Friday, January 13, 2023

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ

ಧ್ವನಿ ವರ್ದಕ ಕಿವಿ ಗುಂಡಿಗಳು


ಸಂಗೀತದ ಸವಿಯುವ ಕಿವಿಯ

ಅಲಂಕರಿಸಿದೆ ಗವಿಯ ಮುಚ್ಚಿ


ಹಾಡಿನ ಸಾಲು ಆಲಿಸಿದರೇನು

ಮನದ ಕಲಹ ಅಳಿಯುವುದೇನು ?


ಗಲಾಟೆಯ ಸಂತೆ ನಡೆದಿದೆಯಂತೆ

ಬುಟ್ಟಿಯ ತುಂಬೆಲ್ಲಾ ಜೇನು ಗೂಡು..


ಚಲಿಸುವ ಸಮಯ ನಿಲ್ಲದು ಎಂದೂ

ಎದೆ ಬಡಿತವೇ ನಿಂತೊಡನೆ ಮರಳಿ ಜೀವ ಬರುವುದೇನು ?

ನನ್ನವಳ ಮಂದಹಾಸ...


ಕತ್ತಲು ಕವಿದಾಗ 

ತಿಳಿ-ಬಿಳಿ ನೆರಳಲ್ಲಿ ಚಂದ್ರಮುಖಿ


ದೀಪದ ಬೆಳಕಿನಲ್ಲಿ

ನಗೆ ಚೆಲ್ಲೊ ಮಂದಸ್ಮ್ರತಿ


ನಯನಗಳು ಮನೋಹರ

ಘಾಡ ನೆರಳೊತ್ತ ಗವಿ


ಪ್ರೀತಿ ಮೋಹದ ಸಾಗರ

ಪಂಚಮ ಪ್ರೀತಮ್ಮರೇ ಸಾರ


ಮಮತೆ ವಾತ್ಸಲ್ಯದ ಸ್ವರೂಪ

ಸುಖಿ ಜೀವನದ ಸಂಕೇತ


ಕೂಡಿ ಪೋಣಿಸದರೆ ಮೊಗ್ಗು

ಸುಪ್ಪತಿಗೆಗೆ  ಇಲ್ಲ ಸುಕ್ಕು


-ಭಾವಪ್ರೀಯ


Monday, November 29, 2021

ಅಪ್ಪು - ಮರೆಯದ ಚೇತನ

 ಅಪ್ಪು - ಮರೆಯದ ಚೇತನ

---------------------
ಒಂದು ಮರೆಯಾಗಲಾರದ ಚೇತನ..
ಚಂದನ ವನದ ಸೌಗಂಧದ ಕುಸುಮ
ಹೃದಯಗಳ ಆಳಿದ ಧೀಮಂತ
ವಿನಯತೆ ಭಾವ ಸದಾ ಜೀವಂತ
ಮನುಷತ್ವವೂ ನಾಚುವಂತ ಶ್ರೀಮಂತ
ಕಲಿಯುಗದಲ್ಲಿ ಮತ್ಯಾರಿಹರು ಅವನಷ್ಟು ಸೌಜನ್ಯವಂತ
ನೊಂದವರ ಪಾಲಿಗಿವನು ಸಂಜೀವಿನಿ
ಸದಾ ಕೈ ಎತ್ತಿ ಸಲಹಿದಾ ವೀರಾಗ್ರಣಿ
ಅಪ್ಪು ನಿನ್ನ ಕಾಣದಾ ಜಗತ್ತು
ನಿನ್ನದೇ ಆದರ್ಶಗಳ ಸಂಪತ್ತು
ಸೌಮ್ಯ ಗುಣ ವ್ಯಕ್ತಿತ್ವವೇ ಮುಕುಟ,
ಮುಗಿಸಿ ಹೊರಟೇ ಹೋದನಲ್ಲ ಆಟ
ನೀನಿಲ್ಲದ ಕ್ಷಣಗಳು ಯಾರಿಗೂ ಬೇಡಿತ್ತು.
ನಿನ್ನ ಕಳೆದುಕೊಂಡು ನಮಗೆ ನುಂಗಲಾರದ ತುತ್ತು.
------ ಭಾವುಕ ಮನ ---------



ಆಶಯದ ನಮನ


 ಆಶಯದ ನಮನ

==========
ಅಪ್ಪು ಅಪ್ಪು ನಂಬಲಿ ಹೇಗೆ ನೀನಿಲ್ಲದ ಹೊತ್ತು.....
ಆ ಕ್ಷಣ ತಂದ ನಿನ್ನ ಜೀವಕ್ಕೆ ಆಪತ್ತು.....
ಕ್ಷಮಿಸಲಿ ಹೇಗೆ....?
ಜೀವಿಸುವೆವು ಹೇಗೆ ನಿನ್ನ ಮರೆತು...!
ಆ ಯಮನ ಸುಳಿವು ಸಿಗಲಿಲ್ಲ...
ಆ ಯಾತ್ರೆ ನಿನ್ನದು ಅಂತಿಮವಾಯಿತಲ್ಲ...
ಕರೆದೊಯ್ದ ಕಾಲ ಅದೆಷ್ಟು ಕ್ರೂರಿ....
ಸ್ತಬ್ದ ಹೃದಯಕ್ಕೆ ಬೇಡುತ್ತಿದ್ದೆ ಮಣಕಾಲು ಊರಿ...
ಸಾವು ಅಪ್ಪುವ ಮುನ್ನವೇ ಮತ್ತೊಮ್ಮೆ ಬಡಿಬಡಿದು ಓಡಲು...
ಬರಿದಾಗಿಸ ಬೇಡ....ಓ ಜೀವಾಳವೇ.... ಕರುನಾಡ ಒಡಲು...!!
--------ಮತ್ತೆ ಹುಟ್ಟಿ ‌ಬಾ ಅಪ್ಪು -------

Tuesday, August 10, 2021

ಡೊಂಬ್ರಾಟ

ಶುರುವಾಯಿತು ರಾಜಕಾರಣಿಗಳ ಡೊಂಬ್ರಾಟ ...

ಮಂತ್ರಿ, ಖಾತೆ, ಪದವಿಗಳಿಗೆ ಇವರ ಕಿತ್ತಾಟ,

ಇವರ ಆಟದ ನಡುವೆ ಕೊರೋನಾದ ಮಿಂಚಿನ ಓಟ,

ಮುಗಿಯುವುದಿಲ್ಲ ಜನರ ನರಳಾಟ,

ಜೀವನವೆಲ್ಲಾ ದುಃಖದಿಂದ ಪರದಾಟ,

ಜನರೇ ಎಚ್ಚೆತ್ತುಕೊಳ್ಳಿ....ಹೇಳಿ ರಾಜಕೀಯಕ್ಕೆ ಟಾಟಾ !

ಪ್ರಜೆಗಳೇ ನಡೆಸಲಿ ಪ್ರಜಾಕೀಯದ ಒಕ್ಕೂಟ

ತೊಲಗಿಸೋಣ ರಾಜಕಾರಣ,

ಪ್ರಜಾಕೀಯಕ್ಕೆ ನಮ್ಮ ಬೆಂಬಲ ನೀಡೋಣ

ಪ್ರಜೇಗಳಿಂದಲೇ ನಮ್ಮ ಸ್ವಚ್ಛಂದ ನಾಡು, ನುಡಿ, ದೇಶವ ಕಟ್ಟೋಣ !!

#ಜೈಪ್ರಜಾಕೀಯ #ಜೈಪ್ರಜಾಕಾರಣ

ಸಿಹಿ ನೆನಪೆ ಸ್ನೇಹ....

ಗೆಳೆತನ ಅನ್ನುವುದು ಅಮೂಲ್ಯ ಸಂಪತ್ತು

ಗೆಳೆತನವು ಬಾಳಿನ ಹೊಸ ಜಗತ್ತು !

ಜೊತೆಯಲ್ಲಿ ಬೆರೆಯುವ ಕ್ಷಣಗಳೇ ಸೊಗಸು
ಕೂಡಿ ಆಡಿ ನಲಿದ ದಿನಗಳೇ ಸಿಹಿ ಸವಿ ನೆನಪು !

ಗೆಳೆತನ ಜೀವನದ ನವ ಚೇತನ
ದುಖಃದಲ್ಲಿಯೂ ಧೈರ್ಯ ತುಂಬುವ ಮಂಥನ !

ಜಾತಿ ಮತ ಧರ್ಮವಿರದ ಸ್ನೇಹಕೂಟ
ಇದು ಎಲ್ಲದಕ್ಕೂ ಮಿಗಿಲಾದ ಒಕ್ಕೂಟ !

ಧ್ವನಿಯಲ್ಲಿ ಧ್ವನಿ ಗೂಡಿಸುವ ಪರ್ವ
ಉಸಿರು ಅಳಿದರೂ ಅಚಲವಾಗಿರುವಂತಹ ಮರ್ಮ !

ನಿರಂತರ ಸಾಗುವ ಬೃಹತ್ ನೌಕೆ
ಇದಕ್ಕೆ ಸರಿ ಸಾಟಿಯೇ ಅಪಾರ ನಂಬಿಕೆ !

ಸೂರ್ಯ ಚಂದ್ರರಿರುವ ಒರೆಗೂ ಮುಗಿಯದ ಈ ಬಂಧ, 
ಜೀವನದಲ್ಲಿನ ಸವಿಯಾದ ಅನುಬಂಧ !!

*****ಭಾವಪ್ರೀಯ*****



Monday, January 25, 2021

ಆಶಾಕಿರಣ

ಬಿಗಿ ಹಿಡಿದ ಕುಪ್ಪಸದ ಉಸಿರು

ನಿಶ್ವಾಸವೂ ಕಠೀಣವಿಂದು

ಕಲ್ಮಶ, ವೈರಾಣು ಕೂಡಿದ ಗಾಳಿಯಲ್ಲಿ

ಉಸಿರಾಟವೇ ಕಷ್ಟ ಈ ಸಮಯದಲ್ಲಿ !


ಲಸಿಕೆ ಮೂಡಿಸಿದ ಭರವಸೆ

ಜವಾಬ್ದಾರಿ ಹೊರುವರು ಯಾರಿಲ್ಲಿ ?

ಆರೋಗ್ಯವಾಗಿದ್ದ ಮನುಷ್ಯ ಇಂದು

ತಡೆಮದ್ದಿನಿಂದಲೇ ಜೀವ ತೊರೆದನಿಲ್ಲಿ !


ಭಯ ಹುಟ್ಟಿಸಿದ ವೈರಾಣು

ಸದ್ದಿಲ್ಲದೇ ಮಾಡಿದೆ ಹೈರಾಣು

ಸಂಖ್ಯೆ ಕಡಿಮೆಗೊಂಡರೂ

ಧೈರ್ಯವೇ ಸಾಲದು ಬೆರೆತು ಮೆರೆಯಲು !


ಸ್ನೇಹಿತರು ಬಂಧುಗಳು ಬಂದರೂ

ಅನುಮಾನ ಪಡೋದೆ ಸವಾಲು

ಯಾವ ರೂಪದಲ್ಲಿರುವಳೊ ಮಹಾಮಾರಿ

ಅವುಚಿಕೊಳ್ಳುವಳೊ ಯಾಮಾರಿ..!


ಹೇಗೆ ಹುಟ್ಟಿಕೊಂಡಿತೋ ಈ ಕುತ್ತು

ಕ್ಷಣ ಕ್ಷಣಕ್ಕೂ ತಪ್ಪದ ಆಪತ್ತು

ವಿಶ್ವಾಸದ ಆಶಾಕಿರಣ ಚಿಗುರುವುದೆಂದೋ

ಮತ್ತೆ ನಲಿವಿನ ವೇಳೆ ಬರುವುದೆಂದೋ..!


***ಭಾವಪ್ರಿಯ***

Tuesday, January 05, 2021

ನಾಡಪ್ರೇಮಿ


ಕನ್ನಡ ಪ್ರೇಮಿ ನಾನು

ಕನ್ನಡದ ಅಭಿಮಾನಿ 

ಕನ್ನಡ ತನವ ಪ್ರದರ್ಶಿಸಲು

ನನಗೆ...., 

ಯಾವ ದೊಣ್ಣೆ ನಾಯಕನ ಸವಾಲು ?

ಕನ್ನಡ ಪುಸ್ತಕ ವಿತರಿಸಿ,

 ಭಾಷೆ ಬೆಳೆಸುವ ಕಾಲ ಇಂದಿಲ್ಲ..!

ಕನ್ನಡದ ಅನ್ನವ ತಿಂದು, 

ನಮ್ಮನ್ನೇ ಹೀಗಳೆವರೆಲ್ಲಾ....!

ಸಾಹಿತ್ಯದ ಗಂಧ ಇರದವರು

ಪಡ್ಡೆ ನೀತಿಯ ಭೋಧಿಸುವರು !

ನೆಲೆ ಕೊಟ್ಟ ನೆಲಕ್ಕೆ ., 

ಕಿಂಚಿತ್ತು ಅಭಿಮಾನವಿಲ್ಲದವರು

ಊರು ಬಿಟ್ಟು ಬಂದ ಅಲೆಮಾರಿಗಳು,

ಕನ್ನಡದ ವಿರುದ್ಧವೇ ವಿಜಯೋತ್ಸವ ಆಚರಿಸಿದರು ! 👿

ಕನ್ನಡಿಗರ ಸೌಮ್ಯ ಗುಣವಿದು

ಸಂಚು ಮಾಡುವವರಿಗೆ ದಾರಿ ದೀಪವಾಗಿಹುದು. 

ನಮ್ಮ ನೆಲದಲ್ಲಿ ರಾರಾಜಿಸಿದರೆ ನಮ್ಮ ಬಾವುಟ

ದುಷ್ಟರಿಗೇಕೆ ಹೊಟ್ಟೆ ಸಂಕಟ ?

ನಮ್ಮ ಬಾವುಟ ಹಾರಿಸುವುದು ನಮ್ಮ ಹಕ್ಕು,

ಬಿಡಲೊಲ್ಲೆ ಅನ್ನುವರಿಗೆ ಎಲ್ಲಿಯ ಸೊಕ್ಕು.?

ವಿಶಾಲತೆ ತೋರಿದ್ದು ಸಾಕು ಇನ್ನೂ..,

ತಿರುಗಿ ಬೀಳುವುದು ಮುಂದೆ ತೀಕ್ಷಣ ಕಣ್ಣು. 

ಮರ್ಕಟನ ಬಾಲ ಮುದುಡಿದರೆ ಚೆನ್ನ

ಇಲ್ಲವಾದರೆ ಬೈಲಿಗೆಳೆವೆವು ಇವರ ಬಣ್ಣ.( ಚೊಣ್ಣ)😉


*********ಸುನಿಲ್ ಅಗಡಿ*********

೩೧-೧೨-೨೦೨೦

Saturday, July 04, 2020

ಧಾರವಾಡ ಮಳಿ...!


ಧಾರವಾಡದಾಗ ಬಂದ್ರ ಮಳಿ
ಊರ ಓಣಿ ತುಂಬಿದ ಹೋಳಿ..!!
ಸಂತಿ ಪ್ಯಾಟ್ಯಾಗ ರೊಜ್ಜಿನ ಥಳಿ
ಗಡಗಡ ನಡುಗಿಸುವ ಚಳಿ..!!

ಬೀಸಿ ಹೊರಟೈತಿ ತಣ್ಣನೆ ಗಾಳಿ
ಬುಡಮೇಲಾಗಿ ಬಿದ್ದಾವ ಮರ-ಕಂಬ..!!
ಭರ್ ಎಂದು ಹೋದಾಗ ಮೋಟರ್ ಗಾಡಿ
ತೂರಿ ಸಿಡಿದೈತಿ ದೂರ ರಾಡಿ..!!

ಜಿಟಿ ಜಿಟಿ ಮಳ್ಯಾಗ ನೆನಕೊಂಡು ಹೊರಟಾರ
ಬೆನ್ನಮ್ಯಾಗ ಪಾಟೀಚೀಲ ಹೊತ್ತ ಹುಡುಗೂರು..!!
ಕುಣಿ ಕುಣಿದು ಜಿಗದಾನ ರೈತ
ಉತ್ತಿ-ಬಿತ್ತುವ ಕಾಯಕವ ನೆನಸ್ಕೊಂಡು..!!

ಪುಟ್ಯಾಗ ಕಾಯಿಪಲ್ಲೆ ಮಾರಕಿ ಪಾಪ
ಪೋಲಿಸ್ ಮಾಮಾಗ ಹಾಕ್ಯಾಳ ಶಾಪ..!!
ಹಣ್ಣ ಮಾರವ ವ್ಯಾಪಾರಿಯೊಬ್ಬ
ಗಿರಾಕಿಯ ಬರಾಕ ಹಾಕ್ಯಾನ ಜೊಪ್ಪ..!!

ಭಿಕ್ಷಕನಿಗೂ ಹೊಟ್ಟೆ ಪಾಡು
ಹುಡುಕ್ಕೊಂಡು ಓಡ್ಯಾನ ಸೂರಿನ ಜಾಡು..!!
ಮಳಿ ಬಂದ್ರ ಧಾರವಾಡದಾಗ
ಮಂದಿ ಬದುಕ ಮೆರವಣಿಗ್ಯಾಗ..!!




Monday, March 02, 2020

ತ್ಯಾಗಿ

ಪುಷ್ಪ ಅರಳುವ ಮುಂಗಡವೇ
ಸಾಲು ಗಟ್ಟಿದೆ ಹನಿಗಳ ಪಂಕ್ತಿ
ಕಾದು ಕಾದು ತಾವೇ ಕರಗಿದವು
ಸೂರ್ಯನ ಕಿರಣಕೆ ಅರಳಿದ ಸುಮ,
ಮಂಜಿನ ಹನಿಯ ಪ್ರೀತಿ ಕಾಣಲೇ ಇಲ್ಲ.

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...