚಂದನ ವನದ ಸೌಗಂಧದ ಕುಸುಮ ಹೃದಯಗಳ ಆಳಿದ ಧೀಮಂತ ವಿನಯತೆ ಭಾವ ಸದಾ ಜೀವಂತ ಮನುಷತ್ವವೂ ನಾಚ...
-
ಕತ್ತಲು ಕವಿದಾಗ ತಿಳಿ-ಬಿಳಿ ನೆರಳಲ್ಲಿ ಚಂದ್ರಮುಖಿ ದೀಪದ ಬೆಳಕಿನಲ್ಲಿ ನಗೆ ಚೆಲ್ಲೊ ಮಂದಸ್ಮ್ರತಿ ನಯನಗಳು ಮನೋಹರ ಘಾಡ ನೆರಳೊತ್ತ ಗವಿ ಪ್ರೀತಿ ಮೋಹದ ಸಾಗರ ಪಂಚಮ ಪ್ರೀತಮ...






